Karnataka Times
Trending Stories, Viral News, Gossips & Everything in Kannada

Mumbai Indians: 3 ಪಂದ್ಯ ಸೋತ ಮುಂಬೈಗೆ ಈ ದೈತ್ಯ ಆಟಗಾರನ ಕಮ್ ಬ್ಯಾಕ್! ಎದುರಾಳಿಗಳಿಗೆ ಸಂಕಷ್ಟ.

advertisement

ಇನ್ನು 2024ರ ಐಪಿಎಲ್ ಸೀಸನ್ ಸ್ಟಾರ್ಟ್ ಆಗಿ ಈಗಾಗಲೇ ಹಲವು ಪಂದ್ಯಗಳು ಮುಗಿಯುತ್ತಾ ಬಂದಿವೆ ಮಾರ್ಚ್ 22 ರಂದು ಸ್ಟಾರ್ಟ್ ಆದಂತಹ ಐಪಿಎಲ್ ಪಂದ್ಯದಲ್ಲಿ ಕೆಲವರು ನಾನಾ ಕಾರಣಗಳಿಂದ ಮತ್ತು ಆರೋಗ್ಯದ ಸಮಸ್ಯೆಯಿಂದ ಬರಲಾರದೆ ಪಂದ್ಯದಿಂದ ಹೊರಗುಳಿದ್ದಿದರು. ಇನ್ನು ಮುಂಬೈ ಇಂಡಿಯನ್ಸ್ (Mumbai Indians) ತಂಡದ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಂತಹ ಸೂರ್ಯ ಕುಮಾರ್ ಯಾದವ್ (Surya Kumar Yadav) ಅವರು ಫಿಟ್ಟಾಗಿಲ್ಲ ಎಂಬ ಕಾರಣದಿಂದಾಗಿ ಅವರನ್ನು ಐಪಿಎಲ್ ಸೀಸನ್ ನಿಂದ ಹೊರಗುಳಿದ್ದಿದರು.

ಇನ್ನು ಹಲವು ವರದಿಗಳ ಅನುಸಾರ ಇದೀಗ ಸೂರ್ಯಕುಮಾರ್ ಯಾದವ್ ಅವರು ಮತ್ತೆ ಮುಂಬೈ ಇಂಡಿಯನ್ಸ್ (Mumbai Indians) ಟೀಮ್ ಗೆ ಆಡಲು ಸೇರ್ಪಡೆ ಆಗುತ್ತಿದ್ದಾರೆ ಎಂಬ ಸುದ್ದಿ ಸಿಕ್ಕಿದೆ. ಇನ್ನು ಈಗಾಗಲೇ ಮುಂಬೈ ಇಂಡಿಯನ್ಸ್ ಆಡಿರುವಂತಹ ಮೂರು ಪಂದ್ಯಗಳಲ್ಲಿಯೂ ಕೂಡ ಸೋತಿದೆ ಇನ್ನು ಐದು ಬಾರಿ ಐಪಿಎಲ್ ಸೀಸನ್ ಗೆದ್ದಂತಹ ಮುಂಬೈ ಇಂಡಿಯನ್ಸ್ ಗೆದ್ದಿದ್ದ 5 ಬಾರಿಯೂ ಕೂಡ ರೋಹಿತ್ ಶರ್ಮಾ ಅವರು ಕ್ಯಾಪ್ಟನ್ ಆಗಿ ಇದ್ದರು.

ಆದರೆ ಯಾವ ಕಾರಣದಿಂದ ತಿಳಿಯದೆ ರೋಹಿತ್ ಶರ್ಮ (Rohit Sharma) ಅವರನ್ನು ಕ್ಯಾಪ್ಟನ್ ಇಂದ ಇಳಿಸಲಾಯಿತು. ಮತ್ತು ಅವರ ಬದಲಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಮುಂಬೈ ಇಂಡಿಯನ್ಸ್ ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿತ್ತು. ಇನ್ನು ಇದೀಗ ಅದರಿಂದ ಹಲವಾರು ರೀತಿಯಾದಂತಹ ವಿವಾದಗಳ ನಡುವೆ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮ ಅವರ ಅಭಿಮಾನಿಗಳಿಂದಲೂ ಕೂಡಾ ಹಲವು ಅವಮಾನಗಳಿಗೆ ಒಳಗಾದರು.

 

advertisement

Image Source: Onmanorama

 

ಇನ್ನು ಇದರ ಬೆನ್ನೆಲೆ ಪಂದ್ಯಗಳಲ್ಲಿ ಸರಿಯಾಗಿ ಪ್ರದರ್ಶನ ನೀಡಲಾಗದೆ, ಪಂದ್ಯಗಳನ್ನು ಸತತವಾಗಿ ಸೋಲುತ್ತಾ ಬರುತ್ತಿರುವಂತಹ ಮುಂಬೈ ಇಂಡಿಯನ್ಸ್  ತಂಡಕ್ಕೆ ಇದೀಗ ಹೊಸ ಆಸರೆ ಎಂಬಂತೆ ಸೂರ್ಯ ಕುಮಾರ್ ಯಾದವ್ (Surya Kumar Yadav) ಅವರ ಎಂಟ್ರಿ ಆಗುತ್ತಿದೆ ಎಂದು ಹಲವು ವರದಿಗಳು ಮಾಹಿತಿಯನ್ನು ನೀಡಿದೆ. ಇನ್ನು ಇಷ್ಟು ದಿನ NCA ರಿಹ್ಯಾಬ್ ಸೆಂಟರ್ ಅಲ್ಲಿ ಇದ್ದಂತಹ ಸೂರ್ಯ ಕುಮಾರ್ ಯಾದವ್ ಅವರು ಇದೀಗ NCA ಇಂದ ಪೂರ್ಣ ಫೀಟ್ ಆಗಿದ್ದಾರೆ ಎಂಬ ಸುದ್ದಿಯೊಂದಿಗೆ ಮತ್ತೆ ಮುಂಬೈ ಇಂಡಿಯನ್ಸ್ ಗೆ ಸೇರ್ಪಡೆ ಆಗುತ್ತಿದ್ದಾರೆ.

 

Image Source: CNB TV

 

ಇನ್ನು ಮುಂಬರುವ ದಿನಗಳಲ್ಲಿ ಸೂರ್ಯಕುಮಾರ್ ಯಾದವ್ ವರನ್ನು ರಿಪ್ಲೇಸ್ ಮಾಡಲಿದ್ದಾರೆ ಎಂಬುದು ಕೂಡ ತಿಳಿದು ಬಂದಿದ್ದು, ಮುಂಬರುವ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಇದರ ಸಲುವಾಗಿ ಗೆಲ್ಲುತ್ತದೆ ಎಂಬ ನಿರೀಕ್ಷೆಯನ್ನು ತಂಡದ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಯಾವಾಗ ತಂಡ ಸೇರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

advertisement

Leave A Reply

Your email address will not be published.