Karnataka Times
Trending Stories, Viral News, Gossips & Everything in Kannada

Free Solar Stove: ಮಹಿಳೆಯರಿಗೆ ಕೇಂದ್ರ ಸರಕಾರದ ಹೊಸ ಭಾಗ್ಯ! ಉಚಿತ ಸೋಲಾರ್ ಸ್ಟವ್, ಈ ರೀತಿ ಅರ್ಜಿ ಸಲ್ಲಿಸಿ ಕೂಡಲೇ.

advertisement

ಇಂದು ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆಯಂತು ಗಗನಕ್ಕೆ ಏರಿದೆ. ಹೌದು ತರಕಾರಿ, ಹಣ್ಣು, ಹಾಲು, ಗ್ಯಾಸ್ ಇತ್ಯಾದಿ ಬೆಲೆಯಂತೂ ಡಬಲ್ ಆಗಿದೆ. ಹಾಗಾಗಿ ಬಡ ವರ್ಗದ ಜನತೆಗೆ ಸಹಕಾರಿ ಯಾಗುವ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆ ರೂಪಿಸುತ್ತಾ ಬಂದಿದೆ. ಅದರಲ್ಲೂ ಮಹಿಳೆಯರನ್ನು ಪ್ರೋತ್ಸಾಹ ಮಾಡಲು ಸರಕಾರ ಹಲವು ರೀತಿಯ ಯೋಜನೆಗಳನ್ನು ‌ರೂಪಿಸುತ್ತಲೆ ಬಂದಿದೆ. ಕೇಂದ್ರ ಸರಕಾರ (Central Govt)ವು ಈಗಾಗಲೇ ಮಹಿಳೆಯರಿಗೆ ಅಡುಗೆ ಕೆಲಸ ಸುಲಭವಾಗಲಿ‌ ಎಂದೇ ಉಚಿತ ಗ್ಯಾಸ್ ಸ್ಟವ್ (Free Solar Stove) ಒದಗಿಸುವ ಮೂಲಕ ಸಬ್ಸಿಡಿ ಮೊತ್ತ ಕೂಡ ನೀಡುತ್ತಿದೆ.‌ ಇದೀಗ ಕೇಂದ್ರ ಸರ್ಕಾರವು ಮಹಿಳೆಯರನ್ನು ಮತ್ತಷ್ಟು ಹುರಿದುಂಬಿಸಲು ಉಚಿತ ಉಚಿತವಾಗಿ ಸೌರ ಒಲೆ (Free Solar Stove) ಗಳನ್ನು ಒದಗಿಸುತ್ತದೆ.

ಯಾವುದು ಈ ಯೋಜನೆ?

 

Image Source: IndiaToday

 

ಈ ಯೋಜನೆಯ ಹೆಸರು ಸೌರ ಚುಲ್ಹಾ ಯೋಜನೆ (Solar Chulha Yojana) ಎಂದಾಗಿದ್ದು, ಬಡ ಮತ್ತು ಹಿಂದುಳಿದ ವರ್ಗದ ಮಹಿಳೆಯರನ್ನು ಉತ್ತೇಜನ ಮಾಡುವುದೇ ಈ ಯೋಜನೆಯ ಗುರಿಯಾಗಿದೆ. ಗ್ಯಾಸ್ ಸಿಲಿಂಡರ್‌ಗಳನ್ನು ಮಿತವಾಗಿ ಬಳಸುವ ಜೊತೆಗೆ ಅಡುಗೆ ಕೆಲಸಕ್ಕೆ ಈ ಸೋಲಾರ್ ಸ್ಟವ್ (Solar Stove) ಅನ್ನು ಮಹಿಳೆಯರು ಬಳಕೆ ಮಾಡಬಹುದು. ಈ ಸೌರ ಒಲೆಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಯಾರು ಮಾಡಿದ್ದು ಇದರಲ್ಲಿ‌ ಸಿಂಗಲ್ ಬರ್ನರ್, ಡಬಲ್ ಬರ್ನರ್ ಕುಕ್ ಟಾಪ್ ಮತ್ತು ಡಬಲ್ ಬರ್ನರ್ ಹೈಬ್ರಿಡ್ ಕುಕ್ ಟಾಪ್ ಸೇರಿದಂತೆ ಮೂರು ರೀತಿಯ ಸೌರ ಒಲೆಗಳನ್ನು ತಯಾರು ಮಾಡಿದೆ.

 

advertisement

Image Source: Yojana Tantra

 

ಅರ್ಜಿ ಸಲ್ಲಿಕೆ ಮಾಡಲು ಈ ದಾಖಲೆ ಬೇಕು:

  • Aadhaar Card
  • PAN Card
  • Ration Card
  • Bank Pass Book
  • Mobile No.
  • Photo etc

ಹೀಗೆ ಅರ್ಜಿ ಸಲ್ಲಿಸಿ:

ಮೊದಲಿಗೆ ಇಂಡಿಯನ್ ಆಯಿಲ್ ‌ https://www.indianoil.in ಈ ಸೈಟ್ ಗೆ ಭೇಟಿ ನೀಡುವ ‌ಮೂಲಕ, ಇಂಡಿಯನ್ ಆಯಿಲ್ ಆಯ್ಕೆಗೆ ತೆರಳಿ , ಇಲ್ಲಿ ಭಾರತೀಯ ಸೌರ ಅಡುಗೆ ಎಂಬ ಆಯ್ಕೆಯು ಇರಲಿದೆ.‌ ಇದನ್ನು ತೆರೆದ ನಂತರ ಅರ್ಜಿ ಭರ್ತಿ ಮಾಡಲು ಅಪ್ಲಿಕೇಷನ್ ಇರಲಿದೆ. ಈ ಅಪ್ಲಿಕೇಶನ್ ನಲ್ಲಿ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ. ನಂತರ ಬೇಕಾದ ದಾಖಲೆಗಳನ್ನು ಸ್ಕ್ಯಾನ್ ಆಪ್ ಲೋಡ್ ಮಾಡಿದ್ರೆ ಸಾಕು‌.ನಿಮ್ಮ ಅರ್ಜಿ ನೋಂದಣಿ ಯಾಗುತ್ತದೆ.

advertisement

Leave A Reply

Your email address will not be published.