Karnataka Times
Trending Stories, Viral News, Gossips & Everything in Kannada

Agricultural Income: ಒಂದು ಸೆಂಟ್ಸ್ ನಿಂದ ಎಕರೆಗಟ್ಟಲೆ ಕೃಷಿ ಭೂಮಿ ಇದ್ದವರಿಗೂ ಸಿಹಿಸುದ್ದಿ! ಭಾರತ ಸರ್ಕಾರದ ನಿರ್ಧಾರ

advertisement

Agricultural Income in Income Tax: ಭಾರತ ಕೃಷಿಯ ಮೇಲೆ ಅವಲಂಬನೆ ಆಗಿರುವಂತಹ ದೇಶ, ಇಲ್ಲಿ ಶೇಕಡ 70ರಷ್ಟು ಜನರು ಕೃಷಿಯನ್ನು ನಂಬಿಕೊಂಡು ಅದರಿಂದ ಬರುವಂತಹ ಆದಾಯದಲ್ಲಿ ತಮ್ಮ ಜೀವನ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಸರ್ಕಾರ ಕೃಷಿ ಮೇಲಿನ ಆದಾಯ ತೆರಿಗೆ(income tax)ಯನ್ನು ಸಂಪೂರ್ಣ ತೆಗೆದು ಹಾಕಿದ್ದು, ಕೃಷಿಯಿಂದ ಹೆಚ್ಚಿನ ವರಮಾನ ಇದ್ದರೂ ಅದಕ್ಕೆ ಯಾವುದೇ ರೀತಿಯ ತೆರಿಗೆ ಕಟ್ಟುವಂತಹ ಅವಶ್ಯಕತೆ ಇರುವುದಿಲ್ಲ. ಹಾಗಾದ್ರೆ ಯಾವೆಲ್ಲ ಕೃಷಿಗೆ ಇದು ಅನ್ವಯವಾಗುತ್ತದೆ? ಯಾವ ಕೃಷಿಗಳಿಗೆ ಅನ್ವಯಿಸುವುದಿಲ್ಲ? ಹಾಗೂ ಕೃಷಿಯಿಂದ ಬರುವ ಆದಾಯದ ಮೇಲಿನ ತೆರಿಗೆ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಯಿರಿ.

ಭಾರತದಲ್ಲಿ ಕೃಷಿ ಆದಾಯ ತೆರಿಗೆ

1981ರ ಆದಾಯ ತೆರಿಗೆ ಕಾಯ್ದೆಯ(income tax act) ಸೆಕ್ಷನ್ 10(1) ಅಡಿಯಲ್ಲಿ ಕೃಷಿ ಅಥವಾ ಕೃಷಿ ಭೂಮಿಯಿಂದ ಬರುವ ಆದಾಯದ ಮೇಲಿನ ತೆರಿಗೆಯು ಉಚಿತವಾಗಿದೆ, ಹಾಗೂ ಆದಾಯ ತೆರಿಗೆ ಕಾಯ್ದೆಯು ಕೃಷಿಯಿಂದ ಬರುವ ಆದಾಯದ ಮೇಲೆ ಪರೋಕ್ಷ ತೆರಿಗೆಯನ್ನು ವಿಧಿಸುವ ಮಾರ್ಗವನ್ನು ಸ್ಥಾಪಿಸಿದೆ.

Agricultural Income in Income Tax: Exemption Limit,
Image Source: Public Tv

ಯಾವ ಕೃಷಿ ಚಟುವಟಿಕೆಗಳಿಗೆ ತೆರಿಗೆ ಇರುವುದಿಲ್ಲ?

•ಕೃಷಿ ಭೂಮಿ ಬಾಡಿಗೆ ಆದಾಯ- ನಿಮ್ಮ ಬಳಿ ಇರುವಂತಹ ಕೃಷಿ ಭೂಮಿಯನ್ನು ಇತರರಿಗೆ ಬಾಡಿಗೆ ನೀಡಿ ಅದರಿಂದ ಬರುವಂತಹ ಹಣಕ್ಕೆ ತೆರಿಗೆ ಕಟ್ಟುವ ಅಗತ್ಯವಿಲ್ಲ.

*ಎಷ್ಟೇ ಎಕರೆ ಜಮೀನು ಇದ್ದರೂ ಸಹ ಕೃಷಿ ಭೂಮಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ, ಸಂಸ್ಕರಣೆ(processing) ಹಾಗೂ ವಿಕ್ರಾಯ(sales) ಮಾಡಿದರು ಕೂಡ ಅದನ್ನು ಕೃಷಿ ಆದಾಯವೆಂದು ಪರಿಗಣಿಸಲಾಗುತ್ತದೆ. ಅದರ ಮೇಲೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ.

advertisement

* ಇನ್ನು ನಿಮ್ಮ ಕೃಷಿ ಭೂಮಿಯ ಬಳಿ ಫಾರ್ಮ್ ಹೌಸ್(farmhouse) ನಿರ್ಮಾಣ ಮಾಡಿ ಅದರಿಂದ ಆದಾಯ ಗಳಿಸುತ್ತಿದ್ದಾರೆ ಆ ಹಣಕ್ಕೆ ಯಾವುದೇ ತೆರಿಗೆ ಕಟ್ಟುವ ಅಗತ್ಯವಿರುವುದಿಲ್ಲ.

* ಬೀಜಗಳ ಮಾರಾಟದಿಂದ ದೊರಕುವ ಆದಾಯಕ್ಕೆ ತೆರಿಗೆ ಇಲ್ಲ.

Agricultural Income in Income Tax: Exemption Limit,
Image Source: Public Tv

* ನರ್ಸರಿ- ಸಸ್ಯಗಳ ಬೆಳಸುವಿಕೆ, ಗಿಡಗಳ ಮಾರಾಟ ಹಾಗೂ ಬೀಜಗಳ ವಿಕ್ರಾಯ ಮಾಡುವುದಕ್ಕೂ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.

•ನಿಮ್ಮ ಕೃಷಿ ಭೂಮಿಯಲ್ಲಿ ಅಪ್ಪಟ ಕೃಷಿ ಬೆಳೆಗಳನ್ನು ಬೆಳೆದು ಅದನ್ನು ಮಾರಾಟ ಮಾಡಿ ಆದಾಯ ಪಡೆದರೆ ಯಾವುದೇ ರೀತಿಯ ತೆರಿಗೆ ಕಟ್ಟುವ ಅನಿವಾರ್ಯ ಇರುವುದಿಲ್ಲ.

ಕೃಷಿಯೇತೆರೆ ಆದಾಯ ಗಳಿಗೆ ತೆರಿಗೆ ಇರಲಿದೆ

ಭಾರತದಲ್ಲಿ ಕೃಷಿಯೇತರ ಆದಾಯಗಳಾದ ಹೈನುಗಾರಿಕೆ(dairy farming), ಜೇನು ಸಾಕಾಣಿ, ಚೀಸ್ ತಯಾರಿಕೆ ಅಥವಾ ಹಾಲಿನ ಉತ್ಪನ್ನಗಳಿಂದ ಮಾಡಲಾಗುವಂತಹ ಪದಾರ್ಥ ತಯಾರಿಕೆ ಮತ್ತು ಮಾರಾಟ, ಫಾರ್ಮ್ ಹೌಸ್ ನಲ್ಲಿ ಟಿವಿ ಧಾರಾವಾಹಿ ಶೂಟಿಂಗ್, ಕೋಳಿ ಸಾಕಣೆ ಹೀಗೆ ಮುಂತಾದ ಕೃಷಿಯೇತರೆ ಆದಾಯಗಳ ಮೇಲೆ ತೆರಿಗೆ ಇರಲಿದೆ.

advertisement

Leave A Reply

Your email address will not be published.