Karnataka Times
Trending Stories, Viral News, Gossips & Everything in Kannada

Indian Roads Law: ನಿಮ್ಮ ಮನೆ ಪಕ್ಕದ ಅಥವಾ ಯಾವುದೇ ಹೈವೇಯ ರಸ್ತೆ ಹಾಳಾಗಿದೆಯೇ! ದೇಶಾದ್ಯಂತ ಬಂತು ಹೊಸ ರೂಲ್ಸ್

advertisement

MAINTENANCE OF ROADS UNDER PRADHAN MANTRI GRAM SADAK YOJANA: ನೀವು ವಾಸ ಮಾಡುತ್ತಿರುವಂತಹ ಏರಿಯಾದ ಅಥವಾ ಹಳ್ಳಿಯ ಆಸುಪಾಸಿನ ರಸ್ತೆಗಳು ತೀರ ಹಾಳಾಗಿ ಹೋಗಿದ್ದಾರೆ, ಮನೆಯಲ್ಲೇ ಕುಳಿತು ನಿಮ್ಮ ಬಳಿಯಿ ರುವ ಮೊಬೈಲ್ ಮೂಲಕ ದೂರು ನೀಡಿ 10 ರಿಂದ 15 ದಿನಗಳ ಒಳಗೆ ರಸ್ತೆ ಕಾಮಗಾರಿ(road work)ಯನ್ನು ಕಾರ್ಯ ರೂಪಕ್ಕೆ ತರಬಹುದು. ಇದನ್ನು ಕಾರ್ಯರೂಪಕ್ಕೆ ತರುವುದು ಹೇಗೆ ದೂರು ನೀಡಲು ಸಲ್ಲಿಸಬೇಕಾದ ದಾಖಲಾತಿಗಳು ಏನೇನು ಎಂಬ ವಿವರವನ್ನು ಈ ಊಟದ ಮುಖಾಂತರ ತಿಳಿದುಕೊಳ್ಳಿ.

ಫೋನಿನ ಮುಖಾಂತರ ರಸ್ತೆಯನ್ನು ಸರಿಪಡಿಸಿ

ಹೌದು ಸ್ನೇಹಿತರೆ, ನೀವು ವಾಸ ಮಾಡುತ್ತಿರುವಂತಹ ಪ್ರದೇಶದ ರಸ್ತೆಗಳು ಹಾಳಾಗಿದ್ದರೆ ಅದನ್ನು ಸರಿ ಮಾಡಿಸುವಂತೆ ಯಾವುದೋ ಕಚೇರಿಗೆ ಹೋಗಿ ದೂರು ನೀಡುವಂತಹ ಅಗತ್ಯ ಇನ್ನು ಮುಂದೆ ಇರುವುದಿಲ್ಲ. ಬದಲಿಗೆ ನಿಮ್ಮ ಕೈ ಬೆರಳಿನ ಅಂಚಿನಲ್ಲೆ ದೂರು ದಾಖಲಾತಿ ಮಾಡಿ 10 ರಿಂದ 15 ದಿನಗಳು ಒಳಗೆ ರಸ್ತೆ ಕಾಮಗಾರಿಯನ್ನು ಕಾರ್ಯರೂಪಕ್ಕೆ ತರಿಸಬಹುದು.

Fix My Street’ application to help public flag potholes
Image Source: Times Now

ದೂರ ಸಲ್ಲಿಸುವುದು ಹೇಗೆ?

advertisement

ಭಾರತದ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವಂತಹ ರಸ್ತೆಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ(central government) ಇತ್ತೀಚಿಗಷ್ಟೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ (pradhan mantri gram sadak scheme) ಯನ್ನು ಕಾರ್ಯ ರೂಪಕ್ಕೆ ತಂದಿದ್ದು, ಇದರಿಂದ ಸಾಕಷ್ಟು ಸಾರ್ವಜನಿಕರು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಹಾಳಾಗಿರುವಂತಹ ರಸ್ತೆಯ ಫೋಟೋದ ತೆಗೆದು ಕೆಲ ದಾಖಲಾತಿಗಳನ್ನು ನಮೂದಿಸಿದರೆ ಸಾಕು 15 ದಿನಗಳಲ್ಲಿ ರಸ್ತೆಯ ಕಾಮಗಾರಿ ಕಾರ್ಯರೂಪಕ್ಕೆ ಬರುತ್ತಿದೆ.

Steps:
•ನಿಮ್ಮ ಮನೆಯ ಸುತ್ತಮುತ್ತಲು ಈ ರೀತಿ ಹಾಳಾಗಿರುವಂತಹ ರಸ್ತೆಯನ್ನು ಕಂಡರೆ ಆನ್ಲೈನ್ ನಲ್ಲಿ ದೊರಕುವಂತಹ omms.nic.in ಲಿಂಕನ್ನು ಅನುಸರಿಸಿ PMGSY ಪೇಜ್ಗೆ ಭೇಟಿ ನೀಡಿ.

* ಅಲ್ಲಿ ಎರಡನೆಯ ಆಯ್ಕೆ ಆದಂತಹ ‘ಕೆಲಸದ ನಿರ್ದಿಷ್ಟ ಪ್ರಕ್ರಿಯೆಯನ್ನು ತಿಳಿಯಲು ನಿಮ್ಮ ರಸ್ತೆಯ ಲೊಕೇಶನ್(location) ಅನ್ನು ಪತ್ತೆ ಮಾಡಿ’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Image Source: Times Now

* ಆನಂತರ ಅಲ್ಲಿ ಲಭ್ಯವಾಗುವಂತಹ ಕಾಲಂಗಳಲ್ಲಿ ನಿಮ್ಮ ರಾಜ್ಯ, ಸಿಟಿ ಲೊಕೇಶನ್, ಮೊಬೈಲ್ ನಂಬರ್ ಹಾಗೂ ಹಾಳಾಗಿರುವಂತಹ ರಸ್ತೆಯ ಫೋಟೋಗಳನ್ನು ಚಿತ್ರೀಕರಿಸಿ ಅಪ್ಲೋಡ್ ಮಾಡಿ.

* ಕೇವಲ 10 ರಿಂದ 15 ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ನಿಮ್ಮ ದೂರಿಗೆ ಪ್ರತಿಕ್ರಿಯೆ ದೊರಕುತ್ತದೆ ಹಾಗೂ ರಸ್ತೆ ಕಾಮಗಾರಿ ಕಾರ್ಯರೂಪಕ್ಕೆ ಬರುತ್ತದೆ.

advertisement

Leave A Reply

Your email address will not be published.