Karnataka Times
Trending Stories, Viral News, Gossips & Everything in Kannada

RBI: ಸಹಕಾರಿ ಬ್ಯಾಂಕ್ ಸೇರಿದಂತೆ ದೇಶದ ಈ 10 ಬ್ಯಾಂಕ್ ಗಳಿಗೆ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್! ಹಣ ಇಟ್ಟವರು ನೋಡಿಕೊಳ್ಳಿ

advertisement

RBI imposes penalty: ಸ್ನೇಹಿತರೆ, ವಿವಿಧ ನಿಯಂತ್ರಕ ಮಾರ್ಗ ಸೂಚಿಗಳನ್ನು ಪಾಲಿಸದ ಕಾರಣ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದ 10 ವಿವಿಧ ಬ್ಯಾಂಕ್ಗಳಿಗೆ 60 ಲಕ್ಷ ದಂಡವನ್ನು ವಿಧಿಸಿದ್ದು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಹಿಮಾಚಲ್ ಪ್ರದೇಶ ಸೇರಿದಂತೆ 10 ಬ್ಯಾಂಕಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಮಾರ್ಚ್ ತಿಂಗಳಿನಲ್ಲಿ ದಂಡವನ್ನು ಹಾಕಿದ್ದಾರೆ. ಇದು ಗ್ರಾಹಕರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ? ಆರ್ಬಿಐ ಹಾಕಿರುವಂತಹ ದಂಡಕ್ಕೆ ನಿಮ್ಮ ಬ್ಯಾಂಕ್ ಕೂಡ ಸೇರಿದ್ಯಾ? ಯಾವ ಕಾರಣಗಳಿಂದ 10 ಬ್ಯಾಂಕ್ ಗಳಿಗೆ ಗಂಡ ರಚಿಸಿದೆ? ಎಷ್ಟು ರೂಗಳ ಮೊತ್ತ ದಂಡ ವಿಧಿಸಿದೆ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

•ಸ್ಟ್ಯಾಂಡರ್ಡ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಔರಂಗಬಾದ್, ಮಹಾರಾಷ್ಟ್ರ

ನಿಗದಿತ ದಿನಾಂಕದೊಳಗೆ ಠೇವಣಿದಾರರ ಜಾಗೃತಿ ಮತ್ತು ಶಿಕ್ಷಣದ ನಿಧಿಗೆ ಸ್ಟ್ಯಾಂಡರ್ಡ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಅಗತ್ಯವಿರುವ ಹಣವನ್ನು ವರ್ಗಾಯಿಸದ ಕಾರಣ RBI, ಬ್ಯಾಂಕಿನ ಮೇಲೆ ಕ್ರಮ ಕೈ ತೆಗೆದುಕೊಂಡು ಬರೋಬ್ಬರಿ 50 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.

•ಹೌರಾ ಡಿಸ್ಟಿಕ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ವೆಸ್ಟ್ ಬೆಂಗಾಲ್
ಕೆ ವೈ ಸಿಯ ಮಾರ್ಗಸೂಚಿಗಳನ್ನು ಅನುಸರಿಸದ ಹಾಗೂ ಸರಿಯಾದ ಸಮಯಕ್ಕೆ ಕೆವೈಸಿ ಮಾಹಿತಿಗಳನ್ನು ನವೀಕರಿಸದ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೌರ ಡಿಸ್ಟಿಕ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಹಣವನ್ನು ದಂಡ ವಿಧಿಸಿದೆ.

What is the penalty for Reserve Bank of India?What is the penalty for Bank of India?
Image Source: Times Now

•ಎಕ್ಸಲೆಂಟ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಮಹಾರಾಷ್ಟ್ರ

ಠೇವಣಿ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಸಂಬಂಧಿಸಿದ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ, ನಿಗಧಿತ ಅವಧಿಯಲ್ಲಿ ಹಣವನ್ನು ನಿಧಿಗೆ ಠೇವಣಿ ಮಾಡದ ಕಾರಣ ಆರ್ ಬಿ ಐ ಮಾಡಿದ ತನಿಖೆ ಅಡಿ ಮಾರ್ಚ್ 31 ರಂದು ಮುಂಬೈನ ಎಕ್ಸಲೆಂಟ್ ಕೋ ಆಪರೇಟಿವ್ ಬ್ಯಾಂಕ್ ಗೆ ಬರೋಬ್ಬರಿ 1 ಲಕ್ಷ ತಂಡವನ್ನು ವಿಧಿಸಿದೆ.

•ರಾಜಪಾಳ್ಯಂ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್, ರಾಜಪಾಲಯಂ ತಮಿಳುನಾಡು

ಬ್ಯಾಂಕ್ ನಿರ್ದೇಶಕರ ಸಂಬಂಧಿಕರಿಗೆ ಸಾಲ ನೀಡಲಾಗಿತ್ತು ಮತ್ತು ನಾಮಪತ್ರ ಸದಸ್ಯರಿಗೆ ನಿಗದಿತ ಮಿತಿಗಿಂತ ಹೆಚ್ಚಿನ ಸಾಲವನ್ನು ಮಂಜೂರು ಮಾಡಿತ್ತು. ಆರ್ಬಿಐ ಮಾರ್ಚ್ 31ನೇ ತಾರೀಕಿನಂದು ಬ್ಯಾಂಕಿನ ಆರ್ಥಿಕ ಸ್ಥಿತಿಯ ಕುರಿತು ತನಿಖೆ ನಡೆಸಿದ ಸಂದರ್ಭದಲ್ಲಿ ಈ ವಿಚಾರ ಬಯಲಾಗಿ ಆರ್ ಬಿ ಐ ನಿಯಮಗಳನ್ನು ಪಾಲಿಸದೆ ಇದ್ದ ಕಾರಣ ರಾಜ ಪಾಳ್ಯಂ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಬರೋಬರಿ 75,000ಗಳನ್ನು ದಂಡ ವಿಧಿಸಿದ್ದಾರೆ.

•ಮಂಡಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಹಿಮಾಚಲ್ ಪ್ರದೇಶ್

ಹಿಮಾಚಲ ಪ್ರದೇಶದ ಮಂಡಿ ಗ್ರಾಮದಲ್ಲಿ ಇರುವಂತಹ ಮಂಡಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 6 ಲಕ್ಷ ಹಣ ದಂಡ ಹಾಕಿದೆ. ಇಂಟರ್ ಬ್ಯಾಂಕ್ ಮಾನ್ಯತೆ ಮಿತಿಗಳ ಹೇರಳವಾದ ಉಲ್ಲಂಘನೆ ಮಾಡಿದ ಕಾರಣ ಆರ್ ಬಿ ಐ ಪರಿಶೀಲಿಸಿ ದಂಡ ಹಾಕಿದ್ದಾರೆ.

advertisement

What is the penalty for Reserve Bank of India?What is the penalty for Bank of India?
Image Source: Times Now

* ಚಿಕ್ಕಮಗಳೂರು ಜಿಲ್ಲಾ ಸಹಾಯಕ ಕೇಂದ್ರ ಬ್ಯಾಂಕ್ ಲಿಮಿಟೆಡ್ ಚಿಕ್ಕಮಗಳೂರು, ಕರ್ನಾಟಕ

ವರ್ಗೀಕರಣ, ವರದಿ ಮತ್ತು ಮೇಲ್ವಿಚಾರಣೆಯಲ್ಲಿ ವಂಚನೆ ಮಾಡಿರುವುದರ ಜೊತೆಗೆ ನಬಾರ್ಡ್ ಆದೇಶಗಳನ್ನು ಪಾಲಿಸದ ಕಾರಣ ಮಾರ್ಚ್ 31 ನೇ ತಾರೀಕಿನಂದು ತನಿಖೆ ನಡೆಸಿದ ನಬಾರ್ಡ್ ಬ್ಯಾಂಕಿಗೆ ಬರೋಬ್ಬರಿ ಐವತ್ತು ಸಾವಿರ ರೂಪಾಯಿಗಳನ್ನು ದಂಡ ಹಾಕಿದ್ದಾರೆ.

•ದಿಂಡಿಗಲ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ದಿಂಡಿಗಲ್ ತಮಿಳುನಾಡು

ಎಕ್ಸ್ಪೋಶರ್ ನಾರ್ಮಳಗು ಮತ್ತು ಶಾಸನಬದ್ಧ ನಿರ್ಬಂಧಗಳನ್ನು ಈ ಸಹಕಾರಿ ಬ್ಯಾಂಕ್ ಅನುಸರಿಸಿದ್ದಕ್ಕಾಗಿ ಹಾಗೂ ಮಿತಿಗಿಂತ ಹೆಚ್ಚಿನ ಸಾಲವನ್ನು ಮಂಜೂರು ಮಾಡಿದ ಕಾರಣ ಬರೋಬ್ಬರಿ ₹25000 ಆರ್‌ಬಿಐ ದಂಡ ಹಾಕಿದೆ.

•ಜನಲಕ್ಷ್ಮಿ ಸಹಕಾರಿ ಬ್ಯಾಂಕ್, ನಾಸಿಕ್

ನಾಸಿಕ್ ನಲ್ಲಿ ಇರುವಂತಹ ಈ ಸಹಕಾರಿ ಬ್ಯಾಂಕಿಗೆ ಆರ್‌ಬಿಐ ಬರೋಬ್ಬರಿ 59.9 ಲಕ್ಷ ರೂಪಾಯಿಯನ್ನು ದಂಡ ಹಾಕಿದ್ದು, ಈ ಬ್ಯಾಂಕ್ ಕೂಡ ಎಕ್ಸ್ಪೋಶ಼ರ ನಿಯಮಗಳು ಮತ್ತು ಶಾಸನಬದ್ಧ ನಿಬಂಧಗಳನ್ನು ಅನುಸರಿಸಿಲ್ಲ, ಜೊತೆಗೆ ನೀಡಿರುವಂತಹ ಗಡುವಿನೊಳಗೆ ಬ್ಯಾಂಕ್ ತನ್ನ ನಿರ್ವಹಣೆ ಮಂಡಳಿಯನ್ನು ರಚಿಸಲು ವಿಫಲವಾಗಿದೆ.

RBI Monetary Policy 2024 Highlights: RBI keeps repo rate unchanged
Image Source: DNA India

•ಜನತಾ ಸಹಕಾರಿ ಬ್ಯಾಂಕ್, ಸೊಲ್ಲಾಪುರ

ಮ್ಯಾಚ್ 31ನೇ ತಾರೀಕಿನಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಸನಬದ್ಧ ಪರಿಶೀಲನೆಯನ್ನು ಮಾಡಿ ಪ್ರಾಥಮಿಕ ಸಹಕಾರಿ ಬ್ಯಾಂಕುಗಳಲ್ಲಿ ನಿರ್ವಹಣಾ ಮಂಡಳಿಯ ಸಂವಿಧಾನ ಮತ್ತು ಮೇಲ್ವಿಚಾರಣೆ ಕ್ರಿಯೆಯ ಚೌಕಟ್ಟಿನ ಅಡಿಯಲ್ಲಿ ಹೊರಡಿಸಲಾದ ಕ್ರಮಬದ್ಧ ಸೂಚನೆಗಳನ್ನು ಪಾಲಿಸಿಲ್ಲ ಹಾಗೂ ಆರ್‌ಬಿಐ ನೀಡಿರುವಂತಹ ನಿರ್ಬಂಧನೆಗಳನ್ನು ಅನುಸರಿಸದ ಕಾರಣ ಬರೋಬ್ಬರಿ 28.30 ಲಕ್ಷ ಮೊತ್ತವನ್ನು ದಂಡ ಹಾಕಿದೆ.

•ಮಥುರ ಜಿಲ್ಲಾ ಸಹಕಾರಿ ಬ್ಯಾಂಕ್, ಉತ್ತರ ಪ್ರದೇಶ

ಆರ್ ಬಿ ಐ ನಿರ್ಬಂಧಗಳನ್ನು ಪಾಲಿಸದೆ ಬ್ಯಾಂಕಿಂಗ್ ಅಡಿಯಲ್ಲಿ ನೀಡಲಾಗುವ ಗರಿಷ್ಠ ಅವಧಿಯ ಒಳಗೆ ಸ್ಥಿರ ಆಸ್ತಿಯನ್ನು ವಿಲೇವಾರಿ ಮಾಡಿರುವ ಆರೋಪದ ಮೇಲೆ ಮಥೂರ ಜಿಲ್ಲಾ ಸಹಕಾರಿ ಬ್ಯಾಂಕಿಗೆ ಬ್ಯಾಂಕ್ಗೆ RBI ಬರೋಬ್ಬರಿ 1 ಲಕ್ಷ ಹಣವನ್ನು ದಂಡ ವಿಧಿಸಿದ್ದಾರೆ.

advertisement

Leave A Reply

Your email address will not be published.