Karnataka Times
Trending Stories, Viral News, Gossips & Everything in Kannada

Ayushman Bharat Yojana: ರೇಷನ್ ಕಾರ್ಡ್ ಇದ್ದರೆ ಸಾಕು, ಸರ್ಕಾರದ ಈ ಯೋಜನೆಯಲ್ಲಿ ಸಿಗುತ್ತೆ 5 ಲಕ್ಷ ರೂ. ಸೌಲಭ್ಯ!

advertisement

ಇಂದು ಸಣ್ಣ ಪುಟ್ಟ ಖಾಯಿಲೆಗೂ ಆಸ್ಪತ್ರೆ ಮೆಟ್ಟಿಲು ಹತ್ತುವಂತಹ ಸಂದರ್ಭ ಈ ಯುಗದಲ್ಲಿ ಮುಡಿದೆ. ಹಿಂದಿನ ಕಾಲದಲ್ಲಿ ಒಂದು ಜ್ವರ ಆರಂಭ ವಾದರೂ ಮನೆಯಲ್ಲೆ ಔಷಧ ಮಾಡುವ ಸನ್ನಿವೇಶ ಇತ್ತು.ಆದರೆ ಈಗ ಹಾಗಲ್ಲ ಸಣ್ಣ ಖಾಯಿಲೆಗೂ ಹೆದರಬೇಕಾದ ಅನಿವಾರ್ಯ ತೆ ಇದೆ. ಇಂದು ಮದ್ಯಮ ವರ್ಗದ ಜನತೆಗೆ ಆಸ್ಪತ್ರೆ ಯ ವೆಚ್ಚ ನಿಭಾಯಿಸುವುದು ಕಷ್ಟವೆ. ಹಾಗಾಗಿ ಕೇಂದ್ರ ಸರಕಾರವು ಬಡವರ್ಗದ ಜನತೆಗಾಗಿ ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ.

ಇವರಿಗೂ ಈ ಯೋಜನೆ ಜಾರಿ

ಕೇವಲ ಬಿಪಿಎಲ್ ಕಾರ್ಡ್ (BPL Card) ಅಷ್ಟೆ ಅಲ್ಲ, ಎಪಿಎಲ್‌ ಕಾರ್ಡ್ (APL Card) ಹೊಂದಿದ್ದ ಕುಟುಂಬಕ್ಕೂ ಅವಕಾಶ ಕಲ್ಪಿಸಿರುವ ಮೊದಲ ರಾಜ್ಯ ಕರ್ನಾಟಕ, 5 ಲಕ್ಷದ ಚಿಕಿತ್ಸೆ BPL Card ಹೊಂದಿದವರಿಗೆ ಸಿಗಲಿದ್ದು APL Card ದಾರರಿಗೂ ಆರೋಗ್ಯ ವೆಚ್ಚವನ್ನ ರಾಜ್ಯ ಸರ್ಕಾರ ಪಾವತಿಸಲಿದೆ.

ಬಿಹಾರದಲ್ಲೂ ಜಾರಿ

ಬಿಹಾರ ಕ್ಯಾಬಿನೆಟ್ ನಲ್ಲಿ ಆಯುಷ್ಮಾನ್ ಕಾರ್ಡ್ (Ayushman Card) ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಪಡಿತರ ಚೀಟಿದಾರರಿಗೆ ಪ್ರತಿ ವರ್ಷ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲು ಇದೀಗ ನಿರ್ಧಾರ ಮಾಡಲಾಗಿದೆ. ಇದೀಗ ಬಿಹಾರ ಸರ್ಕಾರವು ಆಯುಷ್ಮಾನ್ ಯೋಜನೆಯ ಎಲ್ಲ ಸೌಲಭ್ಯ ಗಳನ್ನು ರಾಜ್ಯದ ಎಲ್ಲಾ ಪಡಿತರ ಕಾರ್ಡ್ ಹೊಂದಿರುವ ಜನತೆಗೆ ನೀಡಲು ಸರಕಾರ ನಿರ್ಧರಿಸಿದೆ.

advertisement

ವಿಮಾ ಸೌಲಭ್ಯ:

 

 

ಮೋದಿ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ (Ayushman Bharat Yojana) ಯನ್ನು ಪ್ರಾರಂಭ ಮಾಡಿದ್ದು ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ನಂತರ ಈ ಯೋಜನೆಯನ್ನು ಇಲ್ಲಿ ಜಾರಿಗೆ ತರಲಾಗುತ್ತಿದೆ. ಸುಮಾರು 10 ಕೋಟಿ ಕುಟುಂಬಗಳಿಗೆ ವಾರ್ಷಿಕ 5.00 ಲಕ್ಷ ರೂಪಾಯಿಗಳ ಆರೋಗ್ಯ ವಿಮಾ ರಕ್ಷಣೆಯನ್ನು ನೀಡಲು ಮುಂದಾಗಿದೆ.

ಈ ಖಾಯಿಲೆಗಳಿಗೆ ಬಳಕೆ

ದೀರ್ಘ ಕಾಯಿಲೆಯಾದ ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆ, ಹೃದ್ರೋಗ, ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾ, ಡಯಾಲಿಸಿಸ್, ಕಣ್ಣಿನ ಪೊರೆ ಮತ್ತು ಇತರ ಗುರುತಿಸಲಾದ ಗಂಭೀರ ಕಾಯಿಲೆಗಳ ಉಚಿತ ಚಿಕಿತ್ಸೆಯನ್ನು ಈ ಯೋಜನೆಯಡಿ ಬಳಸಬಹುದು.

ಆಯುಷ್ಮಾನ್ ಕಾರ್ಡ್ ಮಾಡಿಸದೇ ಇದ್ದವರು https://bis.pmjay.gov.in. ಈ ಲಿಂಕ್ ಮೂಲಕ ನೊಂದಣಿ ಮಾಡಬಹುದು‌.

advertisement

Leave A Reply

Your email address will not be published.