Karnataka Times
Trending Stories, Viral News, Gossips & Everything in Kannada

Income Tax: ಆದಾಯ ತೆರಿಗೆದಾರರಿಗೆ 1 ಲಕ್ಷ ತೆರಿಗೆ ವಿನಾಯಿತಿಯ ಭರ್ಜರಿ ಸೌಲಭ್ಯ ನೀಡಿದ ಕೇಂದ್ರ ಸರ್ಕಾರ!

advertisement

ಹಣ ನಮ್ಮ ಅಗತ್ಯಗಳನ್ನು ಪೂರೈಸಲು ಬಳಸಲ್ಪಡುವ ವಸ್ತುವಾಗಿದ್ದು ಅದರ ಮೌಲ್ಯ ಸದಾ ಕಾಲ ಇದ್ದೇ ಇರುತ್ತದೆ. ಹಣಕಾಸಿನ ಯೋಜನೆಗಳನ್ನು ಉತ್ತೇಜಿಸುವ ಸಲುವಾಗಿ ಸರಕಾರ ಈಗಾಗಲೇ ಅನೇಕ ಯೋಜನೆ, ನೀತಿ ನಿರೂಪಣೆ ಜಾರಿಗೆ ತಂದಿದ್ದು ಇದೀಗ ತೆರಿಗೆ ವಿನಾಯಿತಿಯ ಭರ್ಜರಿ ಸೌಲಭ್ಯ ಒಂದನ್ನು ನೀಡುವ ಮೂಲಕ ಆದಾಯ ತೆರಿಗೆ (Income Tax) ದಾರರಿಗೆ ಶುಭ ಸುದ್ದಿ ನೀಡಲಾಗಿದೆ.

ಕೇಂದ್ರದಿಂದ ನಿರ್ಣಯ?

 

 

ಇತ್ತೀಚೆಗಷ್ಟೆ ಕೇಂದ್ರದ ವಿತ್ತ ಸಚಿವರಾದ ನಿರ್ಮಲಾ ಸೀತರಾಮನ್ (Nirmala Sitharaman) ಅವರು ಆದಾಯ ತೆರಿಗೆ ಇಲಾಖೆ ಕೆಲ ವ್ಯವಸ್ಥಿತ ಮಾರ್ಪಾಡು ಮಾಡಿದ್ದರ ಬಗ್ಗೆ ತಿಳಿಸಿದ್ದರು. ಮಧ್ಯಂತರ ಬಜೆಟ್ ಘೋಷಣೆ ವೇಳೆಯಲ್ಲಿ ಸಣ್ಣ ಬಾಕಿ ಇರುವ ಆದಾಯ ತೆರಿಗೆ (Income Tax) ಬೇಡಿಕೆಯನ್ನು ಮನ್ನಾ ಮಾಡುವುದಾಗಿ ಅವರು ಘೋಷಣೆ ಮಾಡಿದ್ದರು. ಇದಕ್ಕಾಗಿ ಆದಾಯ ತೆರಿಗೆದಾರರು ಏನು ಮಾಡಬೇಕು ಎಂಬ ಅನೇಕ ತರನಾದ ಮಾಹಿತಿಯನ್ನು ನೀವಿಲ್ಲಿ ತಿಳಿಯಬಹುದು.

ಮನ್ನಾ ನೀತಿ?

advertisement

ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ಪಡೆದರೂ ಅಥವಾ ನಗದನ್ನೆ ಉಡುಗೊರೆಯಾಗಿ ಪಡೆದರೂ ಕೂಡ ಆದಾಯ ತೆರಿಗೆ (Income Tax) ನೀತಿ ಕಾಯ್ದೆ ಅನ್ವಯ ಇಂತಿಷ್ಟು ಪ್ರಮಾಣ ದಂಡ ಬರಿಸಬೇಕಿದೆ. 2024 ಜನವರಿ 31 ರಂದು ಈ ಬಗ್ಗೆ ಕೆಲವು ಆದೇಶ ನೀಡಲಾಗಿದ್ದು ಅದರಲ್ಲಿ ಆದಾಯ ತೆರಿಗೆ, ಸಂಪತ್ತು ತೆರಿಗೆ ಹಾಗೂ ಉಡುಗೊರೆ ರೀತಿಯ ತೆರಿಗೆ ಬಾಕಿ ಇದ್ದಲ್ಲಿ ಬಾಕಿ ಇರುವ ಬೇಡಿಕೆಗೆ ಮನ್ನಾ ನೀತಿ ಅನ್ವಯವಾಗಲಿದೆ.

ಎಷ್ಟು ಪ್ರಮಾಣ ಮನ್ನಾ:

2010-11ನೇ ವರ್ಷದಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಇರುವ ಪ್ರತೀ ಬೇಡಿಕೆ ಮೇಲೆ ಮನ್ನಾ, 2009-10ಕ್ಕೆ 25,000 ಕ್ಕಿಂತ ಕಡಿಮೆ ಬೇಡಿಕೆಯ ಬಡ್ಡಿದರ, ಸೆಸ್,ದಂಡ ಎಲ್ಲವನ್ನು ಸಹ ಮನ್ನಾ ಮಾಡಲಾಗುವುದು. ಹಾಗಿದ್ದರೂ ಅಲ್ಪ ಬೇಡಿಕೆಯ ಒಟ್ಟು ಮೊತ್ತ ಒಂದು ಲಕ್ಷ ಮೀರುವಂತಿಲ್ಲ.‌ ಮೀರಿದರೆ ಮನ್ನಾ ಸೌಲಭ್ಯ ಇರದೇ, ಅಷ್ಟು ಹಣ ಆದಾಯ ತೆರಿಗೆ ಇಲಾಖೆಗೆ ಕಟ್ಟಬೇಕು.

ಕಾಯ್ದೆ ಅನ್ವಯವೇ ನಿಯಮ:

ಆದಾಯ ತೆರಿಗೆ ಇಲಾಖೆಯ ಹಲವು ಕಾಯ್ದೆ ಅನ್ವಯವೇ ದಂಡ, ಸೆಸ್ ಹಾಗೂ ಇತರ ನಿಯಮ ಅನ್ವಯ ಮಾಡಲಾಗುವುದು. ಆದಾಯ ತೆರಿಗೆ ಕಾಯ್ದೆ, ಉಡುಗೊರೆ ತೆರಿಗೆ ಕಾಯ್ದೆ, ಸಂಪತ್ತಿನ ಕಾಯ್ದೆ ಇತರ ಕಾಯ್ದೆ ಮೂಲಕ ಕ್ರಮ ಕೈಗೊಳ್ಳಲಾಗುತ್ತಿತ್ತು. ಈ ಬಗ್ಗೆ ನಿಮಗೆ ಯಾವುದೆ ಅನುಮಾನ ಇದ್ದರೆ ಆದಾಯ ತೆರಿಗೆ ಇಲಾಖೆ ವೆಬ್ಸೈಟ್ ಭೇಟಿ ನೀಡಿ ಇಲ್ಲವೆ 1800 309 0130 ಕರೆಮಾಡಿರಿ‌.

advertisement

Leave A Reply

Your email address will not be published.