Karnataka Times
Trending Stories, Viral News, Gossips & Everything in Kannada

Central Govt: ಜನಸಾಮಾನ್ಯರಿಗೆ ಇನ್ನೊಂದು ಗುಡ್ ನ್ಯೂಸ್, ಕೇಂದ್ರ ಸರಕಾರದ ಹೊಸ ಘೋಷಣೆ!

advertisement

ಇಂದು ಆರೋಗ್ಯ ಸರಿಯಿದ್ದರೆ ಮಾತ್ರ ಮಾನವನಿಗೆ ನೆಮ್ಮದಿ, ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸುವುದು ಕೂಡ ಮುಖ್ಯವಾಗುತ್ತದೆ. ಅದರಲ್ಲೂ ಇಂದು ಸಣ್ಣ ಪ್ರಾಯದಲ್ಲೆ ಆರೋಗ್ಯ ಸಮಸ್ಯೆ ಗಳು ಕಾಡುತ್ತಿದ್ದು ಅದಕ್ಕಾಗಿ ವೈದ್ಯರು‌ ಸರಿಯಾದ ಆಹಾರ ಕ್ರಮ‌ ಅನುಸರಿಸಬೇಕೆಂದು ಮಾಹಿತಿ ನೀಡುತ್ತಾರೆ. ಅದರಲ್ಲೂ ಬಡವರ್ಗದ ಜನತೆಗೆ ಇಂದು ಆರೋಗ್ಯದ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ಕಷ್ಟ ವಾಗಿ ಬಿಡುತ್ತದೆ. ಈಗಾಗಲೇ ಇದಕ್ಕಾಗಿ ಆಯುಷ್ಮಾನ್ ಕಾರ್ಡ್ (Ayushman Card) ಅನ್ನು‌ಸಹ ಜಾರಿಗೆ ತರಲಾಗಿದೆ. ಹಲವಷ್ಟು ಬಡ ವರ್ಗದ ಜನರು ಈ ಕಾರ್ಡ್ ಮಾಡಿಸುವ ಮೂಲಕ ಉಚಿತ ಚಿಕಿತ್ಸೆ ಯನ್ನು‌ ಪಡೆಯುತ್ತಿದ್ದಾರೆ. ಇದೀಗ ಕೇಂದ್ರ ಸರಕಾರ ಜನರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆಮಾಡಲು ಇನ್ನೊಂದು ಗುಡ್ ನ್ಯೂಸ್ ನೀಡಿದೆ.

ಚಿಕಿತ್ಸಾ ಪ್ಯಾಕೇಜ್‌ಗಳು:

ಇಂದು ಆಯುಷ್ಮಾನ್‌ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಹೆಚ್ಚಿನ ಜನರು ಸೇವಾ ಸೌಲಭ್ಯ ವನ್ನು ಪಡೆದುಕೊಂಡಿದ್ದಾರೆ. BPL Card ದಾರರು ಅಲ್ಲದೆ APL Card ಬಳಕೆದಾರರಿಗೂ ಈ ಯೋಜನೆಯ ಸೌಲಭ್ಯ ದೊರಕುತ್ತಿದ್ದು ಸುಮಾರು 1650 ಚಿಕಿತ್ಸಾ ಪ್ಯಾಕೇಜ್‌ಗಳು ರಾಜ್ಯದಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗುತ್ತಿದೆ.

ಕಡಿಮೆ ಬೆಲೆಯಲ್ಲಿ ಔಷಧಿ:

 

advertisement

 

ಇಂದು ಸಾಮಾನ್ಯ ಚಿಕಿತ್ಸೆಗಳಿಗೂ ಹೆಚ್ಚಿನ ಖರ್ಚು ವೆಚ್ಚಗಳು ಆಗುತ್ತದೆ. ಅದರಲ್ಲೂ ಮಧುಮೇಹ, ಜ್ವರ ದಂತಹ ಕಾಯಿಲೆಗಳು ಸಾಮಾನ್ಯ ವಾಗಿ ಬಿಟ್ಟಿದ್ದು ಈ ಮಧುಮೇಹ ಮೈಕೈ ನೋವು, ಜ್ವರ, ಹೃದ್ರೋಗ, ಕೀಲು ನೋವು ಇತ್ಯಾದಿ ಔಷಧಿಗಳ ಬೆಲೆಯಲ್ಲಿ ಕಡಿತವನ್ನು ಮಾಡುದಾಗಿ ಕೇಂದ್ರ ಸರ್ಕಾರ (Central Govt) ಘೋಷಣೆ ಮಾಡಿದ್ದು NPPA ಇಂಡಿಯಾ 69 ಹೊಸ ಸೂತ್ರೀಕರಣಗಳ ಚಿಲ್ಲರೆ ಬೆಲೆ ಮತ್ತು 31ರ ಗರಿಷ್ಠ ಬೆಲೆಯನ್ನ ನಿರ್ಧಾರ ಮಾಡಿದ್ದು ಅಧಿಸೂಚನೆಯನ್ನು ಸಹ ಹೊರಡಿಸಿದೆ.

ಮಹತ್ವದ ಕ್ರಮ:

ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) 69 ಬೆಲೆಗಳನ್ನು ನಿರ್ಧಾರ ಮಾಡುವ ಮೂಲಕ ಔಷಧಿಗಳ ಬೆಲೆಯನ್ನು ಕಡಿಮೆ ಮಾಡಲು ಮಹತ್ವದ ಕ್ರಮ ಕೈಗೊಂಡಿದೆ. ಅಧಿಸೂಚನೆಯ ಪ್ರಕಾರ ಮಧುಮೇಹ, ಜ್ವರ ನಿರ್ವಹಣೆ, ಹೃದ್ರೋಗ ಮತ್ತು ಕೀಲು ನೋವಿನ ಔಷಧಿಗಳ ಬೆಲೆಯನ್ನು ಕಡಿಮೆ ಮಾಡುವುದಾಗಿ ಗಿ ಘೋಷಿಸಿದೆ. ಅದೇ ರೀತಿ ಕೊಲೆಸ್ಟ್ರಾಲ್, ಸಕ್ಕರೆಕಾಯಿಲೆ , ಜ್ವರ, ಸೋಂಕು, ಅತಿಯಾದ ರಕ್ತಸ್ರಾವ, ಕ್ಯಾಲ್ಸಿಯಂ, ವಿಟಮಿನ್ ಡಿ 3, ಮಕ್ಕಳ ಸೇರಿದಂತೆ 100 ಔಷಧಿಗಳ ವೆಚ್ಚ ಕಡಿಮೆ ಯಾಗಲಿದೆ.

advertisement

Leave A Reply

Your email address will not be published.