Karnataka Times
Trending Stories, Viral News, Gossips & Everything in Kannada

Cylinder Price: ರಾಜ್ಯದ ಜನತೆಗೆ ಗುಡ್ ನ್ಯೂಸ್, ವಾಣಿಜ್ಯ ಸಿಲಿಂಡರ್ ಬೆಲೆ ರೂ. 39.50 ಇಳಿಕೆ!

advertisement

ಎಲ್ಪಿಸಿ ಸಿಲೆಂಡರ್ ಬೆಲೆ (LPG Cylinder Price) ಜನವರಿ 2024ಕ್ಕಿಂತ ಮೊದಲೇ ಕಡಿಮೆಯಾಗುವ ಎಲ್ಲಾ ಸಾಧ್ಯತೆಗಳು ಇವೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಮಾಹಿತಿ ಲಭ್ಯವಾಗಿತ್ತು. ಇಂದಿನಿಂದಲೇ ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಮಾಡುವುದಾಗಿ ತಿಳಿಸಲಾಗಿದೆ.

19 ಕೆಜಿಯ Commercial Cylinder ಬೆಲೆ ಕಡಿತ:

 

 

ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಗ್ರಾಹಕರ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಗ್ರಹಗಳ ಹಾಗೂ ವಾಣಿಜ್ಯ ಸಿಲಿಂಡರ್ ದರ (Commercial Cylinder Price) ಇಳಿಸುವ ಬಗ್ಗೆ ಗಮನವಹಿಸಿದ ಗೃಹ ಬಳಕೆಯ ಸಿಲಿಂಡರ್ ಮೇಲೆ 200 ರೂಪಾಯಿಗಳ ಸಬ್ಸಿಡಿ ಪಡೆಯಲಾಗುತ್ತಿದೆ. ಇದೀಗ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿಯೂ ಕೂಡ ತುಸು ಇಳಿತ ಕಂಡಿತು. ಹೋಟೆಲ್ ಹಾಗೂ ಇತರ ಉದ್ಯಮ ಮಾಡುವವರಿಗೆ ಇದು ಸ್ವಲ್ಪ ಸಮಾಧಾನ ತಂದಿದೆ ಎನ್ನಬಹುದು.

advertisement

ಎಷ್ಟಿದೆ ದೇಶಿಯ LPG Cylinder ದರ:

ಇಂಡಿಯನ್ ಕಮರ್ಷಿಯಲ್ ಸಿಲಿಂಡರ್ (Commercial Cylinder) ನವದೆಹಲಿಯಲ್ಲಿ 1757 ರೂಪಾಯಿ ಆಗಿದೆ. ಕಳೆದ ತಿಂಗಳು 1796.50 ಗೆ ಲಭ್ಯವಿತ್ತು. ಕೊಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್ ಬೆಲೆ (Cylinder Price) ಡಿಸೆಂಬರ್ ಆರಂಭದಿಂದ ಇಲ್ಲಿಯವರೆಗೆ 1908 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈಗ ಬೆಲೆ ಇಳಿಕೆಯಾಗಿದ್ದು 1868.50 ಖರೀದಿ ಮಾಡಬಹುದು. ಅದೇ ರೀತಿ ಮುಂಬೈನಲ್ಲಿ 1749 ರೂಪಾಯಿಗಳು ಇದ್ದ ಸಿಲಿಂಡರ್ ಈಗ 1710 ರೂಪಾಯಿಗಳಿಗೆ ಲಭ್ಯ. 39.50 ಗಳು ಇಳಿಕೆಯಿಂದಾಗಿ ಚೆನ್ನೈನಲ್ಲಿ ಎಲ್‍ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ 1929 ರೂಪಾಯಿಗಳಿಗೆ ಲಭ್ಯವಾಗುತ್ತಿದೆ.

ಇನ್ನು 14.2 ಕೆಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವು ಇಲ್ಲ. ಆಗಸ್ಟ್ 30 2023ರಲ್ಲಿ ದೇಶಿಯ LPG Cylinder ತರವನ್ನು ಇಳಿಕೆ ಮಾಡಲಾಗಿತ್ತು 200 ರೂಪಾಯಿಗಳನ್ನು ಸಬ್ಸಿಡಿ ನೀಡಲಾಗಿದೆ ಹಾಗೂ ಉಜ್ವಲ ಯೋಜನೆ ಅಡಿಯಲ್ಲಿ Free LPG Gas ಕನೆಕ್ಷನ್ ಪಡೆದುಕೊಂಡ ಕುಟುಂಬಕ್ಕೆ 300 ಸಬ್ಸಿಡಿ ಕೂಡ ಘೋಷಿಸಲಾಗಿದೆ.

LPG Cylinder Price ಆಗಸ್ಟ್ 30 ರಿಂದ ಇಲ್ಲಿಯವರೆಗೂ ಒಂದೇ ದರ ಅಂದರೆ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ. ಇಂದಿನ ದರ ಹಾಗೂ ಹಿಂದಿನ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ

ದೆಹಲಿ: ಇಂದಿನ ದರ 1757 ಹಿಂದಿನ ದರ 1796.50
ಕೊಲ್ಕತ್ತಾ: ಇಂದಿನ ದರ 1868.50 ರೂ. ಹಿಂದಿನ ದರ 1908 ರೂ.
ಮುಂಬೈ: ರೂ. ಇಂದಿನ ದರ 1710 ಹಿಂದಿನ ದರ 1749 ರೂ.
ಚೆನ್ನೈ: ಇಂದಿನ ದರ ರೂ.1929 ಹಿಂದಿನ ದರ 1968.5ರೂ.

advertisement

Leave A Reply

Your email address will not be published.