Karnataka Times
Trending Stories, Viral News, Gossips & Everything in Kannada

SBI Scheme: ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 10 ಲಕ್ಷಕ್ಕೆ 21 ಲಕ್ಷ ರಿಟರ್ನ್ ಸಿಗುತ್ತೆ! ಮಾರ್ಕೆಟ್ ರಿಸ್ಕ್ ಇಲ್ಲದ ಯೋಜನೆ ಯಾವುದು ಗೊತ್ತಾ?

advertisement

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ SIP, ಮ್ಯೂಚುವಲ್ ಫಂಡ್ಗಳಲ್ಲಿ (Mutual Fund) ಹೂಡಿಕೆ ಮಾಡಿದರೆ ಒಂದಷ್ಟು ಮಾರುಕಟ್ಟೆ ಅಪಾಯಗಳನ್ನು ಕೂಡ ಎದುರಿಸಬೇಕಾಗುತ್ತದೆ. ನೀವು ಮಾರುಕಟ್ಟೆ ಅಪಾಯ ಎದುರಿಸಲು ಸಿದ್ಧರಿದ್ದರೆ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಆದಾಯವನ್ನು ಗಳಿಸಬಹುದು. ಆದರೆ ಇದರಲ್ಲಿ ಬಡ್ಡಿ ದರದಲ್ಲಿ ಹೆಚ್ಚು ಕಡಿಮೆ ಆಗುತ್ತಿರುವುದರಿಂದ ನೀವು ಇಷ್ಟೇ ಆದಾಯ ಸಿಗುತ್ತೆ ಎಂದು ಹೇಳಲು ಸಾಧ್ಯವಿಲ್ಲ.

ಯಾವುದೇ ಮಾರುಕಟ್ಟೆಯ ಅಪಾಯ ಇಲ್ಲದೆ ಉತ್ತಮ ಆದಾಯವನ್ನು ಪಡೆದುಕೊಳ್ಳಬೇಕು ಎಂದು ಬಯಸಿದರೆ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಇಡುವುದು ಅತ್ಯುತ್ತಮ ಆಯ್ಕೆಯಾಗಿದೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರು ಸ್ಥಿರ ಠೇವಣಿ (Fixed Deposit) ಇಟ್ಟರೆ ಅವರಿಗೆ ಅತಿ ಉತ್ತಮ ಬಡ್ಡಿ ದರದಲ್ಲಿ ಲಾಭ ನೀಡಲಾಗುತ್ತಿದೆ. SBI Bank ನೀಡುತ್ತಿರುವ ಉತ್ತಮ ಬಡ್ಡಿ ದರದ ಆಧಾರದ ಮೇಲೆ FD ಇತ್ತು ಹೆಚ್ಚು ಲಾಭ ಗಳಿಸಬಹುದು.

SBI FD Scheme:

 

 

ದೇಶ ಅತಿ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಹಿರಿಯ ನಾಗರಿಕರಿಗೆ 7.5% ವರೆಗೆ ವಾರ್ಷಿಕ ಬಡ್ಡಿಯನ್ನು ಅವರ ಎಫ್ ಡಿ ಠೇವಣಿಯ ಮೇಲೆ ನೀಡುತ್ತದೆ. ಇಲ್ಲಿ ಏಳು ದಿನಗಳಿಂದ 10 ವರ್ಷಗಳ ವರೆಗೆ FD Deposit ಇಡಬಹುದಾಗಿದೆ. ಹಿರಿಯ ನಾಗರಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಅವಧಿಗಳನ್ನು ಆಯ್ದುಕೊಳ್ಳಬಹುದು.

advertisement

SBI ನಲ್ಲಿ 10 ವರ್ಷಗಳ ಅವಧಿಗೆ ಮೆಚುರಿಟಿ ಆಗುವ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕ 10 ಲಕ್ಷ ರೂಪಾಯಿಗಳನ್ನು ಎಫ್ಡಿ ಇದ್ದರೆ ಸಿಗುವ ಬಡ್ಡಿದರ 6.5%. ಅಲ್ಲಿಗೆ ಯೋಜನೆ ಮುಕ್ತಾಯದ ಅವಧಿಗೆ 19,05,558 ರೂಪಾಯಿಗಳನ್ನು ಹಿಂಪಡೆಯಬಹುದು. ಅಂದರೆ ಹೂಡಿಕೆಯ ಮೇಲೆ ವಾರ್ಷಿಕ ಬಡ್ಡಿ ದರದ ಆಧಾರದ ಮೇಲೆ ಒಟ್ಟು 9,05,558 ಬಡ್ಡಿದರ ಲಭ್ಯವಾಗುತ್ತದೆ.

ಹಿರಿಯ ನಾಗರಿಕರು ಠೇವಣಿ ಇಟ್ಟರೆ ಎಷ್ಟು ಸಿಗುತ್ತೆ ಲಾಭ?

ಇದೇ ಮೊತ್ತವನ್ನು ಅಂದರೆ 10 ವರ್ಷಗಳ ಅವಧಿಗೆ 10 ಲಕ್ಷ ರೂಪಾಯಿಗಳನ್ನು ಹಿರಿಯ ನಾಗರಿಕರು ಒಟ್ಟಾಗಿ ಠೇವಣಿ ಮಾಡಿದರೆ ಲೆಕ್ಕಾಚಾರದ ಪ್ರಕಾರ 7.5% ವಾರ್ಷಿಕ ಬಡ್ಡಿ ದರ ನೀಡಲಾಗುತ್ತದೆ. ಎಫ್ ಡಿ ಯೋಜನೆಯ ಮುಕ್ತಾಯದ ಅವಧಿಯಲ್ಲಿ 21,02,349 ರೂಪಾಯಿಗಳನ್ನು ಪಡೆಯಬಹುದು. ಅಂದರೆ ಕೇವಲ ಬಡ್ಡಿಯಿಂದ 11,02,349 ಆದಾಯ ಸಿಗುತ್ತದೆ.

ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ (Fixed Deposit) ಅಥವಾ ಅವಧಿ ಠೇವಣಿ ಇಟ್ಟರೆ ಬಡ್ಡಿ ಆದಾಯದ ಮೇಲೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಆದರೆ ಎಫ್ ಡಿ ಯೋಜನೆಯ ಆರಂಭದಲ್ಲಿ ತೆರಿಗೆ ವಿನಾಯಿತಿ ಅಂದ್ರೆ ಟಿಡಿಎಸ್ ಕೂಡ ಅನ್ವಯವಾಗುತ್ತದೆ. ಎಫ್ಡಿ ಮುಕ್ತಾಯವಾದ ನಂತರ ನೀವು ಸ್ವೀಕರಿಸುವ ಹಣವನ್ನು ಆದಾಯ ಎಂದು ಪರಿಗಣಿಸಲಾಗುತ್ತದೆ ಹಾಗಾಗಿ ಸ್ಲಾಬ್ ದರದ ಆಧಾರದ ಮೇಲೆ ನೀವು ತೆರಿಗೆ ಪಾವತಿ ಮಾಡಬೇಕು.

IT Return ಸಲ್ಲಿಸಿ:

FD Scheme ಮುಕ್ತಾಯವಾದ ನಂತರ ಸಿಗುವ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕು. ಆದಾಗ್ಯೂ ಐಟಿ ನಿಯಮದ (IT Rules) ಪ್ರಕಾರ ಠೇವಣಿದಾರರು ತೆರಿಗೆ ಕಡಿತ ಅಥವಾ ವಿನಾಯಿತಿ ಪಡೆದುಕೊಳ್ಳಲು ಅರ್ಜಿ ಫಾರ್ಮ್ 15 ಜಿ/ 15 ಎಚ್ ಸಲ್ಲಿಸಬಹುದು ಇದರಿಂದಾಗಿ ಐದು ವರ್ಷಗಳ ತೆರಿಗೆ ಉಳಿತಾಯಕ್ಕೇ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿದೆ.

advertisement

Leave A Reply

Your email address will not be published.