Karnataka Times
Trending Stories, Viral News, Gossips & Everything in Kannada

PMMVY: ಇಂಥ ಮಹಿಳೆಯರ ಖಾತೆಗೆ ನೇರವಾಗಿ ಬರುತ್ತೆ 6,000 ರೂಪಾಯಿ, ಸರ್ಕಾರದ ಈ ಯೋಜನೆ ಪ್ರಯೋಜನ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ!

advertisement

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿದೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಸ್ವಾವಲಂಬನೆ ಜೀವನ ನಡೆಸಲು ಅನುಕೂಲವಾಗುವಂತಹ ಕೆಲವು ಪ್ರಮುಖ ಸಾಲ ಸೌಲಭ್ಯ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಇದೀಗ ಮಹಿಳೆಯರು ತಮ್ಮ ಮಕ್ಕಳಿಗೂ ಕೂಡ ಪೌಷ್ಟಿಕ ಆಹಾರ ನೀಡಬೇಕು. ಗರ್ಭಿಣಿ ಸ್ತ್ರೀ ಆರೋಗ್ಯಕರವಾಗಿ ಮಗುವನ್ನು ಹೆರಬೇಕು ಎನ್ನುವ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡ ಕೇಂದ್ರ ಸರ್ಕಾರ (Central Govt) ಮಹಿಳೆಯರಿಗೆ ಉಚಿತವಾಗಿ Rs 6,000 ಗಳನ್ನು ನೇರವಾಗಿ ಖಾತೆಗೆ ಜಮಾ ಮಾಡಲು ಹೊಸ ಯೋಜನೆ ಒಂದನ್ನು ಆರಂಭಿಸಿದೆ.

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY):

 

 

ಈ ಯೋಜನೆ (PMMVY) ಯ ಅಡಿಯಲ್ಲಿ ಮಹಿಳೆಯರು Rs 6,000 ಗಳನ್ನು ಉಚಿತವಾಗಿ ಪಡೆಯಬಹುದು. ಈ ಯೋಜನೆಯ ಪ್ರಯೋಜನ ಯಾರಿಗೆ ಸಿಗಲಿದೆ ಎಂದು ನೋಡುವುದಾದರೆ, ಕೇಂದ್ರ ಸರ್ಕಾರ ಗರ್ಭಿಣಿ ಸ್ತ್ರೀಯರಿಗಾಗಿಯೇ ಆರಂಭಿಸಿದ ಯೋಜನೆ ಇದಾಗಿದೆ. ಅಪೌಷ್ಟಿಕತೆಯಿಂದ ಹುಟ್ಟುವ ಮಕ್ಕಳು ಮುಂದೆಯೂ ಕೂಡ ಸಮಸ್ಯೆಯನ್ನು ಅನುಭವಿಸುತ್ತಾರೆ ಇದನ್ನು ಹೋಗಲಾಡಿಸುವ ಸಲುವಾಗಿ ಗರ್ಭಿಣಿ ಸ್ತ್ರೀ ಮಗು ಹೊಟ್ಟೆಯಲ್ಲಿ ಇರುವಾಗಲೇ ಸರಿಯಾದ ಉತ್ತಮ ಹಾಗೂ ಪೌಷ್ಟಿಕ ಆಹಾರ ಸೇವನೆ ಮಾಡಿ ಆರೋಗ್ಯವಂತ ಮಗುವನ್ನು ಹೇರಬೇಕು ಎಂದು ಗರ್ಭಿಣಿಯರಿಗೆ 6000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ.

advertisement

ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು:

19 ವರ್ಷಕ್ಕಿಂತ ಮೇಲಿನ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ ಮೊದಲ ಹಾಗೂ ಎರಡನೇ ಹೆರಿಗೆ ಮಾಡಿಕೊಳ್ಳುವ ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತದೆ. ಗರ್ಭಿಣಿ ಸ್ತ್ರೀ ಹೆಸರು ನೋಂದಾಯಿಸಿಕೊಂಡ ನಂತರ ಹಾಗೂ ಮಗುವನ್ನು ಹೆತ್ತ ನಂತರ ಕಂತುಗಳ ಅನುಸಾರ 6,000ಗಳನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ https://wcd.nic.in/schemes/pradhan-mantri-matru-vandana-yojana ಗೆ ಭೇಟಿ ನೀಡಿ. ಹಲ್ಲಿ ಗರ್ಭಿಣಿ ಸ್ತ್ರೀಯರು ಸರಿಯಾದ ಮಾಹಿತಿ ನೀಡುವುದರ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ನೀವು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಅಲ್ಲಿಯ ಸಹಾಯಕಿಯರ ಬಳಿ ಗರ್ಭಿಣಿ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು ಅಂಗನವಾಡಿ ಸಹಾಯಕಿಯರು ನಿಮಗೆ ಹಣ ಬರುವುದಕ್ಕೆ ಎಲ್ಲಾ ವ್ಯವಸ್ಥೆ ಮಾಡುತ್ತಾರೆ ಹಾಗೂ ಪೌಷ್ಟಿಕ ಆಹಾರಗಳನ್ನು ಒದಗಿಸಿಕೊಳ್ಳುವಲ್ಲಿಯೂ ಸಹಾಯ ಮಾಡುತ್ತಾರೆ ಅವರೇ ದೇಶದ ಸಂಪತ್ತು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಜಾರಿಗೆ ತಂದಿದೆ.

advertisement

Leave A Reply

Your email address will not be published.