Karnataka Times
Trending Stories, Viral News, Gossips & Everything in Kannada

Land Transfer: ವ್ಯಕ್ತಿ ಸತ್ತ ಬಳಿಕ ಜಮೀನನ್ನು ಕುಟುಂಬಸ್ಥರ ಹೆಸರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಹೇಗಿದೆ ಗೊತ್ತಾ?

advertisement

ಹಣ (Money) ಮತ್ತು ಆಸ್ತಿಯೂ (Property) ಇಂದಿನ ಜೀವನದಲ್ಲಿ ಅತ್ಯವಶ್ಯ ಆಗಿ ಬಿಟ್ಟಿದೆ. ಹಾಗಾಗಿ ಆಸ್ತಿ ಪಾಲು ಆದಾಗ ಯಾರು ಕೂಡ ಬೇಡ ಎಂದು ಬಿಟ್ಟು ಕೊಡಲಾರರು. ಈ ಆಸ್ತಿ ವಿಭಾಗಕ್ಕೂ ಅನೇಕ ನಿಯಮ ಇದ್ದು ಆಸ್ತಿ ಹೊಂದಿದ್ದಾತನೆ ಮರಣ ಹೊಂದಿದ್ದಾಗ ಆತನ ಕುಟುಂಬಕ್ಕೆ ಈ ಆಸ್ತಿ ಯಾವ ರೀತಿ ವಿಭಾಗ ಮಾಡಿ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

ಖಾತೆ ಬದಲಾಗಿಲ್ಲ ?

ಆಸ್ತಿ ಖಾತೆ (Asset Account) ಬದಲಾಗದೇ ಇರಲು ಅನೇಕ ಕಾರಣ ಇದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಬಹುಪತ್ನಿತ್ವ, ಭೂ ವಿವಾದ ಇದ್ದರೆ ಅಥವಾ ತಿಳುವಳಿಕೆ ಕೊರತೆ ಇದ್ದರೆ ಆಸ್ತಿ ಹೊಂದಿದ್ದ ದಾಖಲಾತಿ ಖಾತೆಯ ಹಕ್ಕು ಬದಲಾವಣೆ ಮಾಡಿರಲಾರರು. ಇದಕ್ಕೆ ಸರಕಾರದ ನಿಯಮ ವಿಭಿನ್ನವಾಗಿದೆ. ಜಮೀನಿನ ವಾರಸು ದಾರರು (Land Heirs) ಅಥವಾ ಆಸ್ತಿಯ ಮಾಲಕರು ಮರಣ ಹೊಂದಿದ್ದರೆ ಆರು ತಿಂಗಳ ಒಳಗೆ ಕಡ್ಡಾಯವಾಗಿ ಖಾತೆ ಬದಲಾವಣೆ ಮಾಡಿಸಲೇ ಬೇಕು ಎಂಬ ನಿಯಮ ಇದೆ. ಪೌತಿ ಖಾತೆ ಮೂಲಕ ಕಡ್ಡಾಯವಾಗಿ ಹಕ್ಕು ಬದಲಾವಣೆ ಮಾಡಲೇ ಬೇಕು.

ಈ ಕ್ರಮ ಅನುಸರಿಸಿ ?

 

 

advertisement

ಜಮೀನಿನ ಮಾಲಿಕ (Land Owner) ತೀರಿ ಹೋದಾಗ ಆ ಆಸ್ತಿಯನ್ನು ಯಾವ ರೀತಿ ವಿಭಾಗಿಸುತ್ತಾರೆ ಎಂದರೆ ಮೊದಲಿಗೆ ಹಕ್ಕು ಬದಲಾವಣೆಗೆ ಪೌತಿ ಖಾತೆಗೆ ಅರ್ಜಿ ಸಲ್ಲಿಸಬೇಕು. ಇದರಲ್ಲಿ ಮರಣ ಹೊಂದಿದ್ದ ವಾರಸುದಾರರ ಹೆಸರು ತೆಗೆದು ಕುಟುಂಬ ಸದಸ್ಯರಲ್ಲಿ ನೇರ ವಾರಸು ದಾರರ (ತಾಯಿ, ಹೆಂಡತಿ, ಮಕ್ಕಳು) ಹೆಸರಿಗೆ ಹಕ್ಕಿನ ವರ್ಗಾವಣೆ ಮಾಡಲಾಗುತ್ತದೆ. ಹಾಗೆಂದು ಸಂಪೂರ್ಣ ಜಮೀನಿನ (Land) ಒಡೆತನ ಅವರಿಗೆ ಇರಲಾರದು ಇದರಲ್ಲಿನ ಸೇವಾ ಸೌಲಭ್ಯ ಪಡೆಯಲು ಮಾತ್ರ ಪೌತಿ ಖಾತೆ ಉಪಯುಕ್ತ ಆಗಲಿದೆ.

11E ಸ್ಕೆಚ್:

ಬಳಿಕ 11E ಸ್ಕೆಚ್ ಗಾಗಿ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿ ನೀವು ಎಲ್ಲ ದಾಖಲಾತಿ ಮತ್ತು ಪಹಣಿಯೊಂದಿಗೆ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.11Eನಲ್ಲಿ ಒಳಗೆ 11Bನಲ್ಲಿ ಯಾರು ಯಾರಿಗೆ ಎಷ್ಟು ಜಮೀನು ಸಿಗುತ್ತದೆ, ಎಷ್ಟು ವಿಸ್ತೀರ್ಣ ಎಂಬ ಎಲ್ಲ ಅಂಶ ಇರಲಿದೆ. ನಿಗಧಿ ಪಡಿಸಿದ ದಿನಾಂಕದಂದು ಭೂ ಮಾಪಕರು ನಿಮ್ಮ ಜಮೀನಿಗೆ ಬಂದು ಅರ್ಜಿಯಲ್ಲಿ ಹೇಳಿದಂತೆ ಪ್ರತೀ ಭಾಗವನ್ನು ಪ್ರತ್ಯೇಕವಾಗಿ ಗುರುತಿಸಿ ಜಮೀನು ಅಳತೆ ಮಾಡಿ ಹಂಚಿಕೆ ಮಾಡಿ ತಿಳಿಸುತ್ತಾರೆ. ಇದಾದ ಬಳಿಕ ನಿಮ್ಮ ಜಮೀನಿನ 11E ನಕ್ಷೆ ಸಿಗಲಿದೆ.

ವಿಭಾಗ ಪತ್ರ:

11E ಸ್ಕೆಚ್ ಬಂದ ಬಳಿಕ ವಿಭಾಗೀಯ ಪತ್ರ ಮಾಡಿಸಬೇಕು.ಅದಕ್ಕಾಗಿ 11E ಸ್ಕೆಚ್ , ಪಾಲುದಾರರ ಆಧಾರ್ ಕಾರ್ಡ್, ವಂಶಾವಳಿ ಪತ್ರ ಇತರ ದಾಖಲಾತಿಯೊಂದಿಗೆ ಹತ್ತಿರದ ಉಪ ನೋಂದಣಿ ಕಚೇರಿಗೆ ಭೇಟಿ ನೀಡಿ. ಬಳಿಕ ವಿಭಾಗ ಪತ್ರದ ಮೂಲಕ ರಿಜಿಸ್ಟರ್ ಡೀಡ್ ಮಾಡಬಹುದು. ನೋಂದಾವಣಿ ಮುಗಿರು 30ದಿನಗ ಒಳಗೆ ಗ್ರಾಮ ಲೆಕ್ಕಿಗರು ಮ್ಯೂಟೇಶನ್ ಪ್ರೊಸೆಸ್ ಮಾಡಲಿದ್ದಾರೆ. ಹೀಗೆ ಮಾಡಿದ್ದಬಳಿಕ ಪ್ರತ್ಯೇಕ ಪಹಣಿ ಪತ್ರ ಲಭ್ಯವಾಗಲಿದೆ.

advertisement

Leave A Reply

Your email address will not be published.