Karnataka Times
Trending Stories, Viral News, Gossips & Everything in Kannada

Post Office Scheme: ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು ಪಡೆಯಿರಿ 9250 ರೂ.!

advertisement

ನೀವು ಒಂದಷ್ಟು ಹಣವನ್ನು ಹೂಡಿಕೆ ಮಾಡಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಿರ್ಧರಿಸಿದ್ದೀರಾ? ನೀವು ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಆದರೂ ಉಳಿತಾಯ ಮಾಡಬೇಕು ಎಂದು ಬಯಸಿದ್ದೀರಾ? ಆದರೆ ಎಲ್ಲಿ ಉಳಿತಾಯ ಮಾಡಬೇಕು, ಹೇಗೆ ಉಳಿತಾಯ ಮಾಡಬೇಕು? ಮಾರ್ಕೆಟ್ ರಿಸ್ಕ್ ಇಲ್ಲದೆ ಹಣವನ್ನು ಸೇವ್ ಮಾಡುವುದು ಹೇಗೆ ಎಂದು ಚಿಂತಿತರಾಗಿದ್ದೀರಾ? ಹಾಗಾದ್ರೆ ಈ ಲೇಖನ ನಿಮಗಾಗಿ.

ಹೌದು, ಸಾಕಷ್ಟು ಜನ ಹೂಡಿಕೆ ಮಾಡಬೇಕು ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ ಇರಬಾರದು ಎಂದೇ ಬಯಸುತ್ತಾರೆ. ಆದರೆ ಹೇಗೆ ಎಲ್ಲಿ ಯಾವಾಗ ಹೂಡಿಕೆ ಮಾಡಬೇಕು ಎನ್ನುವ ಬಗ್ಗೆ ಅರಿವು ಇರುವುದಿಲ್ಲ ಇದೀಗ ಅಂಚೆ ಕಚೇರಿ (Post Office) ಯಲ್ಲಿ ಹೂಡಿಕೆ ಮಾಡುವ ಒಂದು ಬೆಸ್ಟ್ ಯೋಜನೆಯ ಬಗ್ಗೆ ಈ ಲೇಖನದಲ್ಲಿದೆ ಸಂಪೂರ್ಣ ವಿವರ. ಮನೆಯಲ್ಲಿ ಪ್ರತಿ ತಿಂಗಳು 9250ಗಳನ್ನು ನೀವು ಪಿಂಚಣಿ (Pension) ಯಾಗಿ ಹಿಂಪಡೆಯಬಹುದು.

ಅಂಚೆ ಕಚೇರಿಯ ಮಾಸಿಕ ಯೋಜನೆ!

 

 

advertisement

ಇಂಡಿಯನ್ ಪೋಸ್ಟ್ ಆಫೀಸ್ (Indian Post Office) ಮಾಸಿಕ ಆದಾಯ ನೀಡುವ ಯೋಜನೆ ಆರಂಭಿಸಿದ್ದು ಇದರಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭ ಪಡೆಯಬಹುದು ನೀವು ಬಹಳ ಬೇಗ ಹೂಡಿಕೆ ಆರಂಭಿಸಿದರೆ ಕಡಿಮೆ ಮೊತ್ತದ ಹೂಡಿಕೆ ಮಾಡಬಹುದು. ಇದು ಗೌರ್ನಮೆಂಟ್ ಬೆಂಬಲಿತ ಪೋಸ್ಟ್ ಆಫೀಸ್ ಯೋಜನೆ (Post Office Scheme) ಆಗಿರುವುದರಿಂದ ಯಾವುದೇ ಮಾರ್ಕೆಟ್ ಅಪಾಯವು ಕೂಡ ಇರುವುದಿಲ್ಲ. ಹಾಗಾಗಿ ಸುರಕ್ಷತೆಯ ಹೂಡಿಕೆ ಬಯಸುವವರಿಗೆ ಅಂಚೆ ಕಚೇರಿಯ ಈ ಮಾಸಿಕ ಆದಾಯ ಯೋಜನೆ ಬಹಳ ಉತ್ತಮವಾಗಿದೆ ಎನ್ನಬಹುದು.

ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (Post Office Monthly Income Scheme) ಒಬ್ಬ ವ್ಯಕ್ತಿ ಮಾತ್ರವಲ್ಲದೆ ಜಂಟಿಯಾಗಿಯೂ ಕೂಡ ಆರಂಭಿಸುವ ಯೋಜನೆ ಆಗಿದೆ ಈ ಮೂಲಕ ಗಂಡ ಹೆಂಡತಿ ಇಬ್ಬರೂ ಮಾಸಿಕ ಪಿಂಚಣಿ (Pension) ಪಡೆದುಕೊಳ್ಳಲು ಸಾಧ್ಯವಿದೆ ಈ ಮಾಸಿಕ ಆದಾಯ ಯೋಜನೆಗೆ 7.4% ಬಡ್ಡಿ ನೀಡಲಾಗುತ್ತದೆ. ಗಂಡ ಹೆಂಡತಿ ಜಂಟಿಯಾಗಿ ಖಾತೆ ತೆರೆದರೆ ಈ ಯೋಜನೆಯಲ್ಲಿ ಗರಿಷ್ಠ 15 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಬಹುದು. 7.4% ಬಡ್ಡಿ ದರ ಎಂದು ಲೆಕ್ಕ ಮಾಡಿದರೆ ವರ್ಷಕ್ಕೆ ನಿಮಗೆ ಸಿಗುವ ಹಣ 1.11 ಲಕ್ಷ ರೂಪಾಯಿಗಳು.

ಅಂದರೆ ನೀವು ಪ್ರತಿ ತಿಂಗಳು 9250 ಗಳನ್ನು ಪಡೆಯಬಹುದು. ಒಂದು ವೇಳೆ ನೀವು ಒಂಟಿಯಾಗಿ ಖಾತೆಯನ್ನು ತೆರೆದರೆ ಅಥವಾ ಅವಿವಾಹಿತರು ಖಾತೆ ಆರಂಭಿಸುವುದಾದರೆ ಗರಿಷ್ಠ 9 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಆಗ ಇದೇ ಬಡ್ಡಿ ದರದಲ್ಲಿ 60 ವರ್ಷಗಳ ಪ್ರತಿ ತಿಂಗಳು 5,500 ಪಿಂಚಣಿ ಪಡೆಯಲು ಸಾಧ್ಯವಿದೆ. ಹಾಗಾದ್ರೆ ಇನ್ಯಾಕೆ ತಡ ನೀವು ಕೂಡ ಈ ಒಂದು ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಿ ಹಾಗೂ ಭವಿಷ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ.

advertisement

Leave A Reply

Your email address will not be published.