Karnataka Times
Trending Stories, Viral News, Gossips & Everything in Kannada

UPI ID: ಮೊಬೈಲ್ ಫೋನ್ ಕಳೆದುಹೋದರೆ ನಿಮ್ಮ ಯುಪಿಐ ಐಡಿ ಸೇಫ್ ಆಗಿಡಲು ಈ ಕೆಲಸವನ್ನು ತಪ್ಪದೇ ಮಾಡಿ!!

advertisement

ಇಂದಿನ ಸ್ಮಾರ್ಟ್ ಯುಗದಲ್ಲಿ ಮೊಬೈಲ್ ಫೋನ್ (Mobile Phone) ಇಲ್ಲದೆ ಬದುಕುವುದಕ್ಕೆ ಆಗುವುದಿಲ್ಲ ಎನ್ನುವ ಮಟ್ಟಕ್ಕೆ ಮನುಷ್ಯನು ಮೊಬೈಲ್ ಫೋನ್ ಗಳಿಗೆ ಅಡಿಕ್ಟ್ ಆಗಿದ್ದಾನೆ. ಅದಲ್ಲದೆ ಮೊಬೈಲ್ ಫೋನ್ ಇದ್ದರೆ ಕುಳಿತಲ್ಲಿಯೇ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಾನೆ. ಅದಕ್ಕಾಗಿ ಫೋನ್ ಪೇ, ಗೂಗಲ್ ಪೇ ಯಂತಹ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಂಡಿರುತ್ತಾನೆ. ಆದರೆ ಏಕಾಏಕಿ ಮೊಬೈಲ್ ಫೋನ್ ಕಳೆದುಕೊಂಡರೆ, ಮೊಬೈಲ್ ನಲ್ಲಿದ್ದ ಫೋನ್ ಪೇ (PhonePe), ಗೂಗಲ್ ಪೇ (Google Pay) ಅಕೌಂಟ್ ಅನ್ನು ಏನು ಮಾಡುವುದು ಎನ್ನುವ ಗೊಂದಲ ಸಹಜವಾಗಿಯೇ ಇರುತ್ತದೆ. ಅದಲ್ಲದೇ ತಮ್ಮ ಖಾತೆಯಲ್ಲಿ ಹಣವು ದುರಪಯೋಗವಾದರೆ ಎನ್ನುವ ಆತಂಕವು ಕಾಡುತ್ತದೆ. ಆದರೆ ನಿಮ್ಮ ಖಾತೆಯನ್ನು ಮೊಬೈಲ್ ಕಳೆದು ಹೋದ ಮೇಲು ಹೇಗೆ ಸೇಫ್ ಆಗಿ ಇಡಬಹುದು ಎನ್ನುವುದರ ಸಂಪೂರ್ಣ ಮಾಹಿತಿಯು ಇಲ್ಲಿದೆ.

ಮೊದಲಿಗೆ ಈ ಕೆಲಸ ಮಾಡಿದರೆ ನಿಮ್ಮ ಅಕೌಂಟ್ ಸೇಫ್:

ಮೊಬೈಲ್ ಕಳೆದು ಹೋದಾಗ ಕೆಲವು ವಂಚಕರು ಯುಪಿಐ ಆಪ್ (UPI App) ಓಪನ್ ಮಾಡಿ ಹಣವನ್ನು ದೋಚುವ ಸಂಭವ ಹೆಚ್ಚಾಗಿರುತ್ತದೆ. ಹೀಗಾದಾಗ ಮೊದಲಿಗೆ ನಿಮ್ಮ ಯುಪಿಐ ಅಕೌಂಟ್ (UPI ID) ಅನ್ನು ಬ್ಲಾಕ್ ಮಾಡಬೇಕು.

 

advertisement

PayTM UPI ID ಯನ್ನು ಬ್ಲಾಕ್ ಮಾಡುವುದು ಹೇಗೆ?

  • ಮೊದಲಿಗೆ Paytm ಬ್ಯಾಂಕ್ ಸಹಾಯವಾಣಿ ಸಂಖ್ಯೆ 01204456456 ಗೆ ಕರೆ ಮಾಡಬೇಕು. ಆ ಬಳಿಕ ಲಾಸ್ಟ್ ಫೋನ್ ಆಯ್ಕೆಯನ್ನು ಆರಿಸಬೇಕು.
  • ತದನಂತರದಲ್ಲಿ ಬೇರೆ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಈಗಾಗಲೇ ಕಳೆದುಹೋದ ಫೋನ್ ಸಂಖ್ಯೆಯನ್ನು ನಮೂದಿಸಬೇಕು.
  • ಈ ವೇಳೆಯಲ್ಲಿ ಎಲ್ಲಾ ಸಾಧನಗಳಿಂದ ಲಾಗ್‌ಔಟ್ ಆಯ್ಕೆಯನ್ನು ಆರಿಸಬೇಕು. ಅಲ್ಲಿ ಕಾಣುವ Paytm ವೆಬ್‌ಸೈಟ್‌ಗೆ ಹೋಗಿ ಮತ್ತು 24×7 ಸಹಾಯ ಆಯ್ಕೆಯನ್ನು ಆರಿಸಬೇಕು.
  • ಇಲ್ಲಿ ವಂಚನೆಯನ್ನು ವರದಿ ಮಾಡಬೇಕು ಅಥವಾ ನಮಗೆ ಸಂದೇಶ ಕಳುಹಿಸಿ ಆಯ್ಕೆಯನ್ನು ಆರಿಸಬೇಕು. ಕೊನೆಗೆ ಪೊಲೀಸ್ ವರದಿ ಸೇರಿದಂತೆ ಕೆಲವು ವಿವರಗಳನ್ನು ನೀಡಬೇಕು. ನೀವು ನೀಡುವ ಎಲ್ಲಾ ವಿವರಗಳನ್ನು ಪರಿಶೀಲಿಸಿದ ಬಳಿಕವೇ Paytm ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ.

Google Pay UPI ID ಯನ್ನು ಬ್ಲಾಕ್ ಮಾಡುವುದು ಹೇಗೆ?

  • ಮೊದಲಿಗೆ ಯಾವುದೇ ಫೋನ್‌ನಿಂದ 18004190157 ಸಂಖ್ಯೆಯನ್ನು ಡಯಲ್ ಮಾಡಬೇಕು. ಅಲ್ಲಿ ಪೇಟಿಎಂ ಖಾತೆಯನ್ನು ನಿರ್ಬಂಧಿಸುವ ಬಗ್ಗೆ ಗ್ರಾಹಕ ಆರೈಕೆಗೆ ತಿಳಿಸಬೇಕು.
  • ಆ ಬಳಿಕ Android ಬಳಕೆದಾರರು PC ಅಥವಾ ಫೋನ್‌ನಲ್ಲಿ Google Find My Funo ಗೆ ಲಾಗಿನ್ ಆಗಬೇಕು. ನಂತರದಲ್ಲಿ Google Pay ನ ಎಲ್ಲಾ ಡೇಟಾವನ್ನು ಡಿಲೀಟ್ ಮಾಡಬೇಕು. ಇದಾದ ಬಳಿಕ Google Pay ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ.

PhonePe UPI ID ಯನ್ನು ಬ್ಲಾಕ್ ಮಾಡುವುದು ಹೇಗೆ?

  • ಮೊದಲು 02268727374 ಅಥವಾ 08068727374 ಗೆ ಕರೆ ಮಾಡಬೇಕು. ಅಲ್ಲಿ UPI ಐಡಿ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ವಿರುದ್ಧ ದೂರು ದಾಖಲಿಸಬೇಕು.
  • ಆ ಬಳಿಕ OTP ಯನ್ನು ಕೇಳಿದಾಗ SIM ಕಾರ್ಡ್ ಮತ್ತು ಮೊಬೈಲ್ ಫೋನ್ ಕಳೆದುಕೊಂಡಿರುವ ಆಯ್ಕೆಯನ್ನು ನಮೂದಿಸಬೇಕು.
  • ಆ ಬಳಿಕ ಕಸ್ಟಮರ್ ಕೇರ್‌ಗೆ ಸಂಪರ್ಕವು ಲಭ್ಯವಾಗುತ್ತದೆ. ಈ ವೇಳೆಯಲ್ಲಿ ಅಗತ್ಯ ಮಾಹಿತಿಯನ್ನು ಅವರಿಗೆ ನೀಡುವ ಮೂಲಕ ನಿಮ್ಮ UPI ಐಡಿಯನ್ನು ಬ್ಲಾಕ್ ಮಾಡಬಹುದು.

advertisement

Leave A Reply

Your email address will not be published.