Karnataka Times
Trending Stories, Viral News, Gossips & Everything in Kannada

Jio: ಕೇವಲ 900 ರೂಪಾಯಿಗಳಿಗೆ 365 ದಿನದ ಅನಿಯಮಿತ ಕರೆ, ಡಾಟಾ ಸೌಲಭ್ಯ ಪಡೆಯಿರಿ, ಇದು ಜಿಯೋದ ಗ್ರಾಹಕರಿಗೆ ಮಾತ್ರ.

advertisement

ಇಂದು ಸ್ಮಾರ್ಟ್ ಫೋನ್ ಬಳಸದೇ ಇರುವವರು ಯಾರು ಇಲ್ಲ. ಪ್ರತಿಯೊಬ್ಬರಿಗೂ ಕೂಡ ಕೈಯಲ್ಲಿ ಒಂದು ಮೊಬೈಲ್ ದಿನದ 24 ಗಂಟೆ ಕೂಡ ಇರಲೇಬೇಕು. ಮೊಬೈಲ್ ಫೋನ್ ಎನ್ನುವುದು ನಮ್ಮ ಜೀವನದ ಒಂದು ಅಂಗವೇ ಆಗಿಬಿಟ್ಟಿದೆ. ಇನ್ನು ಮೊಬೈಲ್ ಫೋನ್ ಮಾತ್ರ ಇದ್ರೆ ಸಾಕೇ ? ಅದಕ್ಕೆ ಸರಿಯಾಗಿ ರಿಚಾರ್ಜ್ ಕೂಡ ಮಾಡಿಸಬೇಕು. ಉತ್ತಮ ರಿಚಾರ್ಜ್ ಪ್ಲಾನ್ ಸಿಕ್ಕರೆ ಗ್ರಾಹಕರಿಗೂ ಕೂಡ ಖುಷಿ! ಹಾಗಾಗಿ ಬೇರೆ ಬೇರೆ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಅನುಕೂಲವಾಗುವಂತಹ ಸ್ಪರ್ಧಾತ್ಮಕ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸಿ ಕೊಡುತ್ತಿವೆ.

Jio ಈ ಆಫರ್ ಬಗ್ಗೆ ತಿಳಿಯಿರಿ!

 

 

ದೇಶದ ದೈತ್ಯ ಟೆಲಿಕಾಂ ಕಂಪನಿ ಜಿಯೋ ತನ್ನ ಗ್ರಾಹಕರಿಗೆ ಈಗಾಗಲೇ ಸಾಕಷ್ಟು ಪೋಸ್ಟ್ ಪೇಯ್ಡ್ (Postpaid) ಹಾಗೂ ಪ್ರಿಪೇಯ್ಡ್ (Prepaid) ಜೊತೆಗೆ ಬ್ರಾಡ್ ಬ್ಯಾಂಡ್ ಸರ್ವಿಸ್ ಕೂಡ ನೀಡುತ್ತಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಕೊಡುವುದರಲ್ಲಿ Jio ಈ ಹಿಂದಿನಿಂದಲೂ ಸಾಕಷ್ಟು ಫೇಮಸ್ ಆಗಿದೆ. ಹಾಗಾಗಿ ಈಗ Jio Offer ಬಗ್ಗೆ ನೀವು ತಿಳಿದರೆ ತಕ್ಷಣಕ್ಕೆ ರೀಚಾರ್ಜ್ ಮಾಡಿಸುತ್ತೀರಿ.

ಜಿಯೋ ದ 900 ರೂಪಾಯಿಗಳ ರಿಚಾರ್ಜ್ ಪ್ಲಾನ್!

advertisement

ನೀವು ವರ್ಷದಲ್ಲಿ ಒಮ್ಮೆ 900 ರೂಪಾಯಿಗಳನ್ನು ರಿಚಾರ್ಜ್ ಮಾಡಿದರೆ ಸಾಕು. ವರ್ಷವಿಡಿ ಮತ್ತೆ ರಿಚಾರ್ಜ್ ಮಾಡುವ ತಲೆಬಿಸಿ ಇಲ್ಲದೆ ರಿಚಾರ್ಜ್ ನ ಪ್ರಯೋಜನವನ್ನು ಪಡೆಯಬಹುದು. ಇದು 336 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯಾಗಿದೆ. ಈ ಹಿಂದೆ ಇದೇ 900 ರೂಪಾಯಿಗಳ ರಿಚಾರ್ಜ್ಗೆ ಕೇವಲ 84 ದಿನಗಳ ವ್ಯಾಲಿಡಿಟಿ ಸಿಗುತ್ತಿತ್ತು ಈಗ ವರ್ಷ ಪೂರ್ತಿ ಅಂದರೆ 336 ದಿನಗಳವರೆಗೆ ವ್ಯಾಲಿಡಿಟಿ ಪಡೆದುಕೊಳ್ಳಬಹುದು.

ದೇಶದ Number One ನ ಜನಪ್ರಿಯ Telecom ಆಗಿರುವ Reliance Jio ತನ ಗ್ರಾಹಕರಿಗಾಗಿ ವಿಶೇಷವಾಗಿ ಅತಿ ಕಡಿಮೆ ವೆಚ್ಚದ ರಿಚಾರ್ಜ್ ಪ್ಲಾನ್ ಘೋಷಿಸಿದೆ, ವರ್ಷಗಳ ಅವಧಿಗೆ ಏನೆಲ್ಲಾ ಬೆನಿಫಿಟ್ಸ್ ಪಡೆಯಬಹುದು ಎಂಬುದನ್ನು ನೋಡೋಣ.

895 ರಿಚಾರ್ಜ್ ಮಾಡಿಸಿ ಸಾಕು!

Jio ಕಂಪನಿ ತನ್ನ ಆಯ್ದ ಗ್ರಾಹಕರಿಗಾಗಿ 895 ರೂಪಾಯಿಗಳ ರಿಚಾರ್ಜ್ ಪ್ಲಾನ್ ಘೋಷಿಸಿದೆ. ಇದರಲ್ಲಿ 336 ದಿನಗಳ ಮಾನ್ಯತೆ ಪಡೆದುಕೊಳ್ಳುವುದು ಮಾತ್ರವಲ್ಲದೆ 24 ಜಿಬಿ ಇಂಟರ್ನೆಟ್ ಡಾಟಾವನ್ನು ಉಚಿತವಾಗಿ ಪಡೆಯಬಹುದು. ಪ್ರತಿ 28 ದಿನಗಳಿಗೆ ಎರಡು ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಕೂಡ ಒದಗಿಸಲಾಗುತ್ತದೆ. ಅನಿಯಮಿತ ಕರೆಗಳ ಪ್ರಯೋಜನ ಹಾಗೂ ದಿನಕ್ಕೆ 100 ಉಚಿತ ಎಸ್ಎಂಎಸ್ ಸೌಲಭ್ಯ ಕೂಡ ಇದರಲ್ಲಿ ಇದೆ. ಹಾಗೆ ಪ್ರತಿ 28 ದಿನಗಳಿಗೆ 50 ಎಸ್ಎಂಎಸ್ ಅನ್ನು ಹೆಚ್ಚುವರಿ ಪ್ರಯೋಜನವು ಸಿಗಲಿದೆ.

ಜಿಯೋ ಪರಿಚಯಿಸಿರುವ ಈ ವಾರ್ಷಿಕ ಪ್ಲಾನ್ ಯಾರಿಗೆ ಅಪ್ಲೈ ಆಗುತ್ತೆ ಗೊತ್ತಾ?

Reliance Jio ಕೆಲವು ಗ್ರಾಹಕರಿಗಾಗಿ ಮಾತ್ರ ಸದ್ಯ ಈ ಯೋಜನೆಯನ್ನು ಬಿಡುಗಡೆ ಮಾಡಿದೆ. ಹೌದು ಜಿಯೋ ಫೋನ್ ಯಾರ ಬಳಿ ಇದಿಯೋ ಅವರು ಈ ಅತ್ಯುತ್ತಮ ರಿಚಾರ್ಜ್ ಪ್ಲಾನ್ ನ ಉಪಯೋಗ ಪಡೆದುಕೊಳ್ಳಬಹುದು. ಜಿಯೋ ಫೋನ್ ಬಳಕೆದಾರರು 895 ರೂಪಾಯಿಗಳನ್ನು ರಿಚಾರ್ಜ್ ಮಾಡಿದರೆ, ವರ್ಷಪೂರ್ತಿ ಉಚಿತ ಡಾಟಾ ಅನಿಯಮಿತ ಕರೆ ಎಸ್ ಎಮ್ ಎಸ್ ಮೊದಲಾದ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

advertisement

Leave A Reply

Your email address will not be published.