Karnataka Times
Trending Stories, Viral News, Gossips & Everything in Kannada

Subsidy Loan: ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ, ಉದ್ಯಮಗಳನ್ನು ಆರಂಭಿಸಲು ಬಡ್ಡಿರಹಿತ 3 ಲಕ್ಷ ಸಹಾಯಧನ!

advertisement

ರಾಜ್ಯ ಸರ್ಕಾರವು ಮಹಿಳೆಯ ಕಲ್ಯಾಣ (Women Development) ಕ್ಕೆ ಒತ್ತು ನೀಡುವ ಮೂಲಕ ವಿವಿಧ ಯೋಜನೆಗಳನ್ನು ಜಾರಿ ತಂದಿವೆ. ಇದೀಗ ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅದೇನು ಅಂದರೆ 2023-24ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುವ ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು , ಈ ಯೋಜನೆಯಡಿಯಲ್ಲಿ ಸಹಾಯಧನ ಸಹಿತ ಸಾಲವನ್ನು ರಾಜ್ಯದ ಮಹಿಳೆಯರು ಪಡೆಯಬಹುದಾಗಿದೆ ಹಾಗಾದ್ರೆ ಆ ಕುರಿತಾದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಈ ಯೋಜನೆಯ ಉದ್ದೇಶವೇನು?

 

 

ರಾಜ್ಯದ ಮಹಿಳಾ ಉದ್ಯಮಿಗಳಿಗೆ Subsidy Loan ನೀಡುವ ಉದ್ಯೋಗಿನಿ ಯೋಜನೆ (Udyogini Scheme) ಯು ಇದಾಗಿದ್ದು, ಇದರಿಂದಾಗಿ ಮಹಿಳೆಯರು ಸ್ವಂತ ಉದ್ಯಮವನ್ನು ಮಾಡಲು ಸಹಾಯಕವಾಗಿದೆ. Private ಬ್ಯಾಂಕ್ ಗಳು, ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಮತ್ತು ಪ್ರದೇಶಿಕ ಗ್ರಾಮೀಣ ಬ್ಯಾಂಕ್ ಗಳು (RRBs) ನಂತಹ ಹಣಕಾಸು ಸಂಸ್ಥೆಯ ಮೂಲಕ ಸಾಲವನ್ನು ಪಡೆಯಬಹುದು.

ಆಯಾ ವರ್ಗದ ಜನರ ಆದಾಯ (Income)ದ ಮಿತಿ ಎಷ್ಟಿರಬೇಕು?

advertisement

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಆದಾಯ ಮಿತಿಯು 2.00 ಲಕ್ಷ ರೂಪಾಯಿಗಳಿದ್ದು, ಘಟಕ ವೆಚ್ಚ ಕನಿಷ್ಟ ರೂ 1.00 ಲಕ್ಷದಿಂದ ಗರಿಷ್ಟ 3.00 ಲಕ್ಷ ರೂಪಾಯಿಗಳಾಗಿವೆ. ಶೇಕಡಾ 50 ರಷ್ಟು ಸಹಾಯಧನವು ಸಿಗಲಿದೆ. ಸಾಮಾನ್ಯ ವರ್ಗದ (OBC) ಫಲಾನುಭವಿಗಳಿಗೆ ಆದಾಯ ಮಿತಿಯು 1.50 ಲಕ್ಷ ರೂಪಾಯಿಗಳಿಂದ ಹೆಚ್ಚು ಮೀರಿರಬಾರದು. ಇನ್ನು, ಘಟಕ ವೆಚ್ಚವು ಗರಿಷ್ಟ ರೂ. 3.00 ಲಕ್ಷ ರೂಪಾಯಿಗಳಿದ್ದು, ಶೇ.30 ರಷ್ಟು ಸಹಾಯಧನ ಸಿಗಲಿದೆ.

ಫಲಾನುಭವಿಗಳಾಬೇಕಾದರೆ ಈ ಮಾನದಂಡಗಳು ಅವಶ್ಯಕ:

  • ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕುಟುಂಬದ ಆದಾಯ ರೂ.1,50,000/- ಗಿಂತ ಕಡಿಮೆಯಿರಬೇಕು.
  • ವಯಸ್ಸಿನ ಮಿತಿ 18 ರಿಂದ 55 ವರ್ಷಗಳ ನಡುವೆ ಇರಬೇಕು.
  • ಅರ್ಜಿದಾರರು ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೊಂದಿದವರಾಗಿರಬೇಕು.
  • ಅರ್ಜಿ ಸಲ್ಲಿಸಲು 2 ಪಾಸ್ಪೋರ್ಟ್ ಸೈಜ್ ಫೋಟೋ (2 Passport Size Photo), ಆಧಾರ್ ಕಾರ್ಡ್ (Aadhar Card), ಜನ್ಮ ಪ್ರಮಾಣ ಪತ್ರ (Birth Certificate) , ಬಿಪಿಎಲ್ ರೇಷನ್ ಕಾರ್ಡ್ ಪ್ರತಿ (BPL Ration Card Xerox) ಆದಾಯ ಪ್ರಮಾಣ ಪತ್ರ (Income Certificate), ಜಾತಿ ದೃಢೀಕರಣ ಪ್ರಮಾಣಪತ್ರ (Caste Certificate), ಬ್ಯಾಂಕ್ ಪಾಸ್ ಬುಕ್ (Bank Passbook) ಈ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಬೇಕು.

ಈ ಯೋಜನೆಯ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸುವುದು ಹೇಗೆ?

  • ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ (Gram One), ಕರ್ನಾಟಕ ಒನ್ (Karnataka One), ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 22, 2023, ಅರ್ಜ ಡಿಸೆಂಬರ್ 22, 2023 ರವರೆಗೆ ಸಮಯವಕಾಶವಿರುತ್ತದೆ.

advertisement

Leave A Reply

Your email address will not be published.