Karnataka Times
Trending Stories, Viral News, Gossips & Everything in Kannada

Balika Samridhi Yojana: ಈ ಯೋಜನೆಯಲ್ಲಿ ಓದುತ್ತಿರುವ ಹೆಣ್ಣು ಮಗುವಿಗೆ ಸಿಗುತ್ತೆ ಹಣ, ಕೂಡಲೇ ಅಪ್ಲೈ ಮಾಡಿ!

advertisement

ಹಿಂದೆಲ್ಲ ಹೆಣ್ಣು ಮಕ್ಕಳು ಜನಿಸಿದರೆ ಅದು ಶಾಪ ಎಂದೇ ಬಿಂಬಿಸಲಾಗುತ್ತಿತ್ತು. ಭ್ರೂಣ ಹತ್ಯೆ ಕೂಡ ಮಾಡಲಾಗುತ್ತಿತ್ತು ಆದರೆ ಈಗ ಕಾನೂನಿನ ಚೌಕಟ್ಟು ಬಲಗೊಳ್ಳುತ್ತಿರುವ ಕಾರಣ ಇಂತಹ ವಿಚಾರಗಳ ಬಗ್ಗೆ ಜನ ಕೂಡ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಇದರೊಂದಿಗೆ ಜನರಿಗೆ ಹೆಣ್ಣಿನ ಬಗ್ಗೆ ಕೀಳರಿಮೆ ಉಂಟಾಗದಂತೆ ಮಾಡಲು ಸರಕಾರ ಕೂಡ ಅನೇಕ ವಿಧವಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.

ಈಗಾಗಲೇ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana), ಭೇಟಿ ಬಚಾವೊ ಭೇಟಿ ಪಡಾವೊ (Beti Bachao Beti Padhao), ಬಾಲಿಕಾ ಸಮೃದ್ಧಿ ಯೋಜನೆ (Balika Samridhi Yojana), BCSE ಉಡಾನ್ ಯೋಜನೆ, ಮುಖ್ಯಮಂತ್ರಿ ಲಾಡ್ಲಿ ಯೋಜನೆ (CM Ladli Yojana), ಮುಖ್ಯ ಮಂತ್ರ ರಾಜಶ್ರೀ ಇನ್ನು ಅನೇಕ ವಿಧವಾದ ಯೋಜನೆ ಹೆಣ್ಣು ಮಕ್ಕಳ ಶೈಕ್ಷಣಿಕ ಆರ್ಥಿಕ ಕ್ಷೇತ್ರದಲ್ಲಿ ಸಹಕಾರಿ ಯಾಗಿರಲು ಬಹಳಷ್ಟು ನೆರವಾಗಿದೆ. ನಾನು ಎಲ್ಲ ಯೋಜನೆಯ ಮುಖ್ಯ ಉದ್ದೇಶ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಅವರ ಸಬಲೀಕರಣ ಮಾಡುವುದಾಗಿದೆ. ಇದರಲ್ಲಿ ಬಹಳ ಮಹತ್ವ ಪೂರ್ಣ ಸ್ಥಾನ ಹೊಂದಿದ್ದ BSY ಯೋಜನೆ ಬಗ್ಗೆ ಅನೇಕರಿಗೆ ಸರಿಯಾಗಿ ಮಾಹಿತಿ ಲಭ್ಯ ವಿಲ್ಲದಾಗಿದೆ. ಹಾಗಾಗಿ ಈ ಲೇಖನ ಪೂರ್ತಿ ಓದಿ.

ಸ್ವರೂಪ ಹೇಗಿದೆ?

 

BSY ಯೋಜನೆ ಅಂದರೆ ಬಾಲಿಕಾ ಸಮೃದ್ಧಿ ಯೋಜನೆ (Balika Samridhi Yojana) ಎನ್ನುವುದು ಹೆಣ್ಣು ಮಗು ಹುಟ್ಟಿನಿಂದ ಹಿಡಿದು ವಿದ್ಯಾಭ್ಯಾಸದ ವರೆಗೆ ಬಹುತೇಕ ಪ್ರಯೋಜನ ಸಿಗಲಿದೆ, ಮಗು ಹುಟ್ಟಿದ ಬಳಿಕ 500 ನಂತೆ ನೀಡಲಾಗುವುದು. ಪ್ರತೀ ವರ್ಷ ಹೆಣ್ಣು ಮಗಿವಿನ ಶೈಕ್ಷಣಿಕ ಕಾರಣಕ್ಕೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. 5ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ 600, 700, 800, 1000 ರೂಪಾಯಿ ನಂತೆ ನೀಡಲಾಗುವುದು.

advertisement

ಅರ್ಹತೆ ಏನು?

  • ಭಾರತದಲ್ಲಿ ಕಾಯಂ ನಿವಾಸಿಯಾಗಿರಬೇಕು.
  • ಬಡತನ ರೇಖೆಗಿಂತ ಕೆಳಗಿನವರಿಗೆ ಮಾತ್ರವೇ ಅವಕಾಶ.
  • ಆಗಸ್ಟ್ 15, 1997 ರ ನಂತರದ ಮಕ್ಕಳಿಗೆ ಮಾತ್ರವೇ ಈ ಯೋಜನೆ ಅರ್ಹತೆ ಇರಲಿದೆ.
  • ಒಂದು ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಅವಕಾಶ.
  • ದೇಶಿಯ ದಾಖಲಾತಿ ಎಲ್ಲ ಸರಿಯಾಗಿರಬೇಕು.

ಈ ದಾಖಲಾತಿ ಅಗತ್ಯ:

ರೇಶನ್ ಕಾರ್ಡ್ (Ration Card), ಆಧಾರ್ ಕಾರ್ಡ್ (Aadhaar Card), ಜನನ ಪ್ರಮಾ ಪತ್ರ (Birth Certificate), ಆದಾಯ ಪ್ರಮಾಣ ಪತ್ರ (Income Certificate), ಪೋಷಕರ ಗುರುತು ಚೀಟಿ (Parent’s Identity Card), ವಿಳಾಸ ಪುರಾವೆ (Address Proof), ಪಾಸ್ ಪೋರ್ಟ್ ಸೈಜ್ ಫೋಟೋ (Passport Size Photo), ಬ್ಯಾಂಕ್ ಪಾಸ್ ಬುಕ್ (Bank Pass Book) ವಿವರ ಇತರ ದಾಖಲಾತಿ ಅಗತ್ಯವಾಗಿದೆ.

ಅರ್ಜಿ ಸಲ್ಲಿಕೆ ಹೇಗಿದೆ?

ಈ ಒಂದು BSY ಯೋಜನೆಗೆ ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀವು ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರಿಂದ ಅಥವಾ ಆರೋಗ್ಯ ಸೇವಾ ಕೇಂದ್ರದಲ್ಲಿ ಈ ಸಂಬಂಧಿತ ಅರ್ಜಿ ಪಡೆಯಬೇಕು. ನಗರ ಪ್ರದೇಶದಲ್ಲಿ ಈ ಪ್ರಕ್ರಿಯೆ ಭಿನ್ನವಾಗಿದ್ದು ನೀವು ಹತ್ತಿರದ ಆರೋಗ್ಯ ಕಾರ್ಯ ನಿರ್ವಾಹಕರ ಕಚೇರಿಗೆ ಹೋಗಬೇಕು.

advertisement

Leave A Reply

Your email address will not be published.