Karnataka Times
Trending Stories, Viral News, Gossips & Everything in Kannada

PM Awas Yojana: ಕಾಂಗ್ರೇಸ್ ಸರಕಾರದ ಇನ್ನೊಂದು ಗ್ಯಾರಂಟಿ, ಬಡವರ್ಗಕ್ಕೆ ಮನೆ ಭಾಗ್ಯ ಘೋಷಣೆ!

advertisement

ದೇಶದ ವ್ಯವಸ್ಥೆ ಅದೆಷ್ಟು ಮುಂದುವರಿದರೂ ಇನ್ನು ಕೂಡ ಅಭಿವೃದ್ಧಿ ಕಾಣಬೇಕಾದ ಅನೇಕ ಸಂಗತಿಗಳು ಇರುವುದನ್ನು ಕಾಣಬಹುದು. ಅಂತಹ ವಿಚಾರದಲ್ಲಿ ಮನೆ ಕೂಡ ಸೇರಿಕೊಂಡಿದೆ. ದೇಶದಲ್ಲಿ ಇಂದಿಗೂ ಮನೆ ಸಮಸ್ಯೆ ಬಹಳ ದೊಡ್ಡ ಮಟ್ಟಿಗೆ ಇದೆ. ಮನೆ ಕಟ್ಟುವುದು ಬಹುತೇಕರ ಆಸೆ ಆಗಿದ್ದರೂ ಹಣ ಸಮಸ್ಯೆಯಿಂದ ಬಾಡಿಗೆ ಮನೆಯಲ್ಲೇ ವಾಸ ಕಂಡುಕೊಳ್ಳುತ್ತಾರೆ. ಹಾಗಾಗಿ ಸರಕಾರದ ಈ ಒಂದು ಯೋಜನೆಯೆ ಫಲಾನುಭವಿಗಳಾದರೆ ಮನೆಕಟ್ಟಲು ದೊಡ್ಡ ಮಟ್ಟಿಗೆ ಸಹಾಯಧನ ಸರಕಾರ ನೀಡಲಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಗೃಹ ನಿರ್ಮಾಣದ ವಿಚಾರ ಮುನ್ನೆಲೆಗೆ ಬಂದಿದೆ. ಈ ಮೂಲಕ ಶೀಘ್ರವೇ ನೂತನ ವಸತಿ ಯೋಜನೆ ಕಾರ್ಯಗತವಾಗುವ ಬಗ್ಗೆ ಅವರು ಮಾತನಾಡಿದ್ದಾರೆ. ಸಿಎಂ ಜೊತೆ ಚರ್ಚಿಸಿ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಎಚ್. ಕೆ. ಪಾಟೀಲ್ (Minister H. K. Patil) ಅವರ ಉಪಸ್ಥಿತಿಯಲ್ಲಿ ಮಾಧ್ಯಮದ ಮುಂದೆ ಬಡವರ್ಗಕ್ಕೆ ಮನೆ ಹಂಚಿಕೆ ಮಾಡುವ ವಿಚಾರವನ್ನು ವಸತಿ ಸಚಿವ ಜಮೀರ್ ಖಾನ್ (Housing Minister Zameer Khan) ಅವರು ಎತ್ತಿ ಹಿಡಿದಿದ್ದಾರೆ. ಹೀಗಾಗಿ ಇದು ಕಾಂಗ್ರೆಸ್ ಅವಧಿಯ ಮುಂದಿನ ಗ್ಯಾರೆಂಟಿ ಎಂಬ ಹೆಗ್ಗಳಿಕೆಯೊಂದಿಗೆ ಕೇವಲ ಒಂದೇ ಲಕ್ಷ ರೂಪಾಯಿಗೆ ಮನೆ ಭಾಗ್ಯ ನೀಡ್ತೇವೆ ಎಂಬ ಧೋರಣೆ ಅನೇಕ ಬಡವರ್ಗದ ಅಭಿವೃದ್ಧಿಗೆ ಸಹಕಾರಿ ಆಗಿದೆ.

ವಸತಿ ಸಚಿವರು ಹೇಳಿದ್ದೇನು?

 

 

advertisement

ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಬಗ್ಗೆ ಅವರು ಮಾತನಾಡಿದ್ದಾರೆ. 2015 ರಿಂದ 2023 ರ ವರೆಗೆ ಈ ಯೋಜನೆಯಡಿ ಯಾರಿಗೂ ಮನೆ ನಿರ್ಮಾಣ ಮಾಡಿ ಕೊಟ್ಟಿಲ್ಲ. 2015ರಲ್ಲಿ ಈ ಯೋಜನೆಯ ಅಡಿಯಲ್ಲಿ 1,80,253 ಯೋಜನೆಗಳು ಮಂಜೂರಾಗಿದ್ದವು. ಆದರೆ 2018ರಲ್ಲಿ ಯಾವ ಮನೆ ವಿಚಾರಕ್ಕೂ ಮಂಜೂರಾತಿ ಸಿಕ್ಕಿರಲಿಲ್ಲ. ಈ ಒಂದು ಯೋಜನೆ ಬಡವರ್ಗಕ್ಕೆ ನೆರವಾಗಲಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಹಯೋಗದ ಮೂಲಕ ಜಾರಿಗೆ ತರಲಾಗುವುದು.

ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳು 4.5ಲಕ್ಷ ರೂಪಾಯಿ ಪಾವತಿ ಮಾಡಬೇಕು ಬಳಿಕ 1.5ಲಕ್ಷ ಕೇಂದ್ರ ಸರಕಾರ ಮತ್ತು 1 ಲಕ್ಷದಷ್ಟು ಹಣ ರಾಜ್ಯ ಸರಕಾರದಿಂದ ಮಂಜೂರಾಗಲಿದೆ. ಇದುವರೆಗೆ ರಾಜ್ಯದ ಹಣ ಬಿಡುಗಡೆ ಆಗದೇ ಅದು ಹಾಗೇ ಉಳಿದಿದೆ. ಹಾಗಾಗಿ ಹೊಸ ಯೋಜನೆ ಜಾರಿಗೆ ತರ್ತೇವೆ ಎಂದು ಸಚಿವರು ಹೇಳಿದ್ದಾರೆ.

ಬಡವರಿಗೆ ಬಂಪರ್ ಕೊಡುಗೆ:

ಪ್ರಸ್ತುತ ಆವಾಸ್ ಯೋಜನೆ (Awas Yojana) ಯ ಅಡಿಯಲ್ಲಿ 1.8 ಲಕ್ಷ‌ ಮನೆಗಳು ನಿರ್ಮಾಣದ ಹಂತದಲ್ಲಿದ್ದು ಅದರ ಕಾರ್ಯ ನಡೆಯುತ್ತಿದೆ. ಹೊಸ ಯೋಜನೆಯ ಪ್ರಕಾರ ಬಡವರಿಗೆ ಬಂಪರ್ ಕೊಡುಗೆ ಲಭ್ಯವಾಗಲಿದೆ. 500 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ಒಪ್ಪಿದ್ದಾರೆ. ಹಾಗಾಗಿ ಈ ಯೋಜನೆ ಅಡಿಯಲ್ಲಿ 4.5 ಲಕ್ಷ ಮೊತ್ತ ಹಣ ಫಲಾನುಭವಿಗಳು ಕಟ್ಟಬೇಕಿಲ್ಲ ಕೇವಲ ಒಂದು ಲಕ್ಷ ನೀಡಿದರೆ ಸಾಕು ಉಳಿದ ಮೊತ್ತದಲ್ಲಿ ಕೇಂದ್ರದಿಂದ 1.5ಲಕ್ಷ ರೂಪಾಯಿ ಮತ್ತು ರಾಜ್ಯದಿಂದ ಉಳಿದ ಮೊತ್ತ ಬರಿಸಲಾಗುವುದು. ರಾಜ್ಯ ಸರಕಾರದ 500ಕೋಟಿ ರೂಪಾಯಿ ಅನುದಾನದಿಂದ 48,000ಕ್ಕೂ ಅಧಿಕ ಮನೆ ನಿರ್ಮಾಣವಾಗಲಿದೆ. ಫಲಾನುಭವಿಗಳಿಗೆ ಕೂಡ ಒಂದು ಲಕ್ಷ‌ ಮೊತ್ತ ಬರಿಸಲು ಸಾಕಷ್ಟು ಸಮಯಾವಕಾಶ ನೀಡುವುದಾಗಿ ಸಚಿವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

advertisement

Leave A Reply

Your email address will not be published.