Karnataka Times
Trending Stories, Viral News, Gossips & Everything in Kannada

Triple Khan’s: ಅಂಬಾನಿ ಕುಟುಂಬದ ಮದುವೆಗೆ ತ್ರಿವಳಿ ಖಾನ್ ಗಳ ಸಂಭಾವನೆ ಬಯಲು…

advertisement

ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗೆ ನಡೆಯುತ್ತಿದೆ. ಮದುವೆ ಪೂರ್ವ ಸಿದ್ಧತೆ ಕಾರ್ಯಕ್ರಮಗಳು ಅದ್ಧೂರಿ ಆಗಿ ನಡೆಯುತ್ತಿದ್ದ ಕಾರಣ ಅನೇಕ ಗಣ್ಯಾತಿ ಗಣ್ಯರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮದುವೆ ಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಸದ್ಯ ಅಂಬಾನಿ ಮನೆಯ ಅದ್ಧೂರಿ ಔತಣ ಎಲ್ಲರ ಮನ ಗೆಲ್ಲುತ್ತಲಿದೆ. ಮದುವೆ ಸಂಭ್ರಮಕ್ಕೆ ಬಾಲಿವುಡ್ ಫೇಮಸ್ ತಾರೆಯರು ಕೂಡ ಸಾಥ್ ನೀಡಿದ್ದು ವೀಡಿಯೋ ದೊಡ್ಡ ಮಟ್ಟದ ಸುದ್ದಿ ಮಾಡುತ್ತಿದೆ.

ಅಂಬಾನಿ ಕುಟುಂಬದಲ್ಲಿ ಮುಕೇಶ್ ಅಂಬಾನಿ ಅವರ ಮೂರನೇ ಪುತ್ರ ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್ಸ್ (Radhika Merchant) ಅವರು ಅದ್ಧೂರಿಯಾಗಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು ಈಗಾಗಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿದ್ದು ಅದಕ್ಕೆ ಅನೇಕ ಸಿನೆಮಾ ತಾರೆಯರು, ಕ್ರೀಡಾ ತಾರೆಯರು ಗಣ್ಯ ವ್ಯಕ್ತಿಗಳು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಅಂಬಾನಿ ದಂಪತಿಗಳು ಕೂಡ ಡ್ಯಾನ್ಸ್ ಮಾಡಿ ವೈರಲ್ ಆಗಿದ್ದರು ಅದಕ್ಕೂ ಮಿಕ್ಕಿ ಅನೇಕರಿಗೆ ಆಶ್ಚರ್ಯವಾದ ಸಂಗತಿ ಎಂದರೆ ಅದು ಬಾಲಿವುಡ್ ತಾರೆಯರ ಡ್ಯಾನ್ಸ್ ಎನ್ನಬಹುದು.

ಖಾನ್ ಗಳ ಸಂಗಮ:

 

 

advertisement

ಬಾಲಿವುಡ್ ತಾರಾಗಣದಲ್ಲಿ ಕೂಡ ಆಗಾಗ ಖಾನ್ ಫ್ಯಾನ್ಸ್ ಗಳ ನಡುವೆ ಸ್ಟಾರ್ ವಾರ್ ನಡೆಯುತ್ತಲೇ ಇರುತ್ತದೆ. ಆದರೆ ಬಾಲಿವುಡ್ ಮೂರು ಖಾನ್ ಗಳು (Triple Khan’s) ಒಂದೇ ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ಅಚ್ಚರಿ ಗೊಳಿಸಿದ್ದಾರೆ. ಶಾರುಖ್ ಖಾನ್ (Shah Rukh Khan), ಅಮೀರ್ ಖಾನ್ (Aamir Khan) ಹಾಗೂ ಸಲ್ಮಾನ್ ಖಾನ್ (Salman Khan) ಅವರು ಒಂದೇ ವೇದಿಕೆ ಮೇಲೆ ಸಂಚಲನ ಮೂಡಿಸಿದ್ದಾರೆ. ನಾಟೊ ನಾಟೊ ಹಾಡಿಗೆ ಹುಚ್ಚೆದ್ದು ಕುಣಿದಿದ್ದು ಮೂವರ ಸಂಗಮ ಕಂಡು ಅಭಿಮಾನಿಗಳು ಕಂಪ್ಲೀಟ್ ಖುಷಿಯಾಗಿದ್ದಾರೆ.

ಬಾರಿ ಮೊತ್ತದ ಹಣ:

ಬಾಲಿವುಡ್ ಹಾಗೂ ಕ್ರೀಡಾತಾರೆಯರ ಸಂಭ್ರಮ ಸಡಗರ ಅಂಬಾನಿ ಕುಟುಂಬದ ಮನೆಯಲ್ಲಿ ಕಂಡು ಬಂದಿದ್ದು ಈ ತಾರೆಯರಿಗೆ ದೊಡ್ಡ ಮೊತ್ತದ ಹಣ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ. ಆದರೆ ಇನ್ನೊಂದು ಮಾಹಿತಿಯ ಪ್ರಕಾರ ಈ ಮಾಹಿತಿ ಸುಳ್ಳು ಎಂಬುದು ಕೂಡ ಸಾಬೀತು ಆಗಿದ್ದು ವೇದಿಕೆ ಮೇಲೆ ತೆರಳಲು ಯಾವ ತಾರೆಯರು ಹಣ ಪಡೆದಿಲ್ಲ ಅವರೆಲ್ಲ ಮದುವೆ ಕಾರ್ಯಕ್ರಮಕ್ಕಾಗಿಯೆ ಬಂದವರು ಎಂದು ಹೇಳಲಾಗುತ್ತಿದೆ.

ಧೋನಿ ದಾಂಡೇಲಿ ನೃತ್ಯ:

ಮದುವೆ ಮನೆಯಲ್ಲಿ ಕ್ರಿಕೆಟ್ ತಾರೆ MS Dhoni ಕೂಡ ದಾಂಡೇಲಿ ನೃತ್ಯ ಮಾಡಿ ಎಲ್ಲರನ್ನು ಅಚ್ಚರಿ ಪಡಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಬಾಲಿವುಡ್ ನ ಅನೇಕ ಫೇಮಸ್ ಹೀರೋಯಿನ್ ಗಳು ಮನ ಬಿಚ್ಚಿ ಕುಣಿದಿದ್ದಾರೆ. ಒಟ್ಟಾರೆಯಾಗಿ ಈ ಎಲ್ಲ ಸಂಭ್ರಮ ಮದುವೆ ಮನೆಯ ವಾತಾವರಣವನ್ನು ಇನ್ನಷ್ಟು ಮೆರುಗುಗೊಳಿಸಿದೆ‌.

advertisement

Leave A Reply

Your email address will not be published.