Karnataka Times
Trending Stories, Viral News, Gossips & Everything in Kannada

Best Mileage Cars: ತಿಂಗಳ ಇಂಧನ ಖರ್ಚು ಉಳಿಸಬಲ್ಲ ಬೆಸ್ಟ್ 7 ಕಾರುಗಳು ಇಲ್ಲಿವೆ! ಅದ್ಬುತ ಮೈಲೇಜ್ ಕಡಿಮೆ ಬೆಲೆ

advertisement

ಇವತ್ತಿನ ದಿನಗಳಲ್ಲಿ ಪ್ರಯಾಣಕ್ಕಾಗಿ ಸ್ವಂತ ವಾಹನ ಹೊಂದಿರುವುದು ಸಾಮಾನ್ಯ. ಅದರಲ್ಲೂ ಹೆಚ್ಚಾಗಿ ಜನ ಕುಟುಂಬ ಪ್ರಯಾಣಕ್ಕಾಗಿ ಕಾರನ್ನು ಹೊಂದಿರುತ್ತಾರೆ. ಅಥವಾ ಪ್ರತಿದಿನದ ಪ್ರಯಾಣಕ್ಕಾಗಿ ಕಾರನ್ನು ಅವಲಂಬಿಸುತ್ತಾರೆ. ಆದರೆ ಎಲ್ಲರಿಗೂ ತಿಳಿದಿರುವಂತೆ ಇಂಧನದ ಬೆಲೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ. ಹಾಗಾಗಿ ದಿನವೂ ಇಂಧನ ವಾಹನ ಓಡಿಸುವವರಿಗೆ ತಿಂಗಳ ಬಜೆಟ್ ಹೆಚ್ಚುತ್ತಿದೆ. ನಿಮಗೆ ಸ್ವಲ್ಪಮಟ್ಟಿಗಾದರೂ ತಿಂಗಳ ಇಂಧನ ಖರ್ಚನ್ನು ಉಳಿಸಿಕೊಳ್ಳಬೇಕು ಎಂದಿದ್ದರೆ ಈ ಕೆಳಗಿನ ಕೆಲವು ಕಾರುಗಳನ್ನ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

Maruti Suzuki Alto K10:

 

 

ಸಿಟಿ ಪ್ರದೇಶದಲ್ಲಿ ಓಡಿಸಲು ಬಹಳ ಅನುಕೂಲಕರವಾಗಿರುವ ಕಾರು ಇದಾಗಿದ್ದು 1.0l ನ ಮೂರು ಸಿಲಿಂಡರ್ ಹೊಂದಿರುವ k ಸರಣಿ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. AGS ಟ್ರಾನ್ಸ್ ಮಿಷನ್ ಆಯ್ಕೆಯನ್ನು ನೀಡಲಾಗಿದ್ದು 24.9kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇನ್ನು ಇದರ ಎಕ್ಸ್ ಶೋರೂಮ್ ಆರಂಭಿಕ ಬೆಲೆ 3.99 ಲಕ್ಷ ರೂಪಾಯಿಗಳು.

Tata Altroz:

 

 

ಟಾಟಾ ಅಲ್ಟ್ರೋಜ್ ಕೂಡ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಕಾರ್ ಆಗಿದ್ದು ಇದರ ಎಂಜಿನ್ ನೋಡುವುದಾದರೆ 1.5ಲೀಟರ್ ಡೀಸೆಲ್ ಇಂಜಿನ್ ಅಳವಡಿಸಲಾಗಿದೆ. ಇದರಲ್ಲಿ 5 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಕೊಡಲಾಗಿದೆ. ಪ್ರತಿ ಲೀಟರ್ ಗೆ 24kmpl ಎಮ್ ಪಿ ಎಲ್ ಇಂಧನ ದಕ್ಷತೆಯನ್ನು ನೀಡಬಲ್ಲ ಆಲ್ಟ್ರೊಜ್ ಡೀಸೆಲ್ ವರ್ಷನ್ ನ ಎಕ್ಸ್ ಶೋರೂಮ್ ಬೆಲೆ 8.89 ಲಕ್ಷಗಳಿಂದ ಆರಂಭವಾಗುತ್ತದೆ.

Maruti Suzuki Celerio:

 

 

ಇಂಧನ ದಕ್ಷತೆಗೆ ಹೆಸರುವಾಸಿಯಾಗಿರುವ ಮಾರುತಿ ಸುಜುಕಿ ಸೆಲೆರಿಯೊ ವಿಶೇಷವಾಗಿ ಭಾರತದಲ್ಲಿ ಗೇರ್ ಲೆಸ್ ಕಾರು ಹೆಚ್ಚು ಮಾರಾಟವಾಗಿದ್ದು ಹೆಣ್ಣು ಮಕ್ಕಳಿಗೆ ಇಷ್ಟವಾದ ಕಾರು ಎನ್ನಬಹುದು. ಒಂದು ಪಾಯಿಂಟ್ ಝೀರೋ ಲೀಟರ್ ಮೂರು ಸಿಲಿಂಡರ್ ನ k ಸರಣಿಯ NA ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದರ ಆರಂಭಿಕ ಎಕ್ಸ್ ಶೋರೂಮ್ ಬೆಲೆ ಕೇವಲ 5.36 ಲಕ್ಷ ರೂಪಾಯಿಗಳು. 26.68kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

Honda City e-HEV:

 

advertisement

 

ಇದು ಕೂಡ ಬೇಡಿಕೆ ಇರುವ ಕಾರುಗಳಲ್ಲಿ ಒಂದಾಗಿದ್ದು ಇದರಲ್ಲಿ ಹೈಬ್ರಿಡ್ 1.5 ಲೀಟರ್ ನ್ಯಾಚುರಲ್ ಆಸ್ಪರೇಟೆಡ್ ಇಂಜಿನ್ ಕೊಡಲಾಗಿದೆ. ನಗರ ಪ್ರದೇಶದಲ್ಲಿ ಡ್ರೈವ್ ಮಾಡಿದ್ರೆ ಸುಲಭವಾಗಿ 27kmpl ಮೈಲೇಜ್ ಪಡೆಯಬಹುದು. ಹಾಗೂ ಇದರ ಆರಂಭಿಕ ಎಕ್ಸ್ ಶೋರೂಮ್ ಬೆಲೆ 18.89 ಲಕ್ಷ ರೂಪಾಯಿಗಳು.

Kia Sonet:

 

 

ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಾರಾಟವಾಗಿರುವ ಕಾರುಗಳಲ್ಲಿ ಕಿಯಾ ಸೋನಟ್ ಕಾರು ಕೂಡ ಒಂದು. ಹೆಚ್ಚು ವೈಶಿಷ್ಟ್ಯತೆಗಳನ್ನು ಹೊಂದಿರುವ ಸಬ್ ಕಾಂಪ್ಯಾಕ್ಟ್ ಎಸ್ ಯು ವಿ ಕಾರು ಇದಾಗಿದೆ. 1.5 ಲೀಟರ್ ಡೀಸೆಲ್ ಇಂಜಿನ್ ಅಳವಡಿಸಲಾಗಿದ್ದು, 6 ಸ್ಪೀಡ್ ಮಾನ್ಯುಯಲ್, IMT ಹಾಗೂ ಸ್ವಯಂ ಚಾಲಿತ ಟಾರ್ಕ್ ಪರಿವರ್ತಕವನ್ನು ಜೋಡಿಸಲಾಗಿದೆ. ಇದರ ಆರಂಭಿಕ ಎಕ್ಸ್ ಶೋರೂಮ್ ಬೆಲೆ 9.79 ಲಕ್ಷ ರೂಪಾಯಿಗಳು. ಹಾಗೂ ನಗರ ಪ್ರದೇಶದಲ್ಲಿ 24.1kmpl ಮೈಲೇಜ್ ಅನ್ನು ಪ್ರತಿ ಲೀಟರ್ ಡೀಸೆಲ್ ಗೆ ಕೊಡಬಲ್ಲದು.

Maruti Suzuki Swift:

 

 

ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕಾರುಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕೂಡ ಒಂದು. 1.2 ಲೀಟರ್ k ಸರಣಿಯ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು ಬಹಳ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 22.56kmpl ಮೈಲೇಜ್ ನೀಡಬಲ್ಲ ಕಾರು ಇದಾಗಿದ್ದು ಸ್ವಿಫ್ಟ್ ಕಾರಿನ ಆರಂಭಿಕ ಬೆಲೆ 5.99 ಲಕ್ಷ ರೂಪಾಯಿಗಳು.

Maruti Suzuki Wagon R:

 

 

ನಗರದಲ್ಲಿ ಮಾತ್ರವಲ್ಲದೆ ಹಳ್ಳಿ ಪ್ರದೇಶದಲ್ಲಿಯೂ ಕೂಡ ವ್ಯಾಗನ್ ಆರ್ ಕಾರು ಹೆಚ್ಚು ಜನಪ್ರಿಯಗೊಂಡಿದೆ. 1.0 ಲೀ kಸರಣಿಯ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.2 ಲೀಟರ್ ಕೆ ಸರಣಿಯ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಕೊಡಲಾಗಿದೆ. ಇದು ಸುಮಾರು 29.19 kmpl ಮೈಲೇಜ್ ಕೊಡಬಹುದಾದ ಕಾರು ಆಗಿದ್ದು ಆರಂಭಿಕ ಶೋರೂಮ್ ಬೆಲೆ 5.54 ಲಕ್ಷ ರೂಪಾಯಿಗಳು.

ಇವಿಷ್ಟು ನಗರ ಪ್ರದೇಶಗಳಲ್ಲಿಯೂ ಕೂಡ ಓಡಿಸಿದರೆ ಉತ್ತಮ ಮೈಲೇಜ್ ನೀಡಬಲ್ಲ ಕಾರುಗಳಾಗಿವೆ. ಕೈಗೆಟುಕುವ ಬೆಲೆಯಲ್ಲಿ ಲಭ್ಯ ಇರುವುದರಿಂದ ಮಧ್ಯಮ ವರ್ಗದ ಕುಟುಂಬಕ್ಕೆ ಹೇಳಿ ಮಾಡಿಸಿದಂತ ಕಾರುಗಳು ಇವು ಎನ್ನಬಹುದು.

advertisement

Leave A Reply

Your email address will not be published.