Karnataka Times
Trending Stories, Viral News, Gossips & Everything in Kannada

Credit Card Rules: ಬದಲಾದ ಕ್ರೆಡಿಟ್ ಕಾರ್ಡ್ ನಿಯಮಗಳು; SBI, ICICI Bank ಗ್ರಾಹಕರಿಗೆ ಕಾದಿದ್ಯಾ ಕಹಿ ಸುದ್ದಿ!

advertisement

SBI, Axis Bank ಹಾಗೂ ICICI Bank ಗಳ Credit Card ಅನ್ನು ನೀವು ಹೊಂದಿದ್ದರೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ನಿಯಮಕ್ಕೆ ತಂದಿರುವ ಹೊಸ ಬದಲಾವಣೆಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಮಾರ್ಚ್ ಮತ್ತು ಏಪ್ರಿಲ್ ನಡುವೆ ಈ ಹೊಸ ನಿಯಮಗಳು ಜಾರಿಗೆ ಬರಲಿದ್ದು ಗ್ರಾಹಕರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ.

SBI Bank:

 

 

ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of  India), ಕನಿಷ್ಠ ಬಾಕಿ ಲೆಕ್ಕಾಚಾರದ ವಿಷಯದಲ್ಲಿ ದೊಡ್ಡ ಬದಲಾವಣೆ ತರಲಿದೆ. ಈ ಕನಿಷ್ಠ ಬಾಕಿ ಮೊತ್ತ ಅಂದರೆ GST+EMI ಮೊತ್ತ+100% ಶುಲ್ಕ+5% ಹಣಕಾಸು ಶುಲ್ಕ+ಇತರ ವೆಚ್ಚಗಳು ಮೊದಲಾದವುಗಳನ್ನು ಹೊಂದಿರುತ್ತದೆ. ಈ ಎಲ್ಲಾ ವೆಚ್ಚವನ್ನು ಗ್ರಾಹಕರು ಪಾವತಿಸಬೇಕು. ಮಾರ್ಚ್ 15 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.

ICICI Bank Credit Card Rule Change:

 

 

advertisement

ಇದೆ ಮಾರ್ಚ್ ತಿಂಗಳಿನಿಂದ ಹೊಸ ನಿಯಮವನ್ನು ICICI Bank ಕೂಡ ಪರಿಚಯಿಸಲಿದ್ದು, Credit Card ಮೂಲಕ 35,000 ಗಿಂತ ಹೆಚ್ಚು ಖರ್ಚು ಮಾಡಿದ್ರೆ ಕಾಂಪ್ಲಿಮೆಂಟರಿ ಲಾಂಜ್ ಪ್ರವೇಶದ ಸೌಲಭ್ಯ ಪಡೆಯಬಹುದು ಹಾಗೂ ಒಂದು ತ್ರೈಮಾಸಿಕದ ಅವಧಿಯಲ್ಲಿ ನೀವು ಈ ಹಣವನ್ನು ಪಾವತಿಸಬೇಕು. ಮೂರು ತಿಂಗಳ ಒಳಗೆ ಪಾವತಿ ಮಾಡದಿದ್ದರೆ ಕಾಂಪ್ಲಿಮೆಂಟರಿ ಲಾಂಜ್ ಪ್ರವೇಶದ ಸೌಲಭ್ಯ ಸಿಗುವುದಿಲ್ಲ.

Axis Bank:

 

 

ಯಾವುದೇ ಬಾಡಿಗೆ ವಹಿವಾಟಿನ ಮೇಲೆ 1% ಸರ್ಚಾರ್ಜ್ ವಿಧಿಸಲಾಗುತ್ತದೆ. ಹಾಗೂ ಸೀಲಿಂಗ್ ಮಿತಿ 1500 ಆಗಿರುತ್ತವೆ. ವಿದೇಶಿ ಕರೆನ್ಸಿ ಬಳಕೆಯ ಮೇಲೆ 1% ನಷ್ಟು ಡೈನಾಮಿಕ್ ಕರೆನ್ಸಿ ಪರಿವರ್ತನೆ ಮಾರ್ಕ ಅಪ್ ಶುಲ್ಕ ಪಾವತಿಸಬೇಕಾಗುತ್ತದೆ. ಎಲ್ಲಾ ಹೊಸ ನಿಯಮಗಳು ಮಾರ್ಚ್ 4 ರಿಂದಲೇ ಜಾರಿಗೆ ಬಂದಿವೆ.

HDFC Bank:

 

 

HDFC Regalia ಮತ್ತು ಮಿಲೇನಿಯ ಕ್ರೆಡಿಟ್ ಕಾರ್ಡ್ (Credit Card) ಅನ್ನು ಬಳಸುವವರಿಗೆ ವಿಮಾನ ನಿಲ್ದಾಣದ ಲಾಂಚ್ ನಲ್ಲಿ ಸೀಮಿತ ಪ್ರವೇಶಕ್ಕೆ ಅವಕಾಶ ನೀಡಿತ್ತು. HDFC Regalia Credit Card ನಲ್ಲಿ ಒಂದು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಿದ್ರೆ, ತ್ರೈಮಾಸಿಕದಲ್ಲಿ ಎರಡು ಕಾಂಪ್ಲಿಮೆಂಟರಿ ಲಾಂಜ್ ಪ್ರವೇಶವನ್ನು ಪಡೆದುಕೊಳ್ಳುತ್ತೀರಿ. ಅದೇ ರೀತಿ ಮಿಲೇನಿಯ ಕ್ರೆಡಿಟ್ ಕಾರ್ಡ್ ಬಳಸಿದರೆ ತ್ರೈಮಾಸಿಕದಲ್ಲಿ ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ರೆ ಕಾಂಪ್ಲಿಮೆಂಟರಿ ಏರ್ಪೋರ್ಟ್ ಲಾಂಜ್ ಪ್ರವೇಶ ಸಿಗುತ್ತದೆ.

advertisement

Leave A Reply

Your email address will not be published.