Karnataka Times
Trending Stories, Viral News, Gossips & Everything in Kannada

Iran Currency: ಭಾರತದ ಒಂದು ರೂಪಾಯಿ ಈ ದೇಶದಲ್ಲಿ ಐನೂರು ರೂಪಾಯಿಗೆ ಸಮ! ಯಾವುದು ಈ ರಾಷ್ಟ್ರ ಗೊತ್ತಾ?

advertisement

ಸಾಮಾನ್ಯವಾಗಿ ನಾವು ಭಾರತೀಯ ರೂಪಾಯಿ ಮೌಲ್ಯ ಇತರ ದೇಶಕ್ಕೆ ಹೋಲಿಸಿದರೆ ಕಡಿಮೆ ಎಂದೇ ಭಾವಿಸುತ್ತೇವೆ. ಆದರೆ ಭಾರತೀಯ ರೂಪಾಯಿ ಮೌಲ್ಯ ಕೆಲವು ದೇಶಗಳಲ್ಲಿ ತುಂಬಾ ಹೆಚ್ಚಿದೆ ಎಂದರೆ ನೀವು ನಂಬಲೇಬೇಕು ಅಂತಹ ಒಂದು ಸುಂದರವಾದ ಹಾಗೂ ಪ್ರಾಚೀನ ಉದ್ದೇಶದ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

ಇರಾನ್ ನಲ್ಲಿ ಒಂದು ರೂಪಾಯಿ ಮೌಲ್ಯ ಎಷ್ಟು?

ಐತಿಹಾಸಿಕ ರಾಷ್ಟ್ರವಾಗಿದ್ದು, ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೆ ಅಮೆರಿಕಾದ ಕೆಲವು ಅನಗತ್ಯ ನಿರ್ಬಂಧಗಳಿಂದಾಗಿ ಈ ದೇಶದ ಸ್ಥಿತಿ ಹದಗೆಟ್ಟಿದೆ ಎನ್ನಬಹುದು. ಏನು ರೂಪಾಯ್ ಮೌಲ್ಯದ ವಿಚಾರಕ್ಕೆ ಬಂದರೆ ಭಾರತೀಯ ಒಂದು ರೂಪಾಯಿ (Indian 1 rupee) ಮೌಲ್ಯ ಇಲ್ಲಿ ಕನಿಷ್ಠ 500 ರೂಪಾಯಿಗಳಿಗೆ (500 Rupee) ಸಮ ಎಂದು ಹೇಳಬಹುದು. ಇರಾನ್ ದೇಶದ ಅಧಿಕೃತ ಕರೆನ್ಸಿ ರಿಯಾಲ್ – ಇ – ಇರಾನ್. ರಿಯಾಲ್ ಮೌಲ್ಯ ಒಂದು ಕಾಲದಲ್ಲಿ ಬಹಳ ಜಾಸ್ತಿ ಇತ್ತು. ಆದ್ರೆ ಯಾವಾಗ ಅಮೆರಿಕ ಈ ದೇಶದ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಲು ಆರಂಭಿಸಿತೋ ಅಲ್ಲಿಂದ ಇಲ್ಲಿನ ಆರ್ಥಿಕ ಪರಿಸ್ಥಿತಿಗೆ ಕರೆನ್ಸಿ ಮೌಲ್ಯವು ಕಡಿಮೆಯಾಗಿದೆ. ಅಮೆರಿಕ ದೇಶದ ಆರ್ಥಿಕ ನಿರ್ಬಂಧದ ಫಲವಾಗಿ ಇಲ್ಲಿನ ತೈಲ ಉತ್ಪಾದನೆ ಆದರೂ ಜಗತ್ತಿನ ಬೇರೆ ಕಡೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.

 

 

ಇರಾನ್ ರಾಷ್ಟ್ರದಲ್ಲಿ ಒಂದು ರೂಪಾಯಿ ಮೌಲ್ಯ ಎಷ್ಟು ಗೊತ್ತಾ?

ಇರಾನ್ (Iran) ರಾಷ್ಟ್ರ ಈಗ ಆರ್ಥಿಕವಾಗಿ ಬಹಳ ಸಂಕಷ್ಟವನ್ನು ಎದುರಿಸುತ್ತಿದೆ ಭಾರತದೊಂದಿಗೆ ಇರಾನ್ ಸಂಪರ್ಕ ಉತ್ತಮವಾಗಿದ್ದರು ಕೂಡ ಆರ್ಥಿಕವಾಗಿ ಮಾತ್ರ ಇರಾನ್ ಪರಿಸ್ಥಿತಿ ಹದಗೆಟ್ಟಿದೆ ಎನ್ನಬಹುದು. ಭಾರತದ ಒಂದು ರೂಪಾಯಿ (Indian 1 rupee) ಇರಾನಿನ 507. 22 ರಿಯಾಲ್ ಗೆ ಸಮವಾಗಿದೆ. ಒಬ್ಬ ಭಾರತೀಯ ಪ್ರಜೆಯ ಕೇವಲ 10,000ಗಳನ್ನ ತೆಗೆದುಕೊಂಡು ಇರಾನ್ ರಾಷ್ಟ್ರಕ್ಕೆ ಹೋದರೆ ಐಷಾರಾಮಿಯಾಗಿ ಪ್ರವಾಸ ಮುಗಿಸಿಕೊಂಡು ಬರಬಹುದು. ಫೈವ್ ಸ್ಟಾರ್ ಹೋಟೆಲ್ನಲ್ಲಿ ಇಲ್ಲಿ ದೈನಂದಿನ ಬಾಡಿಗೆ ರೂ.7000. ಮಧ್ಯಮ ವರ್ಗದ ಹೋಟೆಲ್ ಗಳು 2000ರಿಂದ 4000ಗಳನ್ನು ಚಾರ್ಜ್ ಮಾಡುತ್ತವೆ.

advertisement

ಇರಾನ್ ನಲ್ಲಿ ಡಾಲರ್ ಬಳಸುವಂತಿಲ್ಲ!

ಇರಾನ್ ರಾಷ್ಟ್ರದಲ್ಲಿ ಡಾಲರ್ ಇಟ್ಟುಕೊಳ್ಳುವುದು ಅಪರಾಧ ಆದರೆ ಇಲ್ಲಿ ಭಾರತೀಯ ಹಣವನ್ನು ಇಟ್ಟುಕೊಳ್ಳಬಹುದು. ಕಳೆದ ಕೆಲವು ವರ್ಷಗಳಿಂದ ಡಾಲರ್ ಅನ್ನು ಸ್ವೀಕರಿಸುವುದು ಇಲ್ಲ. ಭಾರತ ಸೇರಿದಂತೆ ಇತರ ದೇಶಗಳೊಂದಿಗೆ ಸ್ಥಳೀಯ ಕರೆನ್ಸಿ ವ್ಯವಹಾರವನ್ನು ಮಾತ್ರ ನಡೆಸುತ್ತದೆ. ಇದರಿಂದಾಗಿ ಡಾಲರ್ (Dollar) ಕಳ್ಳ ಸಾಗಾಣಿಕೆ ಅಕ್ರಮದಂತೆ ಇರಾನಿ ಹೆಚ್ಚಾಗಿದೆ ಎನ್ನಬಹುದು.

ಅತ್ಯಂತ ಹಳೆಯ ಕರೆನ್ಸಿ ಹೊಂದಿದೆ ಇರಾನ್:

ಇರಾನ್ ರಾಷ್ಟ್ರದ ರಿಯಾಲ್ ಕರೆನ್ಸಿ (Rial Currency) ಜಗತ್ತಿನ ಅತ್ಯಂತ ಹಳೆಯ ಕರೆನ್ಸಿಗಳಲ್ಲಿ ಒಂದು 1798ರಲ್ಲಿ ರಿಯಾಲ್ ಕರೆನ್ಸಿ ಪರಿಚಯಿಸಲಾಯಿತು. ನಂತರ 1825 ರಲ್ಲಿ ರಿಯಲ್ ಕರೆನ್ಸಿ ಸ್ಥಗಿತಗೊಂಡಿತ್ತು. ಬಳಿಕ ಮತ್ತೆ ರಿಯಾಲ್ ಬಿಡುಗಡೆ ಆದರು, 2012ರಿಂದ ಈ ಕರೆನ್ಸಿ ಮೌಲ್ಯ ಕುಸಿಯಲು ಆರಂಭಿಸಿದೆ. 2020 ಜೂನ್ ಹೊತ್ತಿಗೆ ರಿಯಾಲ್ ಕರೆನ್ಸಿ 5 ಪಟ್ಟು ಕುಸಿತ ಕಂಡಿದೆ ಎನ್ನಬಹುದು.

ಹೆಚ್ಚಿದ ಹಣದುಬ್ಬರ:

ಇರಾನ್ ದೇಶದಲ್ಲಿ 42.4% ನಷ್ಟು ಹಣದುಬ್ಬರ ಇದೆ ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಿದೆ ಇಲ್ಲಿನ ಜನಸಂಖ್ಯೆಯಲ್ಲಿ ಕೇವಲ 27.5% ನಷ್ಟು ಜನ ಮಾತ್ರ ಉದ್ಯೋಗದಲ್ಲಿದ್ದಾರೆ. ಹಿಂದಿಗಿಂತಲೂ 50% ನಷ್ಟು ಬಡತನ ಹೆಚ್ಚಾಗಿದೆ. ಬ್ರಷ್ಟಾಚಾರ ಮುಗಿಲು ಮುಟ್ಟಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಇರಾನ್ ರಾಷ್ಟ್ರ ತನ್ನ ಸ್ವಾಧೀನವನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಆದರೆ ಇರಾನ್ ಒಂದು ಸುಂದರವಾಗಿರುವ ರಾಷ್ಟ್ರ ಇಲ್ಲಿ ಇರುವಷ್ಟು ಹಳೆಯ ವಾಸ್ತುಶಿಲ್ಪ ಬೇರೆ ಯಾವ ದೇಶದಲ್ಲಿಯೂ ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಸುಮಾರು ಏಳು ಸಾವಿರ ವರ್ಷಕ್ಕಿಂತಲೂ ಹಳೆಯ ನಾಗರಿಕತೆಯನ್ನು ಹೊಂದಿರುವ ರಾಷ್ಟ್ರ ಇದು. ಇರಾನ್ ಉತ್ತರ ಭಾಗದಲ್ಲಿ ಹಸಿರು ಕಾಡುಗಳು ಕಂಡುಬಂದರೆ ಉತ್ತರ ಮತ್ತು ಪೂರ್ವ ಭಾಗದಲ್ಲಿ ಉಪ್ಪು ಸರೋವರಗಳು, ಒಣ ಮರುಭೂಮಿ, ಹಿಮದಿಂದ ಆವೃತವಾದ ಪರ್ವತ ಹೀಗೆ ಎಲ್ಲಾ ರೀತಿಯ ನೈಸರ್ಗಿಕ ಸಂಪತ್ತನ್ನು ಕೂಡ ಈ ರಾಷ್ಟ್ರ ಒಳಗೊಂಡಿದೆ.

advertisement

Leave A Reply

Your email address will not be published.