Karnataka Times
Trending Stories, Viral News, Gossips & Everything in Kannada

Maruti Suzuki: ಮಾರುತಿ ಸುಜುಕಿ ಹೊಸ ವರ್ಷದ ಆಫರ್ಸ್, ಟಾಪ್ ಸೆಲ್ಲಿಂಗ್ ಮಾಡೆಲ್ ಗಳ ಮೇಲೆ ಭಾರಿ ಡಿಸ್ಕೌಂಟ್ಸ್.

advertisement

ಡಿಸೆಂಬರ್ ನಲ್ಲಿ ಸೇಲ್ಸ್ ಹೆಚ್ಚಳ ಮಾಡಿಕೊಳ್ಳಲು ಕಾರು ಕಂಪನಿಗಳು ಆಫರ್ ಗಳನ್ನು ನೀಡಿ ಬೆಲೆಗಳನ್ನು ಕಡಿಮೆ ಮಾಡುವುದು ಸರ್ವೇಸಾಮಾನ್ಯ. ಈ ಅವಧಿಯಲ್ಲಿ ಕಡಿಮೆ ಬೆಲೆಗೆ ವಾಹನಗಳು ಸಿಗುತ್ತವೆ ಎಂದು ಸ್ವಲ್ಪ ಪ್ರಮಾಣದಲ್ಲಿ ಸೇಲ್ಸ್ ಕೂಡ ಹೆಚ್ಚಾಗುತ್ತದೆ. ಆದರೆ ಮಾರುತಿ ಸುಜುಕಿ (Maruti Suzuki) ಡಿಸೆಂಬರ್ ನಲ್ಲಿ ಬಿಟ್ಟ ಆಫರ್ ಗಳ ನಂತರ ಈಗ ಜನವರಿಯಲ್ಲಿ ಆಫರ್ ನೀಡುತ್ತಿದೆ.

ಮಾರುತಿ ಸುಜುಕಿ ಹೊಸ ವರ್ಷಕ್ಕೆ ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ನೀಡುತ್ತಿದೆ ತನ್ನ ಟಾಪ್ ಸೆಲ್ಲಿಂಗ್ ವೇರಿಯಂಟ್ (Top Selling Variant) ಗಳಲ್ಲೇ ಆಫರ್ ಗಳನ್ನು ನೀಡಿರುವುದು ಖರೀದಿದಾರರಿಗೆ ಖಂಡಿತವಾಗಿ ಸಹಾಯ ಆಗಲಿದೆ. 2024ರ ಹೊಸ ಮಾಡೆಲನ್ನೇ ಖರೀದಿ ಮಾಡಬೇಕು ಎನ್ನುವವರಿಗೆ ಈಗ ಹೊಸ ಮಾಡೆಲ್ ನ ಜೊತೆಗೆ ಹೊಸ ಆಫರ್ ಗಳು ಕೂಡ ಕೈಗೆ ಸಿಗುತ್ತಿವೆ.

ಮಾರುತಿ ಸುಜುಕಿಯ ಆಲ್ಟೊ (Maruti Suzuki Alto), ವ್ಯಾಗನ್ ಆರ್ (Wagon R) ಮತ್ತು ಸ್ವಿಫ್ಟ್ (Swift) ಕಾರುಗಳ ಮೇಲೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ಕೊಡುಗೆಗಳು ಸೇರಿಕೊಂಡಿವೆ. ಹೊಸ ವರ್ಷಕ್ಕೆ ಹೊಸ ಕಾರು ಖರೀದಿಯ ಪ್ಲಾನ್ ಮಾಡಿದ್ದರೆ ಖಂಡಿತ ಈ ಆಫರ್ಸ್ ಅನ್ನು ಚೆಕ್ ಔಟ್ ಮಾಡಬಹುದು.

Alto:

 

 

ಮಾರುತಿ ಸುಜುಕಿ ಆಲ್ಟೊ ಕೆ10 ಸಿಎನ್ಜಿ (Alto K10 CNG) ಮತ್ತು ಪೆಟ್ರೋಲ್ ಮಾದರಿಗಳಲ್ಲಿ 47 ಸಾವಿರ ರೂಪಾಯಿಗಳ ತನಕದ ಕಡಿತ ಇದೆ ಇದರಲ್ಲಿ 25,000 ನಗದು ರಿಯಾಯಿತಿ ಆದರೆ 15,000 ವಿನಿಮಯ ಬೋನಸ್ ಆಗಿರುತ್ತದೆ ಮತ್ತು 7,000 ತನಕ ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಕೂಡ ನೀಡಲಾಗುತ್ತಿದೆ. ಪೆಟ್ರೋಲ್ ಇಂಜಿನ್ (Petrol Engine) ನೊಂದಿಗೆ ಬರುವ ಈ ಕಾರು 5 ಸ್ಪೀಡ್ ಟ್ರಾನ್ಸ್ಮಿಷನ್ ನೊಂದಿಗೆ ಬರುತ್ತದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 24.39 ರಿಂದ 33.85 ತನಕದ ಮೈಲೇಜ್ ಅನ್ನು ನೀಡುತ್ತದೆ.

advertisement

Swift:

 

 

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ನಲ್ಲಿ 37,000 ರೂಪಾಯಿಗಳ ಕಡಿತ ಇದೆ ಇಲ್ಲಿ 10,000 ನಗದು ರಿಯಾಯಿತಿ ಆದರೆ 20,000 ವಿನಿಮಯ ಬೋನಸ್ ಸಿಗುತ್ತದೆ ಮತ್ತು ಇಲ್ಲಿಯೂ ಕೂಡ 7,000 ರೂಪಾಯಿಗಳ ಕಾರ್ಪೊರೇಟ್ ಡಿಸ್ಕೌಂಟ್ ಸಿಗಲಿದೆ. ಇದರ ಸಿಎನ್ಜಿ ಮಾದರಿಯು 15,000 ವಿನಿಮಯ ಬೋನಸ್ ಮತ್ತು 7,000ಗಳ ಕಾರ್ಪೊರೇಟ್ ಡಿಸ್ಕೌಂಟ್ ನೊಂದಿಗೆ ಲಭ್ಯವಿದೆ.

Wagon R:

 

 

ವ್ಯಾಗನ್ ಆರ್ (Wagon R) ಕಾರಲ್ಲಿ ಸಿಗಲಿರುವ ರಿಯಾಯಿತಿಯು 41,000 ಆಗಿದೆ. ಇದರಲ್ಲಿ 15,000 ನಗದು ರಿಯಾಯಿತಿ ಮತ್ತು 6,000ಗಳ ಕಾರ್ಪೊರೇಟ್ ಡಿಸ್ಕೌಂಟ್ ಜೊತೆಗೆ ರೂ.30,000ಗಳ ಅಪಘಾತ ಬೋನಸ್ ಸಿಗಲಿದೆ. ಸಿ ಎನ್ ಜಿ ಮಾದರಿಯನ್ನು 36,000 ಡಿಸ್ಕೌಂಟ್ ನಲ್ಲಿ ಖರೀದಿ ಮಾಡಬಹುದಾಗಿದೆ. 1 ಲೀಟರ್ ಮತ್ತು 1.2 ಲೀಟರ್ ಇಂಜಿನ್ ನ ಆಯ್ಕೆಗಳೊಂದಿಗೆ ಈ ಕಾರು ಲಭ್ಯವಿದೆ.

advertisement

Leave A Reply

Your email address will not be published.