Karnataka Times
Trending Stories, Viral News, Gossips & Everything in Kannada

Pension: ಪಿಂಚಣಿ ಪಡೆಯುತ್ತಿರುವ ಎಲ್ಲರಿಗೂ ಜನವರಿ 31 ರ ಒಳಗಾಗಿ ಈ ಕೆಲಸ ಕಡ್ಡಾಯ!

advertisement

ಅರವತ್ತು ವರ್ಷ ಮೇಲ್ಪಟ್ಟ ವಯಸ್ಸಾದ ಹಿರಿಯ ನಾಗರಿಕರಿಗೆ ಹಾಗೂ ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿರುವವರಿಗೆ ಕರ್ನಾಟಕ ರಾಜ್ಯ ಸರ್ಕಾರ (Karnataka Govt) ದಿಂದ ಬಿಗ್ ಶಾಕ್ ನೀಡಿದೆ. ಇದೆ ಜನವರಿ 31 ರೊಳಗೆ ಈ ಕೆಲಸ ಮಾಡದಿದ್ರೆ ನಿಮಗೆ ಮುಂದಿನ ತಿಂಗಳಿನಿಂದ ಸರ್ಕಾರದಿಂದ ದೊರೆಯುವ ಯಾವುದೇ ಪಿಂಚಣಿ (Pension) ಹಣ ದೊರೆಯುವುದಿಲ್ಲ ಅಂದ್ರೆ ವೃದ್ಧರ ಪಿಂಚಣಿ, ವಿಧವಾ ವೇತನ, ಅಂಗವಿಕಲ ಪಿಂಚಣಿ ಹಣ ಸೇರಿದಂತೆ ಸರ್ಕಾರದಿಂದ ದೊರೆಯುವ ಎಲ್ಲ ಹಣ ಶಾಶ್ವತವಾಗಿ ಸ್ಥಗಿತಗೊಳ್ಳಲಿದೆ. ಇದೇ ಜನವರಿ 31 ರ ಒಳಗಾಗಿ ಈ ಕೆಲಸ ಮಾಡುವದು ಕಡ್ಡಾಯವಾಗಿದೆ.

ಅಷ್ಟಕ್ಕೂ Pension ಪಡೆಯುವವರು ಮಾಡಬೇಕಿರೋದೇನು?

 

 

ಈ ತಿಂಗಳ ಅಂತ್ಯದೊಳಗೆ ಈ ಕೆಲಸ ಮಾಡದಿದ್ರೆ ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು. ವಾರ್ಷಿಕ ಜೀವಿತ ಪ್ರಮಾಣ ಪತ್ರ (Annual Life Certificate) ಸಲ್ಲಿಸಿದರೆ ಮಾತ್ರ ಪಿಂಚಣಿ ದೊರೆಯುತ್ತದೆ. ಇಲ್ಲದಿದ್ದರೆ ಪಿಂಚಣಿ (Pension) ಕಡಿತಗೊಳಿಸಲಾಗುವುದು. ಹಾಗಾಗಿ ನೀವು ಇನ್ನು ಲೈಫ್ ಸರ್ಟಿಫಿಕೇಟ್ (Life Certificate) ಸಲ್ಲಿಸದೇ ಇದ್ದಲ್ಲಿ ತಕ್ಷಣ ಈ ಕೆಲಸ ಮಾಡಿ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಇದು ಕೆಲವರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನ ಗಮನಿಸಿ. ಸಾಮಾನ್ಯವಾಗಿ ಲೈಫ್ ಸರ್ಟಿಫಿಕೇಟ್ 2023 ಸಲ್ಲಿಕೆಗೆ ಗಡುವು ನವೆಂಬರ್ ಅಂತ್ಯದ ವೇಳೆಗೆ ಮುಗಿದಿದೆ. ಆದರೆ ಕೆಲವರಿಗೆ ಗಡುವು ವಿಸ್ತರಿಸಲಾಗಿದೆ.

advertisement

Life Certificate ನೀಡದಿದ್ರೆ ಏನಾಗುತ್ತದೆ?

ಜೀವನ ಪ್ರಮಾಣ ಪತ್ರ (Life Certificate) ನೀಡುವ ಸೌಲಭ್ಯವನ್ನು 2024ರ ಜನವರಿ ಅಂತ್ಯದವರೆಗೆ ಒದಗಿಸಲಾಗುತ್ತಿದೆ. ಡಿಫೆನ್ಸ್ ಅಕೌಂಟ್ಸ್ ಪಿಂಚಣಿ ವೆಬ್ ಸೈಟ್ ನ ಪ್ರಧಾನ ನಿಯಂತ್ರಕರ ಪ್ರಕಾರ ರಕ್ಷಣಾ ಪಿಂಚಣಿದಾರರು ಜೀವಿತ ಪ್ರಮಾಣವನ್ನು ಒದಗಿಸಲು ಗಡುವನ್ನು ವಿಸ್ತರಿಸಲಾಗಿದೆ. 2024 ರ ಜನವರಿ ಅಂತ್ಯದವರೆಗೆ ಗಡುವು ನೀಡಲಾಗಿದೆ. ಆದ್ದರಿಂದ ಈ ತಿಂಗಳ ಅಂತ್ಯದೊಳಗೆ ಈ ಕೆಲಸ ಪೂರ್ಣಗೊಳಿಸಬೇಕು. ಈ ಲೈಫ್ ಸರ್ಟಿಫಿಕೇಟ್ ನೀಡದಿದ್ದರೆ ಸಮಸ್ಯೆಗಳು ಎದುರಾಗಬಹುದು. ಪಿಂಚಣಿ ಸ್ಥಗಿತಗೊಳ್ಳುವ ಅಪಾಯವಿದೆ. ಆದ್ದರಿಂದ ನಿಯಮಿತ ಪಿಂಚಣಿ ಪಡೆಯಲು ವಿಳಂಬ ಮಾಡದೇ ಜೀವನ ಪ್ರಮಾಣ ಪತ್ರವನ್ನು ಒದಗಿಸಿ, ಇಲ್ಲದಿದ್ದರೆ ಮುಂದಿನ ತಿಂಗಳಿನಿಂದ ಪಿಂಚಣಿ ನಿಲ್ಲುತ್ತದೆ.

ಜೊತೆಗೆ ಕೇಂದ್ರ ಸರ್ಕಾರಿ ನೌಕರರಾಗಿ (Central Govt Employees) ಕೆಲಸ ಮಾಡಿ ನಿವೃತ್ತರಾದವರು ಪಿಂಚಣಿ ಪಡೆಯುತ್ತಿದ್ದರೆ, ಅವರು ಪ್ರತಿ ವರ್ಷ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ನವೆಂಬರ್ ತಿಂಗಳಿನಲ್ಲಿ ಇದರ ಅವಧಿ ಮುಗಿದಿದೆ. ಸಲ್ಲಿಸದಿದ್ದರೆ ಪಿಂಚಣಿ ನಿಲ್ಲುತ್ತದೆ. ಮತ್ತೆ ಆ ಜೀವನ ಪ್ರಮಾಣ ಪತ್ರ ನೀಡಿದ ನಂತರವೇ ಪಿಂಚಣಿ ಬರುತ್ತದೆ.

ಇದೇ ಜನವರಿ ಅಂತ್ಯದ ಒಳಗೆ ಈ ಕೆಲಸ ಕೂಡ ಮಾಡಲೇಬೇಕು:

ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಮೊಬೈಲ್ ನಂಬರ್ ನ್ನು ಲಿಂಕ್ ಮಾಡುವುದು ಕಡ್ಡಾಯ. ಬ್ಯಾಂಕ್ ಅಕೌಂಟ್ (Bank Account) ಗೆ ನಿಮ್ಮ ಆಧಾರ್ ಕಾರ್ಡ್ (Aadhaar Card) ಮೂಲಕ ಈ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ. ಪ್ರತೀ ತಿಂಗಳು ಹಣ ಪಡೆದುಕೊಳ್ಳುತ್ತಿರುವ ನಿಮ್ಮ ಅಕೌಂಟ್ ಗೆ ನಿಮ್ಮ ಪಾನ್ ಕಾರ್ಡ್ (PAN Card) ನಂಬರ್ ಲಿಂಕ್ ಮಾಡಿಸುವುದು ಕಡ್ಡಾಯ. ನೀವು ಆಧಾರ್ ಕಾರ್ಡ್ ಪಡೆದುಕೊಂಡು ೧೦ ವರ್ಷಗಳು ಆಗಿದ್ದರೆ, ಒಮ್ಮೆ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯ. ಅಂದ್ರೆ, ಕಣ್ಣು, ಬೆರಳು, ಫೋಟೋವನ್ನ ಅಪ್ಡೇಟ್ ಮಾಡಿಸಿಕೊಳ್ಳುವುದು ಎಲ್ಲರಿಗೂ ಕಡ್ಡಾಯವಾಗಿದೆ.

 

advertisement

Leave A Reply

Your email address will not be published.