Karnataka Times
Trending Stories, Viral News, Gossips & Everything in Kannada

Atal Pension Yojana: ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ತಲಾ ರೂ. 5,000 ಪಿಂಚಣಿ!

advertisement

ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಸಾಮಾನ್ಯವಾಗಿ ನಿವೃತ್ತಿಯ ನಂತರ ಪಿಂಚಣಿ (Pension) ಸಿಗುತ್ತದೆ. ಆದರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ದುಡಿಯುವ ಸಮಯದಲ್ಲಿ ವೃದ್ಧಾಪ್ಯ ಜೀವನಕ್ಕೆ ಆರ್ಥಿಕ ನೆರವು ನೀಡುವಂತಹ ಹೂಡಿಕೆ ಮಾಡಿದರೆ ಹೆಚ್ಚು ಸೂಕ್ತ.

Atal Pension Yojana:

 

 

ಯಾರಿಗೆ ಪಿಂಚಣಿ ವ್ಯವಸ್ಥೆ ಇರುವುದಿಲ್ಲವೋ, ಅಂಥವರಿಗಾಗಿ ಅಟಲ್ ಪಿಂಚಣಿ ಯೋಜನೆ (Atal Pension Yojana) ಯನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಈಗಾಗಲೇ ಕೋಟ್ಯಾಂತರ ಜನರು ಖಾತೆ ತೆರೆದು ಹೂಡಿಕೆ ಆರಂಭಿಸಿದ್ದಾರೆ. ಅಟಲ್ ಪಿಂಚಣಿಯ ಪ್ರಮುಖ ಪ್ರಯೋಜನ ಅಂದ್ರೆ ಇದನ್ನು ಗಂಡ ಹೆಂಡತಿ ಜಂಟಿ ಖಾತೆ ತೆರೆದು ಆರಂಭಿಸಬಹುದು. ಇದರಿಂದ ನಿವೃತ್ತಿಯ ನಂತರದ ಜೀವನವನ್ನು ಸುಲಭವಾಗಿ ಪಿಂಚಣಿ (Pension) ಪಡೆದು ಕಾಲ ಕಳೆಯಬಹುದು. ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

advertisement

ಅಟಲ್ ಪಿಂಚಣಿ ಯೋಜನೆ (Atal Pension Yojana) ಯಲ್ಲಿ ನೀವು ಯಾವ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುತ್ತೀರಿ ಎಂಬುದರ ಆಧಾರದ ಮೇಲೆ ಹೂಡಿಕೆಯ ಮೊತ್ತ ನಿಗದಿಯಾಗುತ್ತದೆ. 18 ವರ್ಷದಿಂದ 40 ವರ್ಷ ವಯಸ್ಸಿನವರು ಅಟಲ್ ಪಿಂಚಣಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದು. ಪತಿ ಪತ್ನಿ ಜಂಟಿಯಾಗಿ ಖಾತೆ ತೆರೆದು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಆರಂಭಿಸಬಹುದು.

ಇಂದು ದೇಶದಲ್ಲಿ ಬಹಳ ಜನಪ್ರಿಯವಾಗಿರುವ ಅಟಲ್ ಪಿಂಚಣಿ ಯೋಜನೆಯಿಂದ 60 ವರ್ಷ ವಯಸ್ಸಿಗೆ ಬಂದ ನಂತರ ಪ್ರತಿ ತಿಂಗಳು ಗಂಡ ಹೆಂಡತಿ ತಲಾ 5,000 ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯಬಹುದು.

Atal Pension Yojana ಯಲ್ಲಿ ಹೂಡಿಕೆ ಮಾಡುವುದು ಹೇಗೆ:

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ 2024 ರಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಆರಂಭಿಸಲಾಗಿತ್ತು. ನೀವು ಯಾವುದೇ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಅಟಲ್ ಪಿಂಚಣಿ ಯೋಜನೆ ಹೂಡಿಕೆ ಆರಂಭಿಸಬಹುದು ಅಥವಾ ಹತ್ತಿರದ ಪೋಸ್ಟ್ ಆಫೀಸ್ನಲ್ಲಿಯೂ ಕೂಡ ಖಾತೆ ತೆರೆಯಬಹುದು. 20 ವರ್ಷಗಳ ಅವಧಿಯ ಅಟಲ್ ಪಿಂಚಣಿ ಯೋಜನೆಯಲ್ಲಿ ಇಂದೇ ಹೂಡಿಕೆ ಆರಂಭಿಸಿ ಹಾಗೂ ವೃದ್ಧಾಪ್ಯದ ಸಮಯದಲ್ಲಿ ಆರ್ಥಿಕ ಸಬಲತೆ ಕಂಡುಕೊಳ್ಳಿ.

advertisement

Leave A Reply

Your email address will not be published.