Karnataka Times
Trending Stories, Viral News, Gossips & Everything in Kannada

Gold Rate: ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್‌, ಸಂಕ್ರಾಂತಿಗೆ ಸಿಹಿ ಸುದ್ದಿ ಚಿನ್ನದ ದರದಲ್ಲಿ ಇಳಿಕೆ.

advertisement

ಹೊಸ ವರ್ಷದಿಂದ ಈಚೆಗೆ ಸತತ ಐದನೇ ಬಾರಿ ಚಿನ್ನದ ದರ ಇಳಿಕೆಯಾಗಿದೆ. ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಚಿನ್ನ ಖರೀದಿಸುವವರಿಗೆ ಸಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿಯೊಂದು ಲಭಿಸಿದೆ. ಇತ್ತೀಚೆಗೆ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳ ದರಗಳಲ್ಲಿ ಇದೀಗ ಹೆಚ್ಚಳ ಆಗದೇ, ಮತ್ತಷ್ಟು ಇಳಿಕೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಹೌದು ಚಿನ್ನ ಬೆಲೆಯು ಕಳೆದ ಒಂಬತ್ತು, ದಿನಗಳಲ್ಲಿ ಒಮ್ಮೆಯು ಬೆಲೆ ಏರಿಕೆ ಆಗಿಲ್ಲ. ಬದಲಾಗಿ ತುಸು ಇಳಿಕೆ ಆಗುತ್ತಲೇ ಬಂದಿದೆ. ಈವರೆಗಿನ ಮಾಹಿತಿ ಪ್ರಕಾರ ಚಿನ್ನವು ಆರು ಭಾರಿ ಇಳಿಕೆ ಆಗಿದೆ. ಇನ್ನೂ ಜಾಗತಿಕವಾಗಿ ಚಿನ್ನದ ದರ ಯಥಾ ಸ್ಥಿತಿಯಲ್ಲಿದ್ದು, ಬೇಡಿಕೆ ಏರಿಕೆ ಆಗುವ ಲಕ್ಷಣ ಕಂಡು ಬಂದಿದೆ.

ಜನವರಿ 13ರಂದು 22 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 57,600 ರೂಪಾಯಿ ಇದ್ದರೆ, 24 ಕ್ಯಾರೇಟ್ ಚಿನ್ನದ ಬೆಲೆ 62,830 ನಷ್ಟಿದೆ. 100 ಗ್ರಾಂ ಬೆಳ್ಳಿ ಬೆಲೆ 7600 ರೂಪಾಯಿ ಇದೆ.

ಕರ್ನಾಟಕದಲ್ಲಿ ಚಿನ್ನದ ದರ ಎಷ್ಟಿದೆ?

ಇಂದು ಕರ್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ ಗೆ 57,600 ರೂಪಾಯಿ ಇದೆ. 24 ಕ್ಯಾರೆಟ್‌ಗೆ 62,830 ರೂಪಾಯಿ ಇದೆ. ಇತರೆ ಶುಲ್ಕ ಸೇರಿ ಜಿಲ್ಲೆಗಳಿಂದ ಜಿಲ್ಲೆಗಳ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಾಗಬಹುದಾಗಿದೆ.

10 ದಿನದ ಚಿನ್ನದ ಬೆಲೆ ಇಳಿಕೆ-ಹೋಲಿಕೆ

ಈ ಹಿಂದಿನ ಹತ್ತು ದಿನಗಳ ತಟಸ್ಥವಾಗಿದ್ದ ಚಿನ್ನದ ದರ ಕಳೆದ ಆರು ದಿನಗಳಿಂದ ಈವರೆಗೆ ಇಳಿಕೆ ಆಗುತ್ತಲೇ ಬಂದಿದೆ. ಕಳೆದ ದಿನಗಳಿಗೆ ಹೋಲಿಕೆ ಮಾಡಿದರೆ ಇಂದು 22 ಕ್ಯಾರೆಟ್‌ ಚಿನ್ನದ ದರ 115 ರೂಪಾಯಿ ನಷ್ಟು ವ್ಯತ್ಯಾಸ ಕಂಡು ಬಂದಿದೆ. ಕಳೆದ ಜನವರಿ 2 ರಂದು 1 ಗ್ರಾಂ ಚಿನ್ನದ ಚಿನ್ನದ ಬೆಲೆ 5,875 ರೂಪಾಯಿ ಇತ್ತು. ಇಂದು 5,760 ರೂಪಾಯಿ ಇದೆ. ಜನವರಿ 2 ರಂದು 24 ಕ್ಯಾರೆಟ್‌ಗೆ 6,409 ರೂಪಾಯಿ ಕಂಡು ಬಂದಿತ್ತು, ಇಂದು 6,283 ರೂಪಾಯಿ ದರ ನಿಗದಿ ಆಗಿದೆ.

advertisement

ಇಂದಿನ ಬೆಳ್ಳಿಯ ಬೆಲೆ ಹೇಗಿದೆ?

  • 1 ಗ್ರಾಂ ಬೆಳ್ಳಿ- 73.50 ರೂಪಾಯಿ
  • 8 ಗ್ರಾಂ ಬೆಳ್ಳಿ- 588 ರೂಪಾಯಿ
  • 10 ಗ್ರಾಂ ಬೆಳ್ಳಿ- 735 ರೂಪಾಯಿ
  •  100 ಗ್ರಾಂ ಬೆಳ್ಳಿ- 7,350 ರೂಪಾಯಿ
  •  1 ಕಿಲೋ ಬೆಳ್ಳಿಗೆ- 73,500 ರೂಪಾಯಿ ಇದೆ.

ದೇಶದ ಮಹಾನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ ಹೇಗಿದೆ?

ಬೆಂಗಳೂರಲ್ಲಿ 10 ಗ್ರಾಂ ಚಿನ್ನದ ದರ: 57,600 ರೂಪಾಯಿ
ಚೆನ್ನೈ: 58,100 ರೂಪಾಯಿ
ಮುಂಬೈ: 57,600 ರೂಪಾಯಿ
ದೆಹಲಿ: 57,750 ರೂಪಾಯಿ
ಅಹ್ಮದಾಬಾದ್: 57,650 ರೂಪಾಯಿ
ಜೈಪುರ್: 57,750 ರೂಪಾಯಿ
ಲಕ್ನೋ: 57,750 ರೂಪಾಯಿ
ಭುವನೇಶ್ವರ್: 57,600 ರೂಪಾಯಿ
ಕೋಲ್ಕತಾ: 57,600 ರೂಪಾಯಿ
ಕೇರಳ: 57,600 ರೂಪಾಯಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ

ಸೌದಿ ಅರೇಬಿಯಾ: 52,476 ರೂಪಾಯಿ
ಓಮನ್: 53,953 ರೂಪಾಯಿ
ಮಲೇಷ್ಯಾ: 54,176 ರೂಪಾಯಿ
ದುಬೈ: 52,053 ರೂಪಾಯಿ
ಅಮೆರಿಕ: 52,312 ರೂಪಾಯಿ
ಕುವೇತ್: 53,235 ರೂಪಾಯಿ
ಸಿಂಗಾಪುರ: 52,767 ರೂಪಾಯಿ
ಕತಾರ್: 53,926 ರೂಪಾಯಿ

ವಿವಿಧ ನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ ಹೇಗಿದೆ ?

ಬೆಂಗಳೂರು: 7,350 ರೂಪಾಯಿ
ದೆಹಲಿ: 7,600 ರೂಪಾಯಿ
ಕೋಲ್ಕತಾ: 7,600 ರೂಪಾಯಿ
ಜೈಪುರ್: 7,600 ರೂಪಾಯಿ
ಲಕ್ನೋ: 7,600 ರೂಪಾಯಿ
ಚೆನ್ನೈ: 7,750 ರೂಪಾಯಿ
ಮುಂಬೈ: 7,600 ರೂಪಾಯಿ
ಭುವನೇಶ್ವರ್: 7,750 ರೂಪಾಯಿ
ಕೇರಳ: 7,750 ರೂಪಾಯಿ
ಅಹ್ಮದಾಬಾದ್: 7,600 ರೂಪಾಯಿ.

advertisement

Leave A Reply

Your email address will not be published.