Karnataka Times
Trending Stories, Viral News, Gossips & Everything in Kannada

Jio: 100 ರೂಪಾಯಿ ಒಳಗೆ ಅದ್ಭುತ ಎರಡು ರಿಚಾರ್ಜ್ ಪ್ಲಾನ್ ಘೋಷಿಸಿದ ಜಿಯೋ!

advertisement

ಜಿಯೋ (Jio) ತನ್ನ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆಯನ್ನು ಸಣ್ಣ ರಿಚಾರ್ಜ್ ಪ್ಯಾಕ್ ಗಳು ಹಾಗೂ ಹೆಚ್ಚು ಮೌಲ್ಯದೊಂದಿಗೆ ನೀಡುತ್ತಿದೆ. ದೇಶದಲ್ಲಿ ಬಹುದೊಡ್ಡ ನೆಟ್ವರ್ಕ್ ಹೊಂದಿರುವ ಕಂಪನಿಗಳಲ್ಲಿ ಒಂದಾದ ಜಿಯೋ ತನ್ನ ಕಾಂಪಿಟಿಷನ್ ಮುಂದೆ ಇನ್ನೂ ಗಟ್ಟಿಯಾಗಿ ನಿಲ್ಲಲು ಕಡಿಮೆ ತರದ ಪ್ಲಾನ್ ಗಳನ್ನು ಲಾಂಚ್ ಮಾಡುತ್ತಿದೆ. ಇದು ಜನರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಲಾಂಚ್ ಮಾಡಲಾದ ಪ್ಲಾನ್ ಗಳು ಎಂದು ಜಿಯೋ ಹೇಳಿಕೊಂಡಿದೆ.

ಹೊಸ ಪ್ಲಾನ್‌ಗಳಲ್ಲಿ ಗ್ರಾಹಕರು ಅನಿಯಮಿತ ಕರೆಗಳು (Unlimited Calls) ಮತ್ತು ಮೆಸೇಜ್ ಗಳನ್ನು ಪಡೆಯಲಿದ್ದಾರೆ. ತೀರಾ ಹೆಚ್ಚಾಗಿ ಬಳಕೆ ಇಲ್ಲದ ಗ್ರಾಹಕರಿಗೆ ಈ ಪ್ಲಾನ್ ಗಳು ವರದಾನವಾಗಿ ಪರಿಣಮಿಸಲಿದೆ ಎನ್ನಲಾಗಿದೆ. ಇಲ್ಲಿ ತಮಗೆ ಎಷ್ಟು ಬೇಕು ಅಷ್ಟೇ ಮೊಬೈಲ್ ಬಳಕೆಯನ್ನು ಮಾಡುವುದು ಸಾಧ್ಯವಾಗಲಿದೆ. ಹಾಗಾದ್ರೆ ಈ ಸಣ್ಣ ರಿಚಾರ್ಜ್ ನ ಮೌಲ್ಯ ಎಷ್ಟು? ಹಾಗೂ ಇದರಲ್ಲಿ ಸಿಗುವ ಬೆನಿಫಿಟ್ ಗಳು ಏನು ಎಂಬುದರ ಬಗ್ಗೆ ಕುತೂಹಲ ನಿಮ್ಮಲ್ಲಿ ಇರಬಹುದು ಅದಕ್ಕೆ ಉತ್ತರವನ್ನು ಈ ಕೆಳಗೆ ನೀಡುತ್ತಿದ್ದೇವೆ.

Reliance Jio Rs 75 Plan:

 

 

advertisement

ಈ ಪ್ಲಾನ್ ನಲ್ಲಿ 23 ದಿನಗಳ ವ್ಯಾಲಿಡಿಟಿ ಸಿಗಲಿದೆ. ಇಲ್ಲಿ ಪ್ರತಿದಿನ 100 ಎಂಬಿ ಡೇಟಾ ಸಿಗಲಿದ್ದು ಇದಲ್ಲದೆ 200MB ಗಳಷ್ಟು ಒಟ್ಟಾರೆಯಾಗಿ ಡೇಟಾ ಸಿಗಲಿದೆ. ಅಂದರೆ ಒಟ್ಟಿನಲ್ಲಿ 2.5GB ಡೇಟಾ ಗ್ರಾಹಕರಿಗೆ ಸಿಗಲಿದೆ. ಇಲ್ಲಿ ಅನಿಯಮಿತ ಕರೆಗಳು ಮತ್ತು 50 Free SMS ಗಳನ್ನು ಪ್ರತಿದಿನ ಯಾವುದೇ ನೆಟ್ವರ್ಕ್ ಆದ್ರೂ ಮಾಡಬಹುದು. ಈ ಪ್ಲಾನ್ Jio ಫೋನ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು ಅತ್ಯಂತ ಕಡಿಮೆ ದರದ ಪ್ಲಾನ್ ಆಗಲಿದೆ. ಇದರ ದರ ಎಷ್ಟು ಕಡಿಮೆ ಎಂದರೆ ಪ್ರತಿದಿನ ಕೇವಲ ಮೂರು ರೂಪಾಯಿಗಳಷ್ಟು ಮಾತ್ರ ಗ್ರಾಹಕರು ಖರ್ಚು ಮಾಡಬೇಕಾಗಿದೆ.

Reliance Jio Rs 91 Plan:

 

 

91 ರೂಪಾಯಿಗಳ ರೀಚಾರ್ಜ್ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಇಲ್ಲಿಯೂ ಕೂಡ ಪ್ರತಿದಿನ 100 ಡೇಟಾದ ಜೊತೆಗೆ ರೀಚಾರ್ಜ್ ನ ವ್ಯಾಲಿಡಿಟಿ ಮುಗಿಯುವವರೆಗೆ ಒಟ್ಟಾರೆಯಾಗಿ 200MB ಎಕ್ಸ್ಟ್ರಾ ಡೇಟಾ ಸಿಗಲಿದೆ. ಎಲ್ಲವನ್ನು ಸೇರಿಸಿದರೆ 3GB ಯಷ್ಟು ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ. ಇಲ್ಲಿಯೂ ಕೂಡ ಯಾವುದೇ ನೆಟ್ವರ್ಕ್ ಗಾದರೂ 50 ಎಸ್ಎಂಎಸ್ ಗಳನ್ನು ಉಚಿತವಾಗಿ ಕಳಿಸಬಹುದು ಹಾಗೂ ಅನಿಯಮಿತ ಕರೆಗಳು ದೊರೆಕಲಿವೆ.

ಹಲವು ಬಾರಿ ಕೇವಲ ಮನೆಯಲ್ಲಿ ಆಕ್ಟಿವ್ ಆಗಿರಲು ಒಂದು ಮೊಬೈಲ್ ಅನ್ನು ಜನರು ಬಳಸುತ್ತಿರುತ್ತಾರೆ. ಇಲ್ಲಿ ಕರೆಗಳು ಹಾಗೂ ಡೇಟಾ ಬಹಳ ಕಡಿಮೆ ಬಳಕೆಯಾಗುತ್ತಿದ್ದು ಅಗತ್ಯಕ್ಕಾಗಿ ಮಾತ್ರ ಈ ಫೋನ್ ಗಳನ್ನು ಬಳಸುತ್ತಾರೆ. ಅಂತಹ ಗ್ರಾಹಕರಿಗೆ ಈ ಪ್ಲಾನ್ ಗಳು ವರದಾನವಾಗಿ ಪರಿಣಿಸುವುದರಲ್ಲಿ ಸಂದೇಹವಿಲ್ಲ

advertisement

Leave A Reply

Your email address will not be published.