Karnataka Times
Trending Stories, Viral News, Gossips & Everything in Kannada

SIP: 2000ರೂ. ಹೂಡಿಕೆ ಮಾಡಿ ಕೋಟಿ ಗಳಿಸಬಹುದಾದ SIP 555 ಫಾರ್ಮುಲಾ ಬಗ್ಗೆ ನಿಮಗೆ ಗೊತ್ತಾ?

advertisement

ನಾವು ಸಾಮಾನ್ಯವಾಗಿ ಹೂಡಿಕೆ ಮಾಡಲು ಬಯಸಿದರೆ ಅಪಾಯ ಮುಕ್ತ ಹೂಡಿಕೆಯನ್ನು ಹೆಚ್ಚಾಗಿ ಆಯ್ದುಕೊಳ್ಳುತ್ತೇವೆ. ಆದರೆ ಸಾಕಷ್ಟು ಜನ ಅತ್ಯಂತ ಬೇಗ ಹಣ ಬರಲು ಎಸ್ಐಪಿ ಮ್ಯೂಚುವಲ್ ಫಂಡ್ ನಂತಹ ಆಯ್ಕೆಯನ್ನು ಮಾಡುತ್ತಾರೆ. ಇದರಲ್ಲಿ 40% ನಷ್ಟು ಹೂಡಿಕೆಯ ಅಪಾಯ ಇದ್ದರೂ ಕೂಡ ಯಾವುದೇ ಸಮಸ್ಯೆ ಆಗದೆ ಇದ್ದಲ್ಲಿ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯಲು ಸಾಧ್ಯವಿದೆ.

SIP Investment!

ನೀವು SIP ಮೂಲಕ Mutual Fund ನಲ್ಲಿ ದೀರ್ಘಾವಧಿಯವರೆಗೆ ಹೂಡಿಕೆ ಮಾಡಿದರೆ ಅತಿ ದೊಡ್ಡ ಮಟ್ಟದಲ್ಲಿ ಕಾರ್ಪಸ್ ರಚಿಸಲು ಸಾಧ್ಯವಿದೆ. ಆದರೆ ಮ್ಯೂಚುವಲ್ ಫಂಡ್ ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಿಕೊಳ್ಳಲು ಕೂಡ ಸಾಧ್ಯ. ಇದಕ್ಕಾಗಿ ನೀವು ವ್ಯವಸ್ಥಿತ SIP 555 Formula ತಿಳಿದುಕೊಳ್ಳಬೇಕು.

SIP 555 ಫಾರ್ಮುಲಾ!

 

 

ಎಸ್ಐಪಿ 555 ಫಾರ್ಮುಲಾ ಅಥವಾ ಸೂತ್ರವನ್ನು ಬಳಸಿ ನೀವು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಲು ಆರಂಭಿಸಿ ಪ್ರತಿ ವರ್ಷ ಈ ಹೂಡಿಕೆ ಮೊತ್ತವನ್ನು 5% ನಷ್ಟು ಹೆಚ್ಚಿಸಿಕೊಂಡು ಹೋದರೆ, ನಿರ್ದಿಷ್ಟ ಅವಧಿಗೆ ಒಂದು ಕೋಟಿಗಳ ಕಾರ್ಪಸ್ ರಚಿಸಿಕೊಳ್ಳಲು ಸಾಧ್ಯವಿದೆ.

advertisement

555 ಫಾರ್ಮುಲಾ ಅಳವಡಿಕೆ ಮಾಡುವುದು ಹೇಗೆ?

ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಆರ್ಥಿಕ ಸಮಸ್ಯೆ ಉಂಟಾಗಬಾರದು ಎನ್ನುವ ಕಾರಣಕ್ಕೆ, ನಿವೃತ್ತಿಯ ನಂತರದ ಜೀವನ ಸುಲಭವಾಗಿ ದೊಡ್ಡ ಮೊತ್ತದ ಹಣವನ್ನು ಎಲ್ಲರೂ ಬಯಸುತ್ತಾರೆ. ಹಾಗಾಗಿ ಶಿಸ್ತು ಬದ್ಧ ರೀತಿಯಲ್ಲಿ ಸಣ್ಣ ಅವಧಿಗೆ ಕಡಿಮೆ ಹೂಡಿಕೆಯಿಂದ ಆರಂಭಿಸಿ ಉತ್ತಮ ಆದಾಯ ಗಳಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನೀವು ಎಸ್ಐಪಿ 555 ಫಾರ್ಮುಲಾ ಅಳವಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ನೀವು ನಿಮ್ಮ ನಿವೃತ್ತಿ ವಯಸ್ಸು ಆರಂಭವಾಗುವುದಕ್ಕೂ ಮೊದಲು ಆರ್ಥಿಕವಾಗಿ ಸಬಲತೆ ಕಂಡುಕೊಳ್ಳಲು ಸಾಧ್ಯವಿದೆ.

SIP 555 Formula ಎಂದರೆ ಏನು ನೋಡೋಣ. ನೀವು ನಿಮ್ಮ 25ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದ್ದೀರಿ ಎಂದು ಭಾವಿಸಿ. 30 ವರ್ಷಗಳವರೆಗೆ ಪ್ರತಿ ವರ್ಷ 5% ನಷ್ಟು ಹೂಡಿಕೆ ಹೆಚ್ಚಿಸಿಕೊಳ್ಳುತ್ತಾ ಬನ್ನಿ. 55 ವರ್ಷ ವಯಸ್ಸಿನಲ್ಲಿ 5% ಹೂಡಿಕೆ ಹೆಚ್ಚಿಸಿಕೊಳ್ಳುತ್ತಾ ಹೋಗುವುದನ್ನು 555 ಫಾರ್ಮುಲಾ ಎನ್ನಲಾಗುತ್ತದೆ.

2,000 ರೂ.ಹೂಡಿಕೆ ಆರಂಭಿಸಿ ಕೋಟ್ಯಾಧಿಪತಿ ಆಗುವುದು ಹೇಗೆ?

ನೀವು SIP 555 Formula ಅಳವಡಿಸಿಕೊಳ್ಳುವುದರ ಮೂಲಕ 2000 ರೂ. ಹೂಡಿಕೆ ಆರಂಭಿಸಿ ಕೋಟ್ಯಾಧಿಪತಿ ಆಗಲು ಸಾಧ್ಯವಿದೆ, ಇದಕ್ಕಾಗಿ ನೀವು ನಿಮ್ಮ 25ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಬೇಕು. 5% ನಷ್ಟು ಪ್ರತಿ ವರ್ಷದ ಹೂಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ 30 ವರ್ಷಗಳ ವರೆಗೆ ಹೂಡಿಕೆ ಮಾಡಬೇಕು.

ಪ್ರತಿ ತಿಂಗಳ ರೂ.2,000 ಹೂಡಿಕೆಯನ್ನು ವರ್ಷಕ್ಕೆ 5% ನಷ್ಟು ಏರಿಸಿಕೊಂಡು ಹೋದರೆ, ಸರಾಸರಿ 12% ನಷ್ಟು ಆದಾಯದಲ್ಲಿ ಒಟ್ಟು ಹೂಡಿಕೆ ಮೊತ್ತ 15.95 ಲಕ್ಷ ರೂಪಾಯಿಗಳಾಗುತ್ತವೆ. ಒಟ್ಟು ಹೂಡಿಕೆಯ ಲಾಭ 89.52 ಲಕ್ಷ ರೂಪಾಯಿಗಳು. ಅಂದರೆ 30 ವರ್ಷಗಳ ಹೂಡಿಕೆಗೆ 1.05 ಕೋಟಿ ಆದಾಯ ಬರುತ್ತದೆ. ಅಂದರೆ ನಿಮ್ಮ 55ನೇ ವಯಸ್ಸಿನಲ್ಲಿ ನಿವೃತ್ತಿ ಪಡೆದುಕೊಂಡರೆ ನಿಮ್ಮ ಕೈಯಲ್ಲಿ ಒಂದು ಕೋಟಿ ರೂಪಾಯಿಗಳು ಇರುತ್ತವೆ.

ನೀವು ಹೆಚ್ಚಿನ ಹಣವನ್ನು ಪಡೆಯಲು ಹೆಚ್ಚು ಹೂಡಿಕೆ ಮಾಡಬೇಕು. ನಿವೃತ್ತಿ ವಯಸ್ಸಿನಲ್ಲಿ ಅಂದರೆ 55 ವರ್ಷ ವಯಸ್ಸಿನಲ್ಲಿ 5 ಕೋಟಿ ಹಣವನ್ನು ನೀವು ಹೊಂದಿರಬೇಕು ಎಂದಾದರೆ 10,000 SIP ಮಾಸಿಕ ಹೂಡಿಕೆಯಿಂದ ಆರಂಭಿಸಬೇಕು.

advertisement

Leave A Reply

Your email address will not be published.