Karnataka Times
Trending Stories, Viral News, Gossips & Everything in Kannada

Switch Board: ವಿದ್ಯುತ್ ಸ್ವಿಚ್ ಬೋರ್ಡ್ ಗಳು ಬಿಳಿಯ ಬಣ್ಣದಲ್ಲಿ ಇರುವುದು ಯಾಕೆ ಗೊತ್ತಾ?

advertisement

ನಾವು ದಿನನಿತ್ಯ ಬಳಸುವಂತಹ ಸಾಕಷ್ಟು ವಸ್ತುಗಳಲ್ಲಿ ಕೆಲವು ರೋಚಕ ವಿಷಯಗಳು ಅಡಗಿರುತ್ತವೆ. ನಾವು ವಸ್ತುಗಳನ್ನು ಬಳಸುತ್ತೇವೆಯೇ ಹೊರತು, ಅದರಲ್ಲಿ ಅಡಕವಾಗಿರುವಂತಹ ಸಾಕಷ್ಟು ವಿಚಾರಗಳನ್ನು ಗಮನಿಸುವುದೇ ಇಲ್ಲ. ಒಂದು ವೇಳೆ ನಾವು ಅಂತಹ ವಿಷಯಗಳನ್ನು ಗಮನಿಸುತ್ತಾ ಹೋದರೆ ನಾವು ಬಳಸುವ ವಸ್ತುಗಳ ಬಗ್ಗೆ ಇನ್ನಷ್ಟು ಕುತೂಹಲಕಾರಿ ಅಂಶಗಳು ನಮಗೆ ತಿಳಿಯುತ್ತವೆ.

ಉದಾಹರಣೆಗೆ ನೀವು ಯಾರ ಮನೆಯ ಸ್ವಿಚ್ ಬೋರ್ಡ್ ಅನ್ನು ಬೇಕಾದರೂ ನೋಡಿ ಬಹುತೇಕ 99% ನಷ್ಟು ಸ್ವಿಚ್ ಬೋರ್ಡ್ (Switch Board)ಗಳು ಬಿಳಿಯ ಬಣ್ಣದಲ್ಲಿಯೇ ಇರುತ್ತವೆ. ನಮ್ಮ ಸುತ್ತ ಇಷ್ಟೊಂದು ಬಣ್ಣಗಳು ಇದ್ದರೂ ಕೇವಲ ಬಿಳಿಯ ಬಣ್ಣದಲ್ಲಿ ಮಾತ್ರ ಯಾಕೆ ಸ್ವಿಚ್ ಬೋರ್ಡ್ ಇರುತ್ತೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದಕ್ಕೆಲ್ಲ ಇಲ್ಲಿದೆ ಉತ್ತರ.

ಸ್ವಿಚ್ ಬೋರ್ಡ್ ಗಳು ಬಿಳಿಯ ಬಣ್ಣದಲ್ಲಿಯೇ ಯಾಕೆ ಇರುತ್ತೆ ಗೊತ್ತಾ?

  • ಬಿಳಿಯ ಬಣ್ಣದ ಸ್ವಿಚ್ ಬೋರ್ಡ್ ಹೊಂದಿರಲು ಸಾಕಷ್ಟು ಕಾರಣಗಳು ಇವೆ. ಮೊದಲನೆಯದಾಗಿ ನಿಮ್ಮ ಗೋಡೆಯ ಪೇಯಿಂಟ್ ಬಣ್ಣ ಯಾವುದೇ ಇರಲಿ, ಸ್ವಿಚ್ ಬೋರ್ಡ್ ಬಿಳಿಯ ಬಣ್ಣದಲ್ಲಿ ಇದ್ದರೆ ಅದನ್ನು ಗುರುತಿಸುವುದು ಸುಲಭ.
  • ಬಿಳಿಯ ಬಣ್ಣ ಯಾವುದೇ ಬಣ್ಣದೊಂದಿಗೆ ಸುಲಭವಾಗಿ ಹೊಂದಾಣಿಕೆ ಆಗಬಲ್ಲದು. ಹಾಗಾಗಿ ನೀವು ಬಿಳಿಯ ಬಣ್ಣದ ಸ್ವಿಚ್ ಬೋರ್ಡ್ ಹೊಂದಿದ್ದರೆ ಅದು ಸ್ವಿಚ್ ಬೋರ್ಡ್ ಹಿಂದಿನ ಗೋಡೆಯ ಬಣ್ಣಕ್ಕೆ ಹೊಂದಾಣಿಕೆ ಆಗುತ್ತದೆ. ಬಿಳಿಯ ಬಣ್ಣದ ಬದಲು ಬೇರೆ ಬಣ್ಣದ ಸ್ವಿಚ್ ಬೋರ್ಡ್ ಇದೆ ಎಂದು ಊಹಿಸಿಕೊಳ್ಳಿ ಆಗ ನೀವು ನಿಮ್ಮ ಗೋಡೆಯ ಬಣ್ಣದೊಂದಿಗೆ ಕಾಂಬಿನೇಷನ್ ಬಣ್ಣವನ್ನೇ ಆಯ್ಕೆ ಮಾಡಬೇಕಾಗುತ್ತದೆ. ನೀವು ನಿಮ್ಮ ಗೋಡೆಗೆ ಯಾವ ಬಣ್ಣ ಬೇಕಾದರೂ ಬಳಿಯಬಹುದು.

advertisement

ಬಿಳಿಯ ಬಣ್ಣದ ಸ್ವಿಚ್ ಬೋರ್ಡ್ ಇರಬೇಕು ಎನ್ನುವ ನಿಯಮ ಇದೆಯೇ?

ಸ್ವಿಚ್ ಬೋರ್ಡ್ ಬಿಳಿಯ ಬಣ್ಣದಲ್ಲಿಯೇ ಇರಬೇಕು ಎನ್ನುವ ನಿಯಮವೇನು ಇಲ್ಲ. ಸ್ವಿಚ್ ಬೋರ್ಡ್ ಯಾವ ಬಣ್ಣದಲ್ಲಿ ಬೇಕಾದರೂ ಇರಬಹುದು. ಮಾರುಕಟ್ಟೆಯಲ್ಲಿ ಕಪ್ಪು, ಬೂದು, ತಿಳಿ ನೀಲಿ ಹೀಗೆ ಮೊದಲಾದ ಬಣ್ಣಗಳಲ್ಲಿ ಸ್ವಿಚ್ ಬೋರ್ಡ್ ಗಳು ಲಭ್ಯ ಇರುತ್ತವೆ. ಹಾಗಾಗಿ ನೀವು ನಿಮ್ಮ ಮನೆಯ ಬಣ್ಣಕ್ಕೆ ಹೊಂದಾಣಿಕೆ ಆಗುವಂತಹ ಸ್ವಿಚ್ ಬೋರ್ಡ್ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಇದು ನಿಮ್ಮ ಟೇಸ್ಟ್ ಗೆ ಸಂಬಂಧ ಪಟ್ಟ ವಿಚಾರ.

ಸ್ವಿಚ್ ಬೋರ್ಡ್ ಸಾಕೆಟ್ ನ ದೊಡ್ಡ ರಂಧ್ರದಲ್ಲಿ ಕರೆಂಟ್ ಬರುವುದಿಲ್ಲ ಯಾಕೆ ಗೊತ್ತಾ?

ಸಾಮಾನ್ಯವಾಗಿ ಸ್ವಿಚ್ ಬೋರ್ಡ್ ನ ಸಾಕೆಟ್ನಲ್ಲಿ ಅಥವಾ ಪ್ಲಗ್ ಪಾಯಿಂಟ್ ನಲ್ಲಿ ನಿಮ್ಮ ಯಾವುದೇ ಚಾರ್ಜಿಂಗ್ ಪ್ಲಗ್ ಹಾಕಲು ಹೋಲ್ ಗಳು ಇರುತ್ತವೆ. ಇದರ ಜೊತೆಗೆ ಸಾಕೆಟ್ ಮೇಲ್ಭಾಗದಲ್ಲಿ ಒಂದು ದೊಡ್ಡದಾಗಿರುವ ರಂದ್ರವನ್ನು ಕಾಣಬಹುದು ಇದನ್ನ ಯಾಕೆ ಇಟ್ಟಿರಬಹುದು ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿರುತ್ತೆ. ಸಾಕೆಟ್ ಮೇಲ್ಭಾಗದಲ್ಲಿ ಇರುವ ದೊಡ್ಡ ಹೋಲ್ ನಲ್ಲಿ ಕರೆಂಟ್ ಬರುವುದಿಲ್ಲ ಯಾಕೆ ಎಂದರೆ, ಇಲ್ಲಿ ಅರ್ಥಿಂಗ್ ಮಾಡಿರಲಾಗಿರುತ್ತದೆ. ಹಾಗಾಗಿ ಕರೆಂಟ್ ಪ್ರವಹಿಸುವುದಿಲ್ಲ.

advertisement

Leave A Reply

Your email address will not be published.