Karnataka Times
Trending Stories, Viral News, Gossips & Everything in Kannada

Maruti Swift: ಕೇವಲ ಆರು ತಿಂಗಳಲ್ಲಿ ಒಂದು ಲಕ್ಷ ಗ್ರಾಹಕರನ್ನು ಆಕರ್ಷಿಸಿದ 6 ಲಕ್ಷಕ್ಕಿಂತ ಕಡಿಮೆ ಬೆಲೆಯ ಈ ಸೂಪರ್ ಕಾರು!

advertisement

ಮಾರುತಿ ಸುಜುಕಿ ಭಾರತದಲ್ಲಿಯೇ ಅತಿ ಹೆಚ್ಚು ಕಾರು ಮಾರಾಟ ಮಾಡುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಕೈಗೆಟುಕುವ ಬೆಲೆಗೆ ಗ್ರಾಹಕರಿಗೆ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಕಾರುಗಳನ್ನು ಮಾರುತಿ ಸುಜುಕಿ ಒದಗಿಸಿ ಕೊಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದೀಗ ಒಂದು ಅಂಕಿ ಅಂಶದ ಪ್ರಕಾರ ಮಾರುತಿ ತನ್ನ ಸ್ವಿಫ್ಟ್ ಕಾರಿನ ಮಾರಾಟದಲ್ಲಿ ಮೈಲಿಗಲ್ಲು ಸಾಧಿಸಿದೆ. ಮಾರುತಿ ಸ್ವಿಫ್ಟ್ (Maruti Swift) ಕೇವಲ 6 ತಿಂಗಳುಗಳಲ್ಲಿ 96,478 ಯೂನಿಟ್ ಮಾರಾಟವಾಗಿದೆ ಅಂದ್ರೆ ನೀವು ನಂಬಲೇಬೇಕು. 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಮಾರುತಿ ಸ್ವಿಫ್ಟ್ ಎಂದು ಹೇಳಬಹುದು.

ಒಂದು ವರ್ಷದ ಒಳಗೆ ಒಂದು ಲಕ್ಷ ಯೂನಿಟ್ ಹೆಚ್ಚಿನ ಕಾರು ಮಾರಾಟ!

ಮಾರುತಿ ಸ್ವಿಫ್ಟ್ (Maruti Swift) ಭಾರತದಲ್ಲಿ 2.3 ಲಕ್ಷ ಜನ ಕೇವಲ ಆರು ತಿಂಗಳುಗಳ ಅಂತರದಲ್ಲಿ ಖರೀದಿಸಿದ್ದಾರೆ. ಕಳೆದ ಆರು ತಿಂಗಳ ಅವಧಿಯ ಮಾರಾಟದ ವಿವರವನ್ನು ನೋಡುವುದಾದರೆ, ಜನವರಿ 2024ರಲ್ಲಿ 15,730 ಯೂನಿಟ್ ಮಾರುತಿ ಸ್ವಿಫ್ಟ್ ಕಾರನ್ನು ಮಾರಾಟ ಮಾಡಲಾಗಿತ್ತು. ಅದೇ 2023 ಡಿಸೆಂಬರ್ ತಿಂಗಳಿನಲ್ಲಿ ಒಟ್ಟು 11,843 ಗ್ರಾಹಕರನ್ನು ಹೊಂದಿತ್ತು. ನವೆಂಬರ್ ನಲ್ಲಿ 1531 ಯುನಿಟ್ ಮಾರಾಟ ಮಾಡಿದೆ ಮಾರುತಿ ಸುಜುಕಿ. ಒಟ್ಟು 2023ರಲ್ಲಿ ಮಾರುತಿ ಸುಜುಕಿ ಲಕ್ಷ ಯೂನಿಟ್ ಮಾರಾಟ ಮಾಡಿದೆ.

advertisement

ಮಾರುತಿ ಸುಜುಕಿ ಸ್ವಿಫ್ಟ್ (Maruti Swift)  ಕಾರಿನ ವೈಶಿಷ್ಟ್ಯತೆಗಳು!

ಇದು 5 ಆಸನಗಳನ್ನು ಹೊಂದಿರುವ ಕಾರ್ ಆಗಿದ್ದು ಎಕ್ಸ್ ಶೋರೂಮ್ ಆರಂಭಿಕ ಬೆಲೆ 5.99 ಲಕ್ಷ ರೂಪಾಯಿಗಳು ಮಾತ್ರ. ಟಾಪ್ ಎಂಡ್ ಬೆಲೆ ರೂ.9.03 ಲಕ್ಷ ರೂಪಾಯಿಗಳು. ಮಾರುತಿ ಸ್ವಿಫ್ಟ್ ನಲ್ಲಿ ನಾಲ್ಕು ರೂಪಾಂತರಗಳನ್ನು ಖರೀದಿ ಮಾಡಬಹುದು ಪೆಟ್ರೋಲ್ ಇಂಜಿನ್ ಜೊತೆಗೆ ಸಿ ಎನ್ ಜಿ ಆಯ್ಕೆಯನ್ನು ಕೂಡ ಕೊಡಲಾಗಿದೆ.

ಮಾರುತಿ ಸ್ವಿಫ್ಟ್ ಇಂಜಿನ್ ಬಗ್ಗೆ ಮಾತನಾಡುವುದಾದರೆ, 1.2 ಲೀಟರ್ ಡುಯಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 90 ಬಿ ಎಚ್ ಪಿ ಪವರ್ ಹಾಗೂ 113 ಎನ್ ಎಮ್ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಈ ಕಾರಿನಲ್ಲಿ ಐದು ಸ್ಪೀಡ್ ಮಾನ್ಯುಯಲ್ ಹಾಗೂ AMT ಗೇರ್ ಬಾಕ್ಸ್ ಅನ್ನು ಕೂಡ ಪಡೆಯಬಹುದು. ಸಿ ಎನ್ ಜಿ ಆಯ್ಕೆಯನ್ನು ಕೂಡ ಕೊಡಲಾಗಿದ್ದು ಇದು ಗರಿಷ್ಠ 77.5 ಬಿ ಎಚ್ ಪಿ ಪವರ್ ಹಾಗೂ 98.5 ಎನ್ ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಉತ್ತಮ ಮೈಲೇಜ್ಗಾಗಿ ಈ ಆಯ್ಕೆಯನ್ನು ಬಳಸಿಕೊಳ್ಳಬಹುದು.

advertisement

Leave A Reply

Your email address will not be published.