Karnataka Times
Trending Stories, Viral News, Gossips & Everything in Kannada

Maruti Suzuki: ಪ್ರತಿಯೊಬ್ಬ ಭಾರತೀಯನ ಕನಸಾಗಿರುವ ಈ ಕಾರು ಇನ್ಮೇಲೆ ಕೊಡಲಿದೆ 35km ಮೈಲೇಜ್! ಬೆಲೆ ಕೂಡ ಅತ್ಯಂತ ಕಡಿಮೆ

advertisement

ಇತ್ತೀಚಿನ ದಿನದಲ್ಲಿ ಕಾರು ಕೊಳ್ಳುವರು ಮತ್ತು ಮಾರಾಟ ಮಾಡುವವರ ಪ್ರಮಾಣ ಅಧಿಕವಾಗಿದೆ. ಹಾಗಾಗಿ ಸ್ಪರ್ಧಾತ್ಮಕ ಪೈಪೋಟಿ ಕೂಡ ಏರ್ಪಡುತ್ತಿದೆ. ಭಾರತೀಯ ಪ್ರಬಲ ಕಾರು ತಯಾರಕ ಕಂಪೆನಿಯಾದ ಮಾರುತಿ (Maruti Suzuki) ಕಂಪೆನಿಯ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳು ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಿದೆ. 2024ರ ಅತ್ಯಾಕರ್ಷಕ ಮಾಡೆಲ್ ಕಾರು ಎಂಬ ವಿಶೇಷಣಗಳು ಕೂಡ ಈ ಕಾರಿಗೆ ಲಭಿಸಿದ್ದು ಮಾರುತಿ ಕಂಪೆನಿಗೆ ಹೆಮ್ಮೆ ತಂದ ವಿಚಾರವಾಗಿದೆ.

ಹೇಗಿರಲಿದೆ ಈ ಕಾರು?

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಹಾಗೂ ಡಿಜೈರ್ ಕಾರಿನಲ್ಲಿ ಅನೇಕ ಆಕರ್ಷಕ ಫೀಚರ್ಸ್ ಅಳವಡಿಸಲಾಗುತ್ತಿದೆ. ಇದರಲ್ಲಿ ಹೈ ಬ್ರೀಡ್ ತಂತ್ರಜ್ಞಾನ ಅಡಕವಾಗಿರಲಿದ್ದು ಈ ಒಂದು ಹೊಸ ಮಾದರಿ 35km ಮೈಲೇಜ್ ಅನ್ನು ಸಹ ನೀಡಲಿದೆ. ನೋಡಲು ಆಕರ್ಷಕ ಲುಕ್ ಇರಲಿದೆ. ಇದರ ಅಪ್ ಕಮಿಂಗ್ ಫೀಚರ್ಸ್ ನೋಡುಗರನ್ನು ಸೆಳೆಯುವ ನೆಲೆಯಲ್ಲಿ ಸರ್ವ ಪ್ರಯತ್ನ ಮಾಡಲಿದೆ.

Image Source: Hindustan Times Auto News

advertisement

Maruti Suzuki Swift Features:

  • ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಡಿಜೈರ್ ಕಾರಿನಲ್ಲಿ ಸನ್ ರೂಫ್ ವ್ಯವಸ್ಥೆ ಇದೆ.
  • ಅಟೋ ಮ್ಯಾಟಿಕ್ ಕ್ಲೈಮೇಟ್‌ ಕಂಟ್ರೋಲ್ ವ್ಯವಸ್ಥೆ.
  • ಡಿಜಿಟಲ್ ಮಲ್ಟಿ ಇನ್ಫಾರ್ಮೇಶನ್ ಸಿಸ್ಟಂ ಹೊಂದಿದೆ.
  • ಎರಡು ಕಾರಿನಲ್ಲಿ ಏಕ ತರನಾದ ಕ್ಯಾಬಿನ್ ಆಯ್ಕೆ ನಿಮಗೆ ಸಿಗಲಿದೆ.
  • ಈ ಎರಡು ಕಾರಿನಲ್ಲಿ ಪ್ರೀಮಿಯಂ ಇಂಟಿರಿಯರ್ ಇರಲಿದೆ.
  • ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಹೊಂದಿದೆ.
  • 35km ಮೈಲೇಜ್ ನೀಡಲಿದೆ.

Maruti Suzuki Swift Engine:

ಮಾರುತಿ ಸ್ವಿಫ್ಟ್ ನಲ್ಲಿ 1.2ಲೀಟರ್ ಪೆಟ್ರೋಲ್ ಇಂಜಿನ್, ಮೂರು ಸಿಲಿಂಡರ್ ಸಾಮರ್ಥ್ಯದ ಪವರ್ ಫುಲ್ ಇಂಜಿನ್ ಆಯ್ಕೆ ಇಲ್ಲಿ ಇದೆ. ನೈಸರ್ಗಿಕ ಆ್ಯಸ್ಪೀರೇಟೆಡ್ Z12 ಎಂಬ ಪೆಟ್ರೋಲ್ ಇಂಜಿನ್ ಆಯ್ಕೆ ನಿಮಗೆ ಸಿಗಲಿದೆ. ಈ ಕಾರು ನೂತನ ತಂತ್ರಜ್ಞಾನ ಅಳವಡಿಕೆಯಿಂದ ಅಧಿಕ ಮೈಲೇಜ್ ನಿಮಗೆ ಸಿಗಲಿದೆ. ಸ್ವಿಫ್ಟ್ ಕಾರಿಗೆ ಹೊಸ ಸ್ಪರ್ಶ ನೀಡಲಾಗಿದ್ದು ಈಗ ಸ್ವಿಫ್ಟ್ ಮತ್ತು ಡಿಜೈರ್ ಕಾರು 80BHP ಪವರ್ ಮತ್ತು 108NM ಟಾರ್ಕ್ ಹೊರ ಹಾಕಲಿದೆ. ಈಗಿರುವ ಹಳೆಯ ಮಾಡೆಲ್ ಸ್ವಿಫ್ಟ್ ಮತ್ತು ಡಿಜೈರ್ ನಲ್ಲಿ 88BHP ಪವರ್ ಮತ್ತು 113NM ಟಾರ್ಕ್ ನೀಡಲಿದೆ.

advertisement

Leave A Reply

Your email address will not be published.