Karnataka Times
Trending Stories, Viral News, Gossips & Everything in Kannada

Maruti Suzuki: ಭಾರತದಲ್ಲಿ ನಂಬರ್ 1 ಸ್ಥಾನದಲ್ಲಿ ಮಾರಾಟ ಆಗುತ್ತಿರುವ ಈ ಕಾರಿನ ಮೇಲೆ ಮತ್ತಷ್ಟು ರಿಯಾಯಿತಿ! 25Km ಮೈಲೇಜ್

advertisement

ಮಾರುತಿ ಸುಜುಕಿ ಕಾರುಗಳು ಭಾರತದ ಕಾರ್ಯಗ್ರಹಕರ ಮಿಡಿತವನ್ನು ಸರಿಯಾಗಿ ಅರ್ಥ ಮಾಡಿಕೊಂಡಿವೆ. ಭಾರತದ ಹೆಚ್ಚಿನ ಜನರು ಮಧ್ಯಮ ವರ್ಗದ ಜೀವನ ನಡೆಸುತ್ತಾ ಇರುವುದರಿಂದ, ಇಂತಹ ಜನರನ್ನೇ ಟಾರ್ಗೆಟ್ ಮಾಡಿಕೊಂಡು ತಮ್ಮ ಕಾರುಗಳನ್ನು ಲಾಂಚ್ ಮಾಡುತ್ತದೆ. ಕಾರಿನ ಬೆಲೆಗಳು ಬಹಳ ದುಬಾರಿ ಆಗಿರದೆ ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಬೆಲೆಗಳು ಇರುತ್ತವೆ. ಇದರಿಂದ ಮಾರುತಿ ಸುಜುಕಿ (Maruti Suzuki) ಕಾರುಗಳ ಸೇಲ್ಸ್ ಕೂಡ ಯಾವಾಗಲೂ ಹೆಚ್ಚಿನ ಸೇಲ್ ಆಗುವ ಕಾರುಗಳ ಪಟ್ಟಿಯಲ್ಲಿ ಮೊದಲನೆಯದಾಗಿರುತ್ತದೆ.

ಮೊದಲೇ ಕಡಿಮೆ ಇರುವ ಮಾರುತಿ ಸುಜುಕಿ ಕಾರುಗಳ ಬೆಲೆಗಳು ಹಲವಾರು ಆಫರ್ ಮತ್ತು ಹಬ್ಬದ ಸಮಯಗಳಲ್ಲಿ ಮತ್ತಷ್ಟು ಕಡಿಮೆ ಇರುತ್ತದೆ. ಈಗ ಬರುತ್ತಿರುವ ಹೋಲಿ ಹಬ್ಬಕ್ಕೆ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಆಫರ್ ಗಳನ್ನು ನೀಡುತ್ತಿದೆ. ಮಾರುತಿ ಸುಜುಕಿ ಬೆಲೆಗಳನ್ನು ಕಡಿಮೆ ಮಾಡಿ ನಿಮ್ಮ ಜೀವನದಲ್ಲಿ ರಂಗು ತುಂಬಲು ಸಿದ್ಧತೆ ನಡೆಸಿದೆ.

ಲಾಂಚ್ ಆಗುತ್ತಿದೆ ಹೊಸ ಬ್ರೆಜಾ

ಮಾರುತಿ ಸುಜುಕಿಯ ಬ್ರೆಜಾ (Maruti Suzuki Brezza) ಕಾರು ಅವರ ಟಾಪ್ ಸೆಲ್ಲಿಂಗ್ ಕಾರ್ ಗಳಲ್ಲಿ ಒಂದಾಗಿದೆ. ಇದು ಬಹಳ ಕಾಂಪಿಟೇಟಿವ್ ಎನ್ನಬಹುದಾದ ಬೆಲೆಗಳಲ್ಲಿ ಲಭ್ಯವಿದ್ದು ಒಂದು ಪಕ್ಕಾ ಫ್ಯಾಮಿಲಿ ಕಾರ್ ನಂತಾಗಿದೆ. ಬೇಕಾದಷ್ಟು ಜಾಗ ಹಾಗೂ ಡ್ರೈವಿಂಗ್ ಕಂಫರ್ಟ್ ಕೂಡ ಈ ಕಾರಿನಲ್ಲಿ ಚೆನ್ನಾಗಿದೆ. ಈಗ ಮತ್ತಷ್ಟು ಅಪ್ ಗ್ರೇಡ್ ಮಾಡಿಕೊಂಡು ಈ ಕಾರು ಲಾಂಚ್ ಆಗುತ್ತಿದೆ.

Image Source: CarWale

ಹೊಸ ಬ್ರೆಜಾ ದ ಫೀಚರ್ಸ್

advertisement

ಈ ಕಾರಿನ ಬಗ್ಗೆ ಇನ್ನಷ್ಟು ಹೇಳುವುದಾದರೆ ಈ ಕಾರಿನಲ್ಲಿ ನಿಮಗೆ 17 ಇಂಚಿನ ಅಲಾಯ್ ವೀಲ್ ಗಳು ಕಾಣಿಸುತ್ತವೆ. ಒಂಭತ್ತು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೂಡ ಈ ಕಾರಿನಲ್ಲಿದೆ. ಈ ಕಾರು ವಯರ್ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. 360 ಡಿಗ್ರಿ ಕ್ಯಾಮೆರಾ, ಸನ್ ರೂಫ್, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಏರ್ ಕಂಡೀಷನಿಂಗ್, ಎಲ್ಇಡಿ ಹೆಡ್ ಲ್ಯಾಂಪ್, ಮತ್ತು ಟೈಲ್ ಲ್ಯಾಂಪ್ ಗಳು ಇದರ ಮುಖ್ಯ ಆಕರ್ಷಣೆಗಳಾಗಿವೆ.

Maruti Suzuki Brezza ಇಂಜಿನ್ ಮತ್ತು ಪವರ್:

ಮಾರುತಿ ಸುಜುಕಿ ಬ್ರೆಜಾ ದ ಇಂಜಿನ್ ಮತ್ತು ಕ್ಷಮತೆಯ ಬಗ್ಗೆ ಮಾತನಾಡುವುದಾದರೆ, ಈ ಕಾರು 1.5 ಲೀಟರ್ ನ ಕೆ ಸರಣಿಯ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಇದರಲ್ಲಿ ನಿಮಗೆ 103 ಬಿ ಎಚ್ ಪಿ ಪವರ್ ಹಾಗೂ 138 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಈ ಕಾರು 5 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಹಾಗೂ 6 ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯ ಜೊತೆಗೆ ಲಭ್ಯವಿದೆ.

Image Source: Pinterest

ಈ ಕಾರಿನ ಬೆಲೆಗಳಂತೆಯೇ ಇದರ ರನ್ನಿಂಗ್ ಕಾಸ್ಟ್ ಕೂಡ ಕಡಿಮೆ ಇರಲಿದೆ. ಮಾನ್ಯುಯಲ್ ಟ್ರಾನ್ಸ್ ಮಿಷನ್ ನಲ್ಲಿ 20 ಕಿಲೋ ಮೀಟರ್ ಪ್ರತಿ ಲೀಟರ್ ಹಾಗೂ ಆಟೋಮೆಟಿಕ್ ಟ್ರಾನ್ಸ್ ಮಿಷನ್ ನಲ್ಲಿ 18.75 km ಪ್ರತಿ ಲೀಟರ್ ಮೈಲೇಜ್ ಸಿಗಲಿದೆ. ಇದರಲ್ಲಿ ಸಿ ಎನ್ ಜಿ ಮಾದರಿ ಕೂಡ ಇದ್ದು ಆಗ ಅದು 25.51 ಕಿಲೋಮೀಟರ್ ಪ್ರತಿ ಕೆಜಿಯ ಮೈಲೇಜ್ ನೀಡುತ್ತದೆ.

ಹೊಸ ಬ್ರೆಜಾ ದ ಬೆಲೆಗಳು ಮತ್ತು ಬಣ್ಣಗಳು

ಹೊಸ ಮಾರುತಿ ಸುಜುಕಿ ಬ್ರೆಜಾ ಕಾರಿನ ಬೆಲೆಗಳು 8 ರಿಂದ 12 ಲಕ್ಷ ರೂಪಾಯಿಗಳ ರೇಂಜ್ ನಲ್ಲಿ ಇರಲಿದೆ ಎನ್ನಲಾಗುತ್ತಿದೆ. ಈ ಕಾರಿನ ಬಣ್ಣಗಳ ಆಯ್ಕೆಗಳು ಗೊತ್ತಾಗಿದ್ದು, ಎಕ್ಸೂಬರೆಂಟ್ ಬ್ಲೂ, ಪರ್ಲ್ ಆಕ್ಟಿಕ್ ವೈಟ್ ಡ್ಯುಯಲ್ ಟೋನ್ ಬ್ಲಾಕ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

advertisement

Leave A Reply

Your email address will not be published.