Karnataka Times
Trending Stories, Viral News, Gossips & Everything in Kannada

Maruti Swift 2024: ಹೊಸ ರೂಪದಲ್ಲಿ ಬರಲಿದೆ ಸ್ವಿಫ್ಟ್ ಕಾರು! 35Km ಮೈಲೇಜ್, ಬೆಲೆ ಕೇಳಿ ಭಾರತೀಯರು ಖುಷ್

advertisement

ಇಂದು ವಾಹನ‌ಪ್ರಿಯರು ಹೆಚ್ಚಾಗಿದ್ದಾರೆ.‌ ಅದರಲ್ಲೂ ಕಾರು ಖರೀದಿಯ ಬಗ್ಗೆ ಹೇಳಬೇಕಾಗಿಲ್ಲ. ಪ್ರತಿಯೊಬ್ಬರಿಗೂ ಇಂದು ಸ್ವಂತದಾದ ಕಾರು ಬೇಕು, ಪ್ರಯಾಣ ಮಾಡಬೇಕು ಇತ್ಯಾದಿ ಬಹಳಷ್ಟು ಕನಸು ಇರುತ್ತದೆ.‌ ಆದರೆ ಹೆಚ್ಚಿನ ಹಣ ವ್ಯಯಿಸಬೇಕಾಗಿರುವುದರಿಂದ ಕಾರು ಖರೀದಿ ಕಷ್ಟವೇ, ಆದ್ರೆ ಸಾಲ ಮಾಡಿಯಾದರೂ ಕಾರು ಖರೀದಿ ಮಾಡುವ ಹಂಬಲ‌ ಹೆಚ್ಚಿನ ಜನರಲ್ಲಿದೆ.‌ ಇಂದು ವಿವಿಧ ಪ್ರತಿಷ್ಠಿತ ಕಂಪನಿಯ ಕಾರುಗಳು ಮಾರುಕಟ್ಟೆ ಗೆ ಎಂಟ್ರಿ ನೀಡಿದ್ದು ಇದೀಗ ಮಧ್ಯಮ ವರ್ಗದ ಜನತೆಯು ಖರೀದಿ ಮಾಡುವಂತಹ ಈ ಕಾರು ನೂತನ ವೈಶಿಷ್ಟ್ಯದೊಂದಿಗೆ, ಬದಲಾವಣೆಯ ನವೀಕರಣ ದೊಂದಿಗೆ ಮಾರುಕಟ್ಟೆ ಗೆ ಎಂಟ್ರಿ ನೀಡಲಿದೆ.

ಯಾವ ಕಾರು?

ಮಾರುತಿ ಸುಜುಕಿ (Maruti Suzuki) ಕಾರು ಎಂದರೆ ಇಂದಿಗೂ ಫೇಮ್ ಅನ್ನು ಇರಿಸಿಕೊಂಡಿರುವಂತಹ ಪ್ರತಿಷ್ಠಿತ ಕಂಪನಿಯ ಕಾರು, ಹೊಸ ಮಾಡೆಲ್ ನ ಕಾರುಗಳು ಎಷ್ಟೆ ಮಾರುಕಟ್ಟೆಗೂ ಬಂದರೂ ಈ ಕಾರಿನ ಬೇಡಿಕೆ ಕಡಿಮೆ ಆಗಿಲ್ಲ.‌ ಇದಕ್ಕೆ ಮುಖ್ಯ ಕಾರಣ ಈ ಸುಜುಕಿ ಕಾರಿನ ಫೀಚರ್‌, ಬಜೆಟ್‌ ಎಲ್ಲದಕ್ಕೂ ಉತ್ತಮ ಆಯ್ಕೆ ಎಂದೆನಿಸಿದೆ. ಹಾಗಾಗಿ ಬೇಡಿಕೆ ಕೂಡ ಹೆಚ್ಚು ಇದೆ ಎಂದು ಹೇಳಬಹುದು.

Image Source: Zee News

advertisement

ಮಾರುತಿ ಸುಜುಕಿ ಸ್ವಿಫ್ಟ್‌ (Maruti Swift 2024) ಬದಲಾವಣೆಯೊಂದಿಗೆ ಎಂಟ್ರಿ

ಹೌದು ಮಾರುತಿ ಸುಜುಕಿ ಸ್ವಿಫ್ಟ್ (Maruti Swift 2024) ಹಲವು ಫೀಚರ್‌ ಮತ್ತು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಸದ್ಯದಲ್ಲೇ ಎಂಟ್ರಿ ನೀಡಲಿದೆ.‌ ಈ ನವೀಕರಣವನ್ನು ನೋಡಲು ಕಾರು ಪ್ರೀಯರು ಮೊಸ್ಟ್ ವೆಟಿಂಗ್ ನಲ್ಲಿ ಇದ್ದಾರೆ. ಈ ಕಾರು ಈಗಿರುವ ಮಾರುತಿ ಸುಜುಕಿ ಸ್ವಿಫ್ಟ್‌ಗಿಂತಲೂ, ಇನ್ನು ಹೆಚ್ಚಿನ ಮೈಲೇಜ್‌ ನೀಡಲಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಈ ಕಾರು ಆರಾಮದಾಯಾಕ ಪ್ರಯಾಣದೊಂದಿಗೆ ಸುಮಾರು 35 ಕಿಮೀ ಮೈಲೇಜ್‌ ನೀಡಲಿದೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗುತ್ತಿದೆ. ಬೆಲೆ ಕೂಡ 10 ಲಕ್ಷದ ಅಸುಪಾಸಿನಲ್ಲಿರಲಿದೆ.

Image Source: Autocar India

ಹೇಗಿದೆ ವೈಶಿಷ್ಟ್ಯ?

  • ಈ ಕಾರು ನವೀಕರಣದೊಂದಿಗೆ 1.2 ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ – ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಎಂಟ್ರಿ ನೀಡಲಿದೆ
  • ಅದೇ ರೀತಿ ಈ ಕಾರಿನಲ್ಲಿ ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್‌, ಡ್ಯುಯಲ್ ಟೋನ್ ವೀಲ್ಸ್ ಕೂಡ ಇರಲಿದೆ.
  • ಹೊಸ ಎಂಜಿನ್ ಸ್ವಿಫ್ಟ್ ಕಾರಿನಲ್ಲಿ 80 bhp ಪವರ್ 108 Nm ಟಾರ್ಕ್ ಅನ್ನು ನೀಡಲಿದೆ ಎನ್ನಲಾಗಿದೆ.
  • ಇದರಲ್ಲಿ ಮರುವಿನ್ಯಾಸ ಮಾಡಿದ ಟೇಲ್‌ಗೇಟ್‌ಗಳು ಸ್ಕಿಡ್ ಪ್ಲೇಟ್‌ಗಳೊಂದಿಗೆ ಬರಲಿದ್ದು ಸ್ಟಾಪ್ ಲ್ಯಾಂಪ್‌ನೊಂದಿಗೆ ಇಂಟಿಗ್ರೇಟೆಡ್ ಸ್ಪಾಯ್ಲರ್, ಸಿ ಆಕಾರದ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಟೇಲ್‌ಲೈಟ್ಸ್‌ ನವೀಕರಣ ಕೂಡ ಇರಲಿದೆ.
  • ಅದೇ ರೀತಿ‌ ಸ್ಟೀರಿಂಗ್ ಮೌಂಟ್ ಕಂಟ್ರೋಲ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇರಲಿದೆ.

advertisement

Leave A Reply

Your email address will not be published.