Karnataka Times
Trending Stories, Viral News, Gossips & Everything in Kannada

Post Office MIS: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತೆ 5550 ರೂ. ಪಿಂಚಣಿ!

advertisement

ಹಣ ಹೂಡಿಕೆಗೆ ಉಳಿತಾಯಕ್ಕೆ ಹಲವು ರೀತಿಯ ಅವಕಾಶ ಇದ್ದು ಅದರಲ್ಲಿ ಅಂಚೆ ಇಲಾಖೆ ಹಲವು ಯೋಜನೆಗಳನ್ನು ಜಾರಿಗೆ‌ತಂದಿದ್ದು ಗ್ಯಾರಂಟಿ ರಿಟರ್ನ್ಸ್ ಜೊತೆ ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ರಿಸ್ಕ್‌ ಕೂಡ ಕಡಿಮೆ ಇದೆ.‌ ಹಾಗಾಗಿ ಜನರು ಇಲ್ಲಿ ಹೂಡಿಕೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. Post Office MIS ಯೋಜನೆ ಮೂಲಕ ಹೂಡಿಕೆ ಮಾಡಲು ಉತ್ತಮ ಆಯ್ಕೆ ನಿಮಗಿದೆ. ಇದು ಸರ್ಕಾರದ ಬೆಂಬಲಿತ ಅಂಚೆ ಕಚೇರಿ ಯೋಜನೆಯು ಇದಾಗಿದ್ದು ಇಲ್ಲಿ ನೀವು ಉಳಿತಾಯದ ಮೇಲೆ ಸುರಕ್ಷಿತ ಆದಾಯವನ್ನು ಪಡೆಯಬಹುದು. ಈ ಉಳಿತಾಯ ಯೋಜನೆಯು ಮಾಸಿಕ ಆದಾಯ ಯೋಜನೆಯಾಗಿದ್ದು ಇದರಲ್ಲಿ ಒಟ್ಟು ಮೊತ್ತದ ಠೇವಣಿಯಲ್ಲಿ ಪ್ರತಿ ತಿಂಗಳು ಆದಾಯವನ್ನು ನೀವು ಪಡೆಯಬಹುದಾಗಿದೆ.

ಎಷ್ಟು ಹೂಡಿಕೆ ಮಾಡಬೇಕು?

 

 

ಅಂಚೆ ಕಛೇರಿಯ ಈ ಯೋಜನೆಯಲ್ಲಿ, ನೀವು ಒಂದೇ ಖಾತೆಯಲ್ಲಿ ರೂ 9 ಲಕ್ಷ ಮತ್ತು ಜಂಟಿ ಖಾತೆಯಲ್ಲಿ ರೂ 15 ಲಕ್ಷದವರೆಗೆ ಠೇವಣಿ ಮಾಡಲು ಅವಕಾಶ ಇದೆ. ನಿಮ್ಮ ಠೇವಣಿ ಮೊತ್ತಕ್ಕೆ ಇಲ್ಲಿ‌ 7.4 ಶೇಕಡಾ ದರದಲ್ಲಿ ಬಡ್ಡಿಯನ್ನು ನೀವು ಹಿಂಪಡೆಯಬಹುದು. ಈ ಬಡ್ಡಿ ದರವು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾವಣೆ ಕೂಡ ಆಗುತ್ತದೆ.

advertisement

ಮೆಚ್ಯೂರಿಟಿ ಅವಧಿ:

ಈ ಖಾತೆಯ ಮೆಚ್ಯೂರಿಟಿ ಅವಧಿಯು 5 ವರ್ಷಗಳು ಆಗಿರುತ್ತದೆ.ರೂ. 9 ಲಕ್ಷ ಠೇವಣಿ ಇಟ್ಟರೆ ತಿಂಗಳಿಗೆ ರೂ.5,550 ಪಡೆಯಬಹುದು. ಹಾಗೂ 15 ಲಕ್ಷ ರೂಪಾಯಿ ಠೇವಣಿ ಇಟ್ಟರೆ 9,250 ರೂಪಾಯಿ ಹಣ ಪಡೆಯಬಹುದು.

ವಿಸ್ತರಣೆ ಮಾಡಬಹುದು:

5 ವರ್ಷಗಳ ಮೆಚುರಿಟಿ ಅವಧಿಯ ನಂತರ ನಿಮ್ಮ ಒಟ್ಟು ಅಸಲು ಮೊತ್ತವನ್ನು ವಾಪಸ್ಸು ಪಡೆಯಬಹುದು. ಅದೇ ಸಮಯದಲ್ಲಿ, ಇದನ್ನು 5-5 ವರ್ಷಗಳವರೆಗೆ ವಿಸ್ತರಣೆ ಕೂಡ ಮಾಡಬಹುದು. ಪ್ರತಿ 5 ವರ್ಷಗಳ ನಂತರ ಮೊತ್ತವನ್ನು ಹಿಂಪಡೆಯಲು ಅಥವಾ ಯೋಜನೆಯನ್ನು ವಿಸ್ತರಿಸಲು ಆಯ್ಕೆ ಇರುತ್ತದೆ. ಮುಕ್ತಾಯಗೊಳ್ಳುವ ಮೊದಲು ಹಣ ಅಗತ್ಯವಿದ್ದರೆ, ಒಂದು ವರ್ಷದ ನಂತರ ನೀವು ಈ ಸೌಲಭ್ಯವನ್ನು ಪಡೆಯಬಹುದು.‌ ನೀವು 1 ರಿಂದ 3 ವರ್ಷಗಳ ನಡುವೆ ಹಣವನ್ನು ಪಡೆದರೆ ಕಡಿತಗೊಳಿಸಿದ ನಂತರ ಠೇವಣಿ ಮೊತ್ತದ 2% ಮರು ಪಾವತಿಸಲಾಗುತ್ತದೆ.

ನೀವು Post Office MIS ಖಾತೆಯನ್ನು ತೆರೆಯಬೇಕಾದರೆ, ಇದಕ್ಕಾಗಿ ಮೊದಲಿಗೆ ನೀವು ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು.

advertisement

Leave A Reply

Your email address will not be published.