Karnataka Times
Trending Stories, Viral News, Gossips & Everything in Kannada

Home Loan: ಹೋಂ ಲೋನ್ EMI ಬೌನ್ಸ್ ಆಗಿದ್ರೆ ತಕ್ಷಣ ಈ ಕೆಲಸ ಮಾಡಿ; ಇಲ್ಲವಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರಬಹುದು!

advertisement

ನೀವು ಬ್ಯಾಂಕ್ ನಲ್ಲಿ ಲೋನ್ (Loan) ತೆಗೆದುಕೊಳ್ಳುತ್ತೀರಾ? ಹಾಗಾದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟು ಮುಖ್ಯ ಎನ್ನುವುದು ನಿಮಗೆ ಈಗಾಗಲೇ ಗೊತ್ತಿರುತ್ತೆ. ಆದ್ರೆ ಕೆಲವೊಮ್ಮೆ ಸಾಲ ಸರಿಯಾದ ಸಮಯಕ್ಕೆ ಪಾವತಿ ಮಾಡದೇ ಇದ್ದಾಗ ಅದು ನೇರವಾಗಿ ಕ್ರೆಡಿಟ್ ಸ್ಕೋರ್ (Credit Card) ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮುಂದಿನ ಬಾರಿ ನೀವು ಬ್ಯಾಂಕ್ ನಿಂದ ಸುಲಭವಾಗಿ ಸಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ ಇದಕ್ಕಾಗಿ ನೀವು ಪ್ರಮುಖವಾಗಿ ಈ ಕೆಲಸವನ್ನು ಮಾಡಲೇಬೇಕು.

Home Loan EMI ಪಾವತಿ ಬಾಕಿ ಆಗಿದ್ರೆ ಏನು ಮಾಡಬೇಕು?

 

 

ಗೃಹ ಸಾಲ (Home Loan) ಎನ್ನುವುದು ದೀರ್ಘಾವಧಿಯ ಸಾಲವಾಗಿದೆ. ಗೃಹ ಸಾಲದ ಈಎಂಐ ಮೊತ್ತವು ಕೂಡ ಕಡಿಮೆ ಅಲ್ಲ. ಸಾವಿರಾರು ರೂಪಾಯಿಗಳನ್ನು ನೀವು ಪ್ರತಿ ತಿಂಗಳು ನಿಗದಿತ ದಿನಾಂಕದಂದು ತಪ್ಪದೆ ಈಎಂಐ ಪಾವತಿ ಮಾಡಬೇಕು. ಆದರೆ ಸಾಕಷ್ಟು ಬಾರಿ ಆರ್ಥಿಕ ಪರಿಸ್ಥಿತಿ ಎನ್ನುವುದು ಹದಗೆಟ್ಟಾಗ ಈಎಂಐ ಸರಿಯಾದ ಸಮಯಕ್ಕೆ ಪಾವತಿ ಮಾಡಲು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ನೀವು ಮನೆ ಸಾಲದ ಈಎಂಐ ಪಾವತಿ ಮಾಡದೆ ಸ್ವಲ್ಪ ದಿನ ಮುಂದೂಡಬಹುದು. ಆದರೆ ಹಾಗೇನಾದರೂ ಮಾಡಿದ್ದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಅದು ಪರಿಣಾಮ ಬೀರುತ್ತದೆ. ಇದಕ್ಕಾಗಿ ನೀವು ಕೆಲವು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ಮೊದಲ ಬಾರಿಗೆ ಇನ್ಸ್ಟಾಲ್ಮೆಂಟ್ ಪಾವತಿ ಮಾಡದೆ ಇದ್ದರೆ:

ನೀವು ಗೃಹ ಸಾಲದ EMI ಮೊದಲ ಬಾರಿಗೆ ಇನ್ಸ್ಟಾಲ್ಮೆಂಟ್ ಮಾಡಲು ಸಾಧ್ಯವಾಗದೇ ಇದ್ದರೆ ತಕ್ಷಣ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಮ್ಯಾನೇಜರ್ ಅನ್ನು ಭೇಟಿ ಮಾಡಿ ಇರುವ ವಿಚಾರವನ್ನು ತಿಳಿಸಿ. ನೀವು ಹೇಳಿರುವ ಪಾಯಿಂಟ್ ವ್ಯಾಲಿಡ್ ಎಂದು ಅನ್ನಿಸಿದರೆ, ನಿಮಗೆ ಮತ್ತಷ್ಟು ಕಾಲಾವಕಾಶ ಕೊಡುವ ಸಾಧ್ಯತೆ ಇರುತ್ತದೆ.

advertisement

ಸತತ ಎರಡು ಬಾರಿ ಈಎಂಐ ಪಾವತಿ ಮಾಡಲು ಸಾಧ್ಯವಾಗದೆ ಇದ್ದರೆ:

ನೀವು ಒಂದು ಅಥವಾ ಎರಡು ಕಂತನ್ನು ಮಿಸ್ ಮಾಡಿದರೆ ಬ್ಯಾಂಕ್ ಮ್ಯಾನೇಜರ್ ಜೊತೆಗೆ ಮಾತನಾಡಿ ಸಿಬಿಲ್ ಸ್ಕೋರ್ ಮ್ಯಾನೇಜ್ಮೆಂಟ್ ಗೆ ನಕಾರಾತ್ಮಕ ವರದಿ ಸಲ್ಲಿಕೆ ಮಾಡದಂತೆ ಕೇಳಿಕೊಳ್ಳಬಹುದು. ಭವಿಷ್ಯದಲ್ಲಿ ಮತ್ತೆ ಈಎಂಐ ಪಾವತಿ ಮಾಡುವುದನ್ನು ತಪ್ಪಿಸುವುದಿಲ್ಲ ಎಂದು ಹೇಳಿ CIBIL Score ಹಾಳಾಗದಂತೆ ನೋಡಿಕೊಳ್ಳಬಹುದು. ಯಾವುದೇ ವ್ಯಕ್ತಿ ಎರಡರಿಂದ ಮೂರು ಕಂತಿನ ಹಣ ಪಾವತಿ ಮಾಡುವುದನ್ನು ತಪ್ಪಿಸಿಕೊಂಡರೆ ಬ್ಯಾಂಕ್ ಮ್ಯಾನೇಜರ್ ಸಿಬಿಲ್ ಸ್ಕೋರ್ ಗೆ ನಿಮ್ಮ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಈ ರೀತಿ ವರದಿ ಸಲ್ಲಿಕೆ ಆದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ ಹಾಗೂ ಮುಂದಿನ ಬಾರಿ ಸಾಲ ತೆಗೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ.

ದೀರ್ಘಾವಧಿಯವರಿಗೆ ಈಎಂಐ ಪಾವತಿ ಮಾಡಲು ಸಾಧ್ಯವಾಗದಿದ್ದಲ್ಲಿ:

ನೀವು ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದು ದೀರ್ಘಕಾಲದವರೆಗೆ ಗೃಹ ಸಾಲದ ಕಂತನ್ನು ಪಾವತಿ ಮಾಡಲು ಸಾಧ್ಯವಾಗದೇ ಇದ್ದಾಗ, ಬ್ಯಾಂಕ್ ವ್ಯವಸ್ಥಾಪಕರ ಬಳಿ ಮಾತನಾಡಿ ನಿಮ್ಮ ಈಎಂಐ ಕಂತನ್ನು ಹಿಡಿದಿಟ್ಟುಕೊಳ್ಳುವಂತೆ ಅಥವಾ ಸ್ವಲ್ಪ ಸಮಯದ ವರೆಗೆ ಅವಕಾಶ ಕೊಡುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಳ್ಳಬಹುದು. ಇದರ ಸಂದರ್ಭದಲ್ಲಿ ಆದಷ್ಟು ಬೇಗ ನೀವು ಹಣವನ್ನು ಹೊಂದಿಸಿ ಬಾಕಿ ಇರುವ ಹಣವನ್ನು ಪಾವತಿ ಮಾಡಬೇಕು.

ತಡವಾಗಿ ಸಂಬಳ ಬಂದು EMI ಬೌನ್ಸ್ ಆಗಿದ್ದರೆ:

ಸಾಮಾನ್ಯವಾಗಿ ಗೃಹ ಸಾಲ (Home Loan) ಸ್ಯಾಲರಿ ಅಕೌಂಟ್ ಇದ್ದರೆ ಅಲ್ಲಿಂದ ನೇರವಾಗಿ ಸಾಲಕ್ಕೆ ಜಮಾ ಮಾಡಿಕೊಳ್ಳಲಾಗುತ್ತದೆ. ಒಂದು ವೇಳೆ ನಿಮಗೆ ಸಂಬಳ ತಡವಾಗಿ ಬಂದಿದ್ದು, ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದಾಗ ನಿಗದಿತ ದಿನಕ್ಕೆ ಈ ಎಂಐ ಪಾವತಿ ಮಾಡದೆ ಬೌನ್ಸ್ ಆಗಬಹುದು. ಇಂತಹ ಸಂದರ್ಭದಲ್ಲಿ ನೀವು ಬ್ಯಾಂಕ್ ನ ಸಂಬಂಧ ಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಬೇಕು. ಸಾಮಾನ್ಯವಾಗಿ ಈಎಂಐ ಪಾವತಿ ಮಾಡುವ ಸಮಯ ತಿಂಗಳಿನ ಮೊದಲ ಐದು ತಾರೀಖಿನ ಒಳಗೆ ಇರುತ್ತದೆ ನಿಮಗೆ ಇದಕ್ಕಿಂತ ತಡವಾಗಿ ಸಂಬಳ ಬರುವುದಾದರೆ ತಿಂಗಳ ಕೊನೆಯಲ್ಲಿ ಪಾವತಿ ಮಾಡುವಂತಹ ಈ ಎಂಐ ತೆಗೆದುಕೊಳ್ಳಬಹುದು ಇದಕ್ಕೆ ನೀವು ಬ್ಯಾಂಕ್ ಮ್ಯಾನೇಜರ್ ಬಳಿ ಮಾತನಾಡಬೇಕು.

advertisement

Leave A Reply

Your email address will not be published.