Sukanya Samriddhi: ಸುಕನ್ಯಾ ಸಮೃದ್ಧಿ ಖಾತೆ ಹೊಂದಿದ್ದರೆ ಮಾರ್ಚ್ 31 ರ ತನಕ ಈ ಕೆಲಸವನ್ನು ಪೂರ್ಣಗೊಳಿಸಿ, ಇಲ್ಲದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯ!
![](https://karnatakatimes.com/wp-content/uploads/2024/02/Your-Sukanya-Samriddhi-account-will-be-inactive-if-you-not-complete-this-work-by-March-31.jpg)
advertisement
ಇಂದು ಹೆಣ್ಣು ಮಕ್ಕಳ ಮತ್ತು ಮಹೀಳೆಯರ ಪ್ರಗತಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೆ ಇದೆ. ಅದೇ ರೀತಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯನ್ನು ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿದ್ದು ಇದು ಒಂದು ಉಳಿತಾಯದ ಯೋಜನೆಯಾಗಿದೆ.
ಎಷ್ಟು ಬಡ್ಡಿ ನೀಡಲಾಗುತ್ತದೆ?
ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಹೆಣ್ಣುಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 250 ರೂ. ಆಗಿದ್ದು ಶೇಕಡಾ 8.2 ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ. ಅದೇ ರೀತಿ ಸರ್ಕಾರವು ತೆರಿಗೆ ಪ್ರಯೋಜನಗಳನ್ನು ನೀಡಲಿದ್ದು ತೆರಿಗೆ ವಿನಾಯಿತಿ ಸಹ ಇದೆ.
ಈ ಕೆಲಸ ಮೊದಲು ಮಾಡಿ:
ಈ ಖಾತೆಯನ್ನು ತೆರೆದಿದ್ದರೆ ಮಾರ್ಚ್ 31, 2024 ರ ನಂತರ ಅನೇಕ ಹೂಡಿಕೆದಾರರು ಈ ಯೋಜನೆ (Sukanya Samriddhi Yojana) ಯ ಪ್ರಯೋಜನವನ್ನು ಪಡೆಯಲಾಗುವುದಿಲ್ಲ. ಯಾಕಂದ್ರೆ ಈ ಯೋಜನೆಯನ್ನು ಸಕ್ರಿಯವಾಗಿ ಇಡಲು ಕನಿಷ್ಠ ಮೊತ್ತ ಬೇಕು. ಇಲ್ಲದಿದ್ದಲ್ಲಿ ಆ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ಖಾತೆಯನ್ನು ಮತ್ತೆ ನೀವು ಸಕ್ರಿಯಗೊಳಿಸಲು ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಖಾತೆದಾರನು 31 ಮಾರ್ಚ್ 2024 ರವರೆಗೆ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ.
advertisement
ಗರಿಷ್ಠ ಹೂಡಿಕೆ ಎಷ್ಟು?
ಈ ಸುಕನ್ಯಾ ಸಮೃದ್ಧಿ (Sukanya Samriddhi) ಯೋಜನೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 250 ರೂ. ಆಗಿದ್ದು 1,50,000 ರೂಪಾಯಿ ವರೆಗೆ ಠೇವಣಿ ಇಡಬಹುದು. ಒಂದು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಒಬ್ಬ ಮಗಳ ಹೆಸರಿನಲ್ಲಿ ಎರಡು ಖಾತೆ ತೆರೆಯಲು ಅವಕಾಶ ಇಲ್ಲ.ಹೆಣ್ಣು ಮಗುವಿನ ಜನನದ ನಂತರ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದಾಗಿದೆ.
ಕನಿಷ್ಠ ಮೊತ್ತ ಇಲ್ಲದಿದ್ದರೆ ದಂಡ:
ಈ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಡೀಫಾಲ್ಟ್ನ ಪ್ರತಿ ವರ್ಷಕ್ಕೆ ರೂ 250 ಮತ್ತು ರೂ 50 ದಂಡದ ಮೊತ್ತವನ್ನು ಪಾವತಿಸಬೇಕು.
ಬಡ್ಡಿದರ ಪರಿಷ್ಕರಣೆ:
ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿ ದರವನ್ನು ಪರಿಷ್ಕರಣೆಕೂಡ ಮಾಡಲಾಗುತ್ತದೆ.ಹೂಡಿಕೆ ಮಾಡಿದ ಹಣವನ್ನು ಅವಳ ಉನ್ನತ ಶಿಕ್ಷಣ ಅಥವಾ ಮದುವೆಗೆ ಬಳಸ ಬಹುದಾಗಿದೆ. ಇದರ ಮೆಚ್ಯೂರಿಟಿ ಅವಧಿಯು ಖಾತೆಯನ್ನು ತೆರೆದ ದಿನಾಂಕದಿಂದ 21 ವರ್ಷ ಅಥವಾ ಹೆಣ್ಣು ಮಗುವಿಗೆ 18 ವರ್ಷ ವಯಸ್ಸಾಗುವವರೆಗೆ ಇರಲಿದೆ. ಹಾಗೇ ಅಂಚೆ ಕಛೇರಿ ಅಥವಾ ವಾಣಿಜ್ಯ ಬ್ಯಾಂಕುಗಳ ಯಾವುದೇ ಶಾಖೆಯಲ್ಲಿ ಈ ಖಾತೆ ತೆರೆಯಬಹುದು.
advertisement