Karnataka Times
Trending Stories, Viral News, Gossips & Everything in Kannada

Ration Card: BPL ಕಾರ್ಡ್ ರದ್ದು ಪಟ್ಟಿ ಬಿಡುಗಡೆ, ನಿಮ್ಮ ರೇಷನ್‌ ಕಾರ್ಡ್ ಇದೆಯಾ? ಚೆಕ್ ಮಾಡಿಕೊಳ್ಳಿ

advertisement

ಇಂದು ರೇಷನ್ ಕಾರ್ಡ್ (Ration Card) ಅನ್ನೋದು ಸಹ ಪ್ರತಿಯೊಬ್ಬರಿಗೂ ಬಹಳ ಮುಖ್ಯವೆನಿಸಿದೆ. ಅದರಲ್ಲೂ ಬಡ ವರ್ಗದ ಜನತೆ ಈ ಕಾರ್ಡ್ ಮೂಲಕ ಹಲವು ರೀತಿಯ ಸೌಲಭ್ಯ ಗಳನ್ನು ಪಡೆದುಕೊಳ್ಳುತ್ತಿದ್ದಾರೆ‌. ಬಡತನ ರೇಖೆಗಿಂತ ಕೆಳಗಿರುವವರ ಜನರ, ಅವರ ಹಸಿವನ್ನು ನೀಗಿಸುವ ಉದ್ದೇಶದಿಂದ ಸರ್ಕಾರ ಬಿಪಿಎಲ್ ಕಾರ್ಡ್ ವಿತರಣೆ ಮಾಡುತ್ತಿದೆ.‌ ಆದರೆ ಇಂದು ರೇಷನ್ ಕಾರ್ಡ್ ಅನ್ನು ದುರುಪಯೋಗ ಮಾಡುವವರ ಸಂಖ್ಯೆಯು ಕೂಡ ಹೆಚ್ಚಾಗಿದ್ದು ಇದಕ್ಕಾಗಿ ಆಹಾರ ಇಲಾಖೆಯು ಹೊಸ ಕ್ರಮವನ್ನು ಕೂಡ ಜಾರಿಗೆ ತರುತ್ತಿದೆ.

Ration Card ಗಳ ಪರಿಶೀಲನೆ: 

ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳನ್ನು ಪರಿಶೀಲನೆ ಮಾಡಿ ಅರ್ಹರಲ್ಲದ ಬಿಪಿಎಲ್ ಕಾರ್ಡ್ ಸುಮಾರು 4.59 ಲಕ್ಷ ಬಿಪಿಎಲ್ ಕಾರ್ಡ್‌ (BPL Card) ಗಳನ್ನು ರದ್ದು ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಸರಕಾರ ಈ ಬಗ್ಗೆ ಪರಿಶೀಲನೆ ಮಾಡಿದಾಗ ತೆರಿಗೆದಾರರು ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಕಾರ್ಡ್ ಹೊಂದಿದ್ದು ಸರಕಾರದ ಸೌಲಭ್ಯ ವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

Image Source: The Indian Express

advertisement

ಇಂತವರ ಕಾರ್ಡ್ ರದ್ದು

ಪಡಿತರ ಇಲಾಖೆಯು ಪಡಿತರ ಪಡೆಯದ ಇರುವ ಕಾರ್ಡ್ ದಾರರನ್ನು ಯಾವುದೇ ನೋಟಿಸ್ ನೀಡದೆ ಪತ್ತೆಹಚ್ಚಿತ್ತು. ಹೀಗಾಗಿ ಆರು ತಿಂಗಳಿನಿಂದ ರೇಷನ್ ಪಡೆಯದ ಇದ್ದ ರೇಷನ್ ಕಾರ್ಡ್ ಅನ್ನು ಕೂಡ ರದ್ದು ಮಾಡಿದೆ. ಇದರಿಂದ ಪಡಿತರ ಚೀಟಿ ಜೊತೆಗೆ ಸರ್ಕಾರದಿಂದ ಸಿಗುವ ಹಲವು ಸೌಲಭ್ಯಗಳೂ ಕಡಿತವಾಗುವ ಸಾಧ್ಯತೆ ಕೂಡ ಇದೆ.

ಕಾರ್ಡ್ ರದ್ದು ಪಟ್ಟಿ ತಿಳಿದುಕೊಳ್ಳಿ

ಮೊದಲಿಗೆ ನೀವು ಆಹಾರ ಇಲಾಖೆಯ https://ahara.kar.nic.in ಈ ಲಿಂಕ್ ಗೆ ಭೇಟಿ ಮಾಡಿ, ನಂತರ ನಿಮಗೆ ಈ ಸರ್ವಿಸ್ E-Services ಎಂಬ ವಿಭಾಗ ಸಿಗಲಿದ್ದು , ಇ ರೇಷನ್ ಕಾರ್ಡ್ ಎಂಬ ಆಶ್ಚನ್ ಸಿಗಲಿದೆ. ನಂತರದಲ್ಲಿ ಪಡಿತರ ಚೀಟಿ ಆಯ್ಕೆಯಲ್ಲಿ ರದ್ದುಪಡಿಸಿದ ರೇಷನ್ ಕಾರ್ಡ್‌ಗಳ ಪಟ್ಟಿ ಎಂಬ ಆಯ್ಕೆ ಇರಲಿದ್ದು, ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ವರ್ಷ ಆಪ್ಲೈ ಮಾಡಲು ಕೇಳುತ್ತದೆ. ಆ ಮಾಹಿತಿಗಳನ್ನು ಸಲ್ಲಿಕೆ ಮಾಡಿ, GO ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ರದ್ದು ಪಡಿಸಿದ ಪಡಿತರ ಕಾರ್ಡ್ ಮಾಹಿತಿ ಸಿಗುತ್ತದೆ.

advertisement

Leave A Reply

Your email address will not be published.