Karnataka Times
Trending Stories, Viral News, Gossips & Everything in Kannada

Electric Vehicle: ಎಲೆಕ್ಟ್ರಿಕ್ ವಾಹನ ಖರೀದಿ ಮಾಡೋರಿಗೆ ಹೊಸ ಸೂಚನೆ! ಏಪ್ರಿಲ್ ತಿಂಗಳ ಬಳಿಕ ನಿರಾಸೆ

advertisement

ಎಲೆಕ್ಟ್ರಿಕ್ ವಾಹನಗಳು (Electric Vehicle) ಇತ್ತೀಚಿನ ಜನಾಂಗಕ್ಕೆ ಬಲು ಆಕರ್ಷಣೆಯ ವಾಹನವಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವುದರಿಂದ ನಿಮಗೆ ಹಣಕಾಸಿನ ಉಳಿತಾಯ ಆಗುವ ಜೊತೆಗೆ ಪರಿಸರಕ್ಕೆ ಕೂಡ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಲಿದೆ. ಎಲೆಕ್ಟ್ರಿಕ್ ವಾಹನಗಳು ಇತ್ತೀಚಿನ ವರ್ಷದಲ್ಲಿ ತುಂಬಾ ಬೇಡಿಕೆ ಸೃಷ್ಟಿ ಮಾಡುತ್ತಿದ್ದು ಇದರ ಉತ್ಪಾದಕ ಕಂಪೆನಿಗಳ ನಡುವೆ ಭರ್ಜರಿ ಪೈಪೋಟಿ ಸಹ ನಡೆಯುತ್ತಿದೆ. ಹಾಗಾಗಿ ವಾಹನ ಕೊಳ್ಳುವವರ ಅಭಿರುಚಿಗೆ ತಕ್ಕಂತೆ ವಿನೂತನ ಆವೃತ್ತಿ ಸಹ ತಯಾರಾಗುತ್ತಿದೆ.

ಸರಕಾರದಿಂದಲೂ ಬೆಂಬಲ

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡಲು ಸಾರ್ವತ್ರಿಕ ಬೆಂಬಲವನ್ನು ನೀಡುತ್ತಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವ ಸಾರ್ವಜನಿಕರಿಗೆ ಫೇಮ್ 2 (FAME 2) ಸಬ್ಸಿಡಿ ನೀಡಲಾಗುತ್ತಿದ್ದು ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡ್ತೇವೆ ಅನ್ನೊರಿಗೆ ಈ ಸಬ್ಸಿಡಿ ಮೊತ್ತ ದೊಡ್ಡ ಮಟ್ಟಿಗೆ ಸಹಕಾರಿ ಕೂಡ ಆಗಿತ್ತು. ಆದರೆ ಶೀಘ್ರವೇ ಈ ಸಬ್ಸಿಡಿ ಮೊತ್ತ ನೀಡಿಕೆ ಮುಕ್ತಾಯ ಆಗಲಿದೆ.

Image Source: Times Now

ಯಾವಾಗ ಕೊನೆ ಗೊಳ್ಳಲಿದೆ

advertisement

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿ ಮಾಡೋರಿಗೆ ನೀಡಲಾಗುವ ಫೇಮ್ 2 (FAME 2) ಸಬ್ಸಿಡಿಯು ಎಪ್ರಿಲ್ 1 ರಿಂದ ಕೊನೆಗೊಳ್ಳಲಿದೆ. ಹಾಗಾಗಿ ಈ ಯೋಜನೆ ಮುಕ್ತಾಯ ಆದ ಬಳಿಕ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ನ ಬೆಲೆ ಏರಿಕೆ ಕಾಣಲಿದೆ. ಹಾಗಾಗಿ ನೀವು ಕೂಡ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಸರಕಾರದ ಸಬ್ಸಿಡಿ ಬಯಸುವವರು ನೀವಾಗಿದ್ದರೆ ಕೂಡಲೇ ಖರೀದಿ ಮಾಡಿದರೆ ಕಡಿಮೆ ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನ ನಿಮಗೆ ಸಿಗಲಿದೆ ಇಲ್ಲವಾದರೆ ದುಬಾರಿ ವೆಚ್ಚ ಬರಿಸಬೇಕಾಗುತ್ತದೆ‌‌.

Electric Vehicle ಬೆಲೆ ಏರಿಕೆ ಬಿಸಿ

ಎಲೆಕ್ಟ್ರಿಕ್ ವಾಹನ (Electric Vehicle) ಖರೀದಿ ಮಾಡೋರಿಗೆ ಫೇಮ್ 2 ಸಬ್ಸಿಡಿ ಇರಲಾರದು ಆದರ ಬದಲಾಗಿ 2024ರ ಎಲೆಕ್ಟ್ರಿಕ್ ಮೊಬಿಲಿಟಿ ಸ್ಕೀಂ ಅನ್ನು ಜಾರಿಗೆ ತರಲಾಗುವುದು. ಇದರಿಂದ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ಪ್ರಮಾಣ ಹೆಚ್ಚಾಗುವ ಜೊತೆಗೆ ಸಬ್ಸಿಡಿ ಮೊತ್ತ ಇರದೇ ವಾಹನಗಳ ಖರೀದಿ ಮಾಡುವ ಬೆಲೆ ಕೂಡ ಏರಿಕೆ ಇರಲಿದೆ. ಹಿಂದೆ ದೊರೆಯುತ್ತಿದ್ದ ಸಬ್ಸಿಡಿ 10% ನಷ್ಟು ಕಡಿಮೆ ಆಗಲಿದೆ. ಈ ಹೊಸ ಯೋಜನೆಯು ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲು ಬೆಂಬಲ ನೀಡಿದರೂ ಕೂಡ ಸಬ್ಸಿಡಿ ಮೊತ್ತ ಕಡಿಮೆ ಇರಲಿದೆ. ಹಾಗಾಗಿ ಎಪ್ರಿಲ್ ಒಂದರ ಬಳಿಕ ಬೆಲೆ ಏರಿಕೆ ಬಿಸಿ ತಟ್ಟಲಿದೆ.

Image Source: Mint

Electric Vehicle ಬಳಕೆದಾರರು ಹೆಚ್ಚಾಗುವ ನಿರೀಕ್ಷೆ

ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಿಗೆ ಅರಿವು ಉಂಟಾಗುತ್ತಿದೆ. ಹಾಗಾಗಿ ಮುಂದಿನ ದಿನದಲ್ಲಿ ಬೆಲೆ ಏರಿಕೆಯಾದರೂ ಅದು ಬೇಡಿಕೆ ಮೇಲೆ ಪರಿಣಾಮ ಬೀರಲಾರದು ಎನ್ನಲಾಗುತ್ತಿದೆ. ಎಪ್ರಿಲ್ ಒಂದರ ನಂತರ ಸಬ್ಸಿಡಿ ಮೊತ್ತ ತಗ್ಗಲಿದ್ದು ಎಲೆಕ್ಟ್ರಿಕ್ ವಾಹನ ಖರೀದಿ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂದು ಕಾದುನೋಡಬೇಕು.

advertisement

Leave A Reply

Your email address will not be published.