Karnataka Times
Trending Stories, Viral News, Gossips & Everything in Kannada

FAME II: ಕೇವಲ 4 ತಿಂಗಳಿಗಾಗಿ ಮೋದಿ ಸರ್ಕಾರದ ಹೊಸ ಯೋಜನೆ! ಸಂತಸದಲ್ಲಿ ವಾಹನ ಸವರರು

advertisement

Ministry of Heavy Industries (ಭಾರಿ ಕೈಗಾರಿಕಾ ಸಚಿವಾಲಯ) ನಾಲ್ಕು ತಿಂಗಳ ಅವಧಿಗೆ ಅಂದರೆ 2024 ಏಪ್ರಿಲ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಅನ್ವಯವಾಗುವಂತೆ ಹೊಸ ಯೋಜನೆಯನ್ನು ಘೋಷಿಸಿದೆ. ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಖರೀದಿಯನ್ನು ಪ್ರೋತ್ಸಾಹಿಸಲು ಇದನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ 500 ಕೋಟಿಗಳನ್ನು ಮೋದಿಜಿ ಸರ್ಕಾರ ಮೀಸಲಿಟ್ಟಿದೆ.

ಎಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಸರ್ಕಾರದ ಬೆಂಬಲ:

ಎಲೆಕ್ಟ್ರಿಕ್ ವಾಹನ (Electric Vehicle) ಅಳವಡಿಕೆ ಮತ್ತು ತಯಾರಿಕೆಯ 2ನೇ ಹಂತ (FAME II) ಮಾರ್ಚ್ 31.2024ಕ್ಕೆ ಮುಗಿಯಲಿದೆ. ಇದನ್ನು ಇನ್ನಷ್ಟು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಹಾಗಾಗಿ ಜುಲೈ ತಿಂಗಳವರೆಗೆ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಖರೀದಿಸುವವರಿಗೆ ಇದರ ಪ್ರಯೋಜನ ಸಿಗಲಿದೆ.

Image Source: ZigWheels.com

 

ದ್ವಿಚಕ್ರ ವಾಹನ ಖರೀದಿಸುವವರಿಗೆ 10,000 ರೂಪಾಯಿಗಳನ್ನು Modi ಸರ್ಕಾರ ಒದಗಿಸಲಿದೆ. ಹಾಗೂ ತ್ರಿಚಕ್ರ ವಾಹನ ಖರೀದಿಗೆ 25,000ಗಳನ್ನು ಪಡೆದುಕೊಳ್ಳಬಹುದು. ಹಾಗೂ ದೊಡ್ಡ ಗಾತ್ರದ ವಾಹನಗಳಿಗೆ 50,000ಗಳವರೆಗೆ ಸರ್ಕಾರದಿಂದ ಲಾಭ ಸಿಗಲಿದೆ.

advertisement

ಈ ವಾಹನ ಖರೀದಿ ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ:

 

Image Source: Hindustan Times

 

ಬಾರಿ ಕೈಗಾರಿಕೆಗಳ ಸಚಿವ ಮಹೇಂದ್ರನಾಥ ಪಾಂಡೆ ಮೋದಿಜಿ ಸರ್ಕಾರ ಇ – ವಾಹನಗಳ ಖರೀದಿಯನ್ನು ಉತ್ತೇಜಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ. 41,000ಕ್ಕೂ ಹೆಚ್ಚಿನ ಇ ವಾಹನಗಳಿಗೆ ಸರ್ಕಾರದಿಂದ ನೆರವು ಸಿಗಲಿದೆ ಎಂದು ಹೇಳಿದರು. ಸಣ್ಣ ಚಕ್ರ ವಾಹನಗಳಿಗೆ 25,000 ಹಾಗೂ ದೊಡ್ಡ ವಾಹನಕ್ಕೆ 50,000 ಸಬ್ಸಿಡಿ ನೀಡುವುದರ ಮೂಲಕ ಎಲೆಕ್ಟ್ರಿಕ್ ವಾಹನ ಖರೀದಿಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಇದರಿಂದ ಎಲೆಕ್ಟ್ರಿಕ್ ವಾಹನ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತದೆ ಪರಿಸರ ಹಾನಿಯಾಗದೆ ಇರುವ ರೀತಿಯಲ್ಲಿ ಎಲೆಕ್ಟ್ರಿಕ್ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು ಖರೀದಿ ಹೆಚ್ಚಾದರೆ ಎಲೆಕ್ಟ್ರಿಕ್ ವಾಹನ ಇಂಡಸ್ಟ್ರಿ ಕೂಡ ಬೆಳೆಯುತ್ತದೆ. ಉದ್ಯಮ ಬೆಳವಣಿಗೆ ಆದರೆ ಸಾಕಷ್ಟು ನಿರುದ್ಯೋಗ ಸಮಸ್ಯೆಗಳು ನಿವಾರಣೆ ಆಗುತ್ತದೆ. ಈ ಕಾರಣಕ್ಕೆ ಸಬ್ಸಿಡಿ ಮುಂದುವರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಇಂಡಸ್ಟ್ರಿ (Electric Industry) ಬೆಳೆಸಲು ಕ್ರಮ ಭಾರಿ ಕೈಗಾರಿಕೆಗಳ ಸಚಿವಾಲಯ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕಿ ಎಲೆಕ್ಟ್ರಿಕ್ ವಾಹನ ವಲಯವನ್ನು ಬೆಳೆಸಲು MOU ಗೆ ಸಹಿ ಮಾಡಲಾಗಿತ್ತು. ಒಟ್ಟು ಯೋಜನೆಯ ವೆಚ್ಚ 24.66 ಕೋಟಿ ರೂಪಾಯಿಗಳು. ಸಚಿವಾಲಯದಿಂದ 19.87 ಕೋಟಿ ರೂಪಾಯಿಗಳು ಅನುದಾನ ಸಿಕ್ಕಿದೆ. ಉದ್ಯಮ ಪಾಲುದಾರರಿಂದ ಹೆಚ್ಚುವರಿಯಾಗಿ 4.78 ಕೋಟಿ ರೂಪಾಯಿಗಳನ್ನು ಯೋಜನೆಗೆ ಮೀಸಲಿಡಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬೇಡಿಕೆ, ಬೆಳೆಯುತ್ತಿರುವ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಲು ಉತ್ಪನ್ನಗಳನ್ನು ಆವಿಷ್ಕರಿಸಲು ಹಾಗೂ ದಿನವನ್ನು ಸುಧಾರಿಸಲು ಸಹಕರಿಸುತ್ತವೆ ಎಂದು ಲೋಹಿಯಾ ಆಟೋ ಸಿಇಓ ಆಯುಷ್ ಲೋಹಿಯಾ ತಿಳಿಸಿದರು. ಒಟ್ಟಿನಲ್ಲಿ ಇನ್ನು ನಾಲ್ಕು ತಿಂಗಳು ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸರ್ಕಾರದಿಂದ ನೆರವು ಸಿಗಲಿದೆ.g

advertisement

Leave A Reply

Your email address will not be published.