Karnataka Times
Trending Stories, Viral News, Gossips & Everything in Kannada

Nameplate: ನಾಮಫಲಕಗಳಲ್ಲಿ ಕನ್ನಡ ಬಳಕೆಯ ಕುರಿತಾಗಿ ಹೊಸ ಆದೇಶ! ಸಂತಸದಲ್ಲಿ ಕನ್ನಡಿಗರು

advertisement

ಇತ್ತೀಚಿಗಷ್ಟೇ ಕರ್ನಾಟಕದಲ್ಲಿ ಕನ್ನಡ ಬಳಕೆಯ ಕುರಿತಾಗಿ ಹಲವು ರೀತಿಯಾದಂತಹ ಹೋರಾಟಗಳು ನಡೆದಿದ್ದು ನಾಮಫಲಕ (Nameplate) ಗಳಲ್ಲಿ ಮತ್ತು ವ್ಯಾಪಾರ ಸ್ಥಳಗಳಲ್ಲಿ ಶೇಕಡಾ 60% ನಷ್ಟು ಕನ್ನಡ ಬಳಸುವುದು ಕಡ್ಡಾಯ ಎಂದು ಸುತ್ತೋಲೆಯೊಂದನ್ನು ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿತ್ತು. ಇನ್ನು ಕರ್ನಾಟಕದಲ್ಲಿ ಕನ್ನಡ ಬಳಕೆಯೇ ಸುಪ್ರೀಂ ಎನ್ನುವ ಘೋಷಣೆಗಳು ಕೂಡ ಕೇಳಿಬಂದಿತ್ತು.

ಸುತ್ತೋಲೆಯಲ್ಲಿದ್ದ ಪ್ರಮುಖ ಅಂಶಗಳೇನು?

ಇನ್ನು ಕರ್ನಾಟಕ ಸರ್ಕಾರದ ಸುತ್ತೋಲೆಯಲ್ಲಿ ಅಂಗಡಿ ಮುಂಗಟ್ಟು ಮತ್ತು ವ್ಯಾಪಾರ ಸ್ಥಳಗಳಲ್ಲಿ ಮತ್ತು ವಿವಿಧ ರೀತಿಯಾದಂತಹ ಮಳಿಗೆಗಳು, ಆಸ್ಪತ್ರೆಗಳು, ಸಿನಿಮಾ ಥಿಯೇಟರ್ ಗಳು ಮುಂತಾದ ಸ್ಥಳಗಳಲ್ಲಿ ಬಳಸಿರುವ ನಾಮಫಲಕಗಳಲ್ಲಿ ಶೇಕಡಾ 60% ನಷ್ಟು ಕನ್ನಡದ ಬಳಕೆ ಆಗಿರಬೇಕು. ಈ ರೀತಿಯಾಗಿ ಕನ್ನಡ ಬಳಸದೆ ಇರುವಂತಹ ಅಂಗಡಿಗಳು ಶೀಘ್ರವೇ ತಮ್ಮ ನಾಮಫಲಕಗಳಲ್ಲಿ 60% ನಷ್ಟು ಕನ್ನಡ ಬಳಕೆಯನ್ನು ಅಳವಡಿಸಿಕೊಳ್ಳುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿತ್ತು.

Image Source: Vistara News

advertisement

ನಾಮಫಲಕ (Nameplate)ಗಳಲ್ಲಿ ಕನ್ನಡದ ಬಳಕೆ:

ಇನ್ನು ಈ ರೀತಿಯಾದಂತಹ ಸೂಚನೆಯನ್ನು ಬಳಸದೆ ಇದ್ದಲ್ಲಿ ಅವರ ವ್ಯಾಪಾರ ಲೈಸೆನ್ಸ್ ಅನ್ನು ಅಮಾನತುಗೊಳಿಸಿ ಮಳಿಗೆಗೆ ಅಥವಾ ವ್ಯಾಪಾರ ಸ್ಥಳಕ್ಕೆ ಬೀಗ ಹಾಕುವಂತೆ ಸರ್ಕಾರ ಸುತ್ತೋಲೆಯನ್ನು ಹೊರಡಿಸಿತ್ತು. ಅದು ಕೂಡ ಫೆಬ್ರವರಿ 28 ರಿಂದ ಮಾರ್ಚ್ 14-2024 ಒಳಗಾಗಿ ಈ ಕಾರ್ಯಗಳು ನಡೆಯುವಂತೆ ತಿಳಿಸಲಾಗಿತ್ತು. ಇನ್ನು ಈ ಮೊದಲೇ ಈ ರೀತಿಯಾದಂತಹ ಸುತ್ತೋಲೆಯನ್ನು ಹೊರಡಿಸಿದಾಗ ಅದರಲ್ಲಿ ಬದಲಾವಣೆ ಮಾಡಿಕೊಂಡ ಅಂಗಡಿ ಮುಂಗಟ್ಟುಗಳ ಸಂಖ್ಯೆ 52,135 ಆಗಿತ್ತು.

ಇನ್ನು ಬದಲಾವಣೆಗೆ ಒಳಪಡದಂತಹ ಕೆಲವು ವಾಣಿಜ್ಯ ವ್ಯಾಪಾರ ಕೇಂದ್ರಗಳಿಗೆ ನೋಟಿಸ್ ಗಳನ್ನು ಕೂಡ ನೀಡಲಾಗಿತ್ತು ಮತ್ತು ಆ ರೀತಿಯಾಗಿ ನೋಟಿಸ್ ಜಾರಿಗೊಳಿಸಿದರು ಬದಲಾವಣೆ ಆಗದೆ ಇದ್ದಂತಹ ಮಳಿಗೆಗಳು 3044 ಇದ್ದು ಅಂತಹ ಮಳಿಗೆಗಳ ಮಾಲೀಕರ ಮನವಿಯನ್ನು ಆಲಿಸಿದಂತಹ ಕರ್ನಾಟಕದ ಡಿಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ನೀಡಿದಂತಹ ಸಮಯದ ಗಡುವನ್ನು ಎರಡು ವಾರಕ್ಕೆ ವಿಸ್ತಾರ ಮಾಡಿದರು ಮತ್ತು ಅದರಂತೆ ಅದರ ಗಡುವು ಮಾರ್ಚ್ 14 ಆಗಿತ್ತು.

Image Source: India Today

ಇನ್ನು ಮಾರ್ಚ್ 14 ಗುರುವಾರದಿಂದ ಬಿಬಿಎಂಪಿ (BBMP) ಹೊಸ ರೀತಿಯಾದಂತಹ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದು, ಅಂಗಡಿ ಮುಂಗಟುಗಳು ಸಂಶೋಧನಾ ಕೇಂದ್ರಗಳು, ಆಸ್ಪತ್ರೆ , ಶಾಪಿಂಗ್ ಮಾಲ್ ಗಳು , ಸಿನಿಮಾ ಥಿಯೇಟರ್ ಗಳು ಇವೆ ಮುಂತಾದಂತಹ ಸ್ಥಳಗಳಲ್ಲಿ ಮತ್ತು ವಾಣಿಜ್ಯ ವ್ಯಾಪಾರ ಮುಂಗಟುಗಳಲ್ಲಿ ಇನ್ನೂ ಸರಿಯಾದ ರೀತಿಯಲ್ಲಿ ಅಂದರೆ ಶೇಕಡ 60% ನಷ್ಟು ಕನ್ನಡ ಬಳಸದೆ ಇರುವಂತಹ ಮಳಿಗೆಗಳ ವಿರುದ್ಧ ಕ್ರಮ ಕೈಗೊಂಡು ಅವರ ಲೈಸೆನ್ಸ್ ಮತ್ತು ಅಂಗಡಿ ಮಳಿಗೆಯನ್ನು ಅಮಾನತ್ತು ಮಾಡಲು ಬಿಬಿಎಂಪಿ ಸಜ್ಜಾಗಿದೆ.

advertisement

Leave A Reply

Your email address will not be published.