Karnataka Times
Trending Stories, Viral News, Gossips & Everything in Kannada

Home Loan: ಸ್ವಂತ ಮನೆ ಕಟ್ಟುವ ಆಸೆ ಇದ್ದವರಿಗೆ ಸಿಹಿಸುದ್ದಿ ಕೊಟ್ಟ ಈ ಬ್ಯಾಂಕ್ ಗಳು!

advertisement

ಇಂದು ಸ್ವಂತ ಮನೆ ನಿರ್ಮಾಣ ಮಾಡುವ ಕನಸು ಪ್ರತಿಯೊಬ್ಬ ಮಧ್ಯಮ ವರ್ಗದ ಜನತೆಗೂ ಇದೆ. ಆದ್ರೆ ಹೊಸ ಮನೆ ನಿರ್ಮಾಣ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ.‌ ಮನೆ ನಿರ್ಮಾಣ ಕಾರ್ಯದ ವೆಚ್ಚಗಳು ಕೂಡ ಬಹಳ ಹೆಚ್ಚಾಗಿದ್ದು ಹೆಚ್ಚಿನ ಹಣ ಬೇಕಾಗುತ್ತದೆ.‌ ಅದರಲ್ಲೂ ಇಂದು ಸಿಮೆಂಟ್‌, ಕಬ್ಬಿಣ, ಮರಳು, ಇತ್ಯಾದಿಗಳ ಬೆಲೆಯಂತು ಅಧಿಕವಾಗಿದೆ. ಹಾಗಾಗಿ ಬಡ ವರ್ಗದ ಜನತೆಗೆ ಮನೆ ನಿರ್ಮಾಣದ ಕನಸು ನನಸು ಆಗುವುದು ಸ್ವಲ್ಪಮಟ್ಟಿಗೆ ಕಷ್ಟವೇ. ಆದ್ರೆ ನೀವು ಸಾಲ ಮಾಡಿಯಾದರು ಮನೆ ನಿರ್ಮಾಣ ಮಾಡುತ್ತೇವೆ ಎಂದಿದ್ದರೆ ನಿಮಗೆ ‌ಕೆಲವೊಂದು ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (Home Loan) ಸಿಗಲಿದೆ. ನೀವು ಗೃಹ ಸಾಲವನ್ನು ಪಡೆಯುದಾದ್ರೆ ಯಾವ ಬ್ಯಾಂಕ್ ನಲ್ಲಿ ಸಾಲದ ಆಯ್ಕೆ ಉತ್ತಮ? ಬಡ್ಡಿ ಹೇಗೆ ಇರಲಿದೆ ಎಂಬ ಮಾಹಿತಿಯನ್ನು‌ ತಿಳಿಯಲು ಈ‌ ಲೇಖನ ಓದಿ

ಈ ಬ್ಯಾಂಕ್‌ ನಲ್ಲಿ ಕಡಿಮೆ ಬಡ್ಡಿಗೆ ಗೃಹ ಸಾಲ (Home Loan) ಸಿಗಲಿದೆ:

ಬ್ಯಾಂಕ್ ಆಫ್ ಬರೋಡ (Bank Of Baroda):

ಬ್ಯಾಂಕ್ ಆಫ್ ಬರೋಡಾ ಇಂದು ಪ್ರತಿಷ್ಟಿತ ಬ್ಯಾಂಕ್ ಎಂದೆನಿಸಿಕೊಂಡಿದ್ದು ಇಲ್ಲಿನ ಬಳಕೆದಾರರ ಸಂಖ್ಯೆಯು ಕೂಡ ಹೆಚ್ಚಾಗಿದೆ. ಕೆಲವೊಂದು ಸಂದರ್ಭದಲ್ಲಿ ಈ ಬ್ಯಾಂಕ್ ಹೆಚ್ಚು ಅವಕಾಶಗಳನ್ನು ಖಾತೆದಾರರಿಗೂ ನೀಡುತ್ತ ಬಂದಿದೆ. ಇಲ್ಲಿ ಕೂಡ ನೀವು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ (Home Loan)ವನ್ನು ಪಡೆಯಲು ಉತ್ತಮ ಆಯ್ಕೆ ಇದೆ. ಇಲ್ಲಿ ಬ್ಯಾಂಕ್ 8.4 ಪ್ರತಿಶತದಿಂದ 10.6 ಪ್ರತಿಶತದವರೆಗೆ ವಾರ್ಷಿಕ ಬಡ್ಡಿದರ ನೀಡುತ್ತದೆ.

Image Source: Zee Business

ಬ್ಯಾಂಕ್ ಆಫ್ ಇಂಡಿಯಾ (Bank Of India): 

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೂಡ ‌ ಗೃಹ ಸಾಲಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಈ ಬ್ಯಾಂಕ್ ಗೃಹ ಸಾಲ (Home Loan)ದ ಮೇಲೆ ವಾರ್ಷಿಕ 8.30 ಪ್ರತಿಶತದಿಂದ ಬಡ್ಡಿ ಪ್ರಾರಂಭ ಮಾಡುತ್ತದೆ. ಅದೇ ರೀತಿ ಈ ಬ್ಯಾಂಕ್ ಮರುಪಾವತಿ ಆಯ್ಕೆ ಹೆಚ್ಚಿನ ಸಮಯದವರೆಗೆ ನೀಡಲಿದೆ

advertisement

Image Source: Moneycontrol

ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank):

ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂದು ಹೆಚ್ಚು ಪ್ರಚಲಿತದಲ್ಲಿದೆ. ಇಲ್ಲಿ ಸಾಲ ನೀಡುವ ಆಯ್ಕೆ ಕೂಡ ಹೆಚ್ಚಾಗಿದ್ದು ಬಡ್ಡಿದರವೂ ಕೂಡ ಕಡಿಮೆ ಇರಲಿದೆ. ಇಲ್ಲಿ ಗೃಹ ಸಾಲ (Home Loan)ದ ಮೇಲೆ‌ ಶೇ.8.45 ರಿಂದ ಶೇ.10.5 ಬಡ್ಡಿ ನೀಡುತ್ತದೆ. ಈ ಬ್ಯಾಂಕ್ 30 ಲಕ್ಷದಿಂದ 80 ಲಕ್ಷದವರೆಗೆ ಗೃಹ ಸಾಲದ ಮೊತ್ತವನ್ನು ನೀಡುತ್ತದೆ.

Image Source: ABP News

 

ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank):

ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್‌ಡಿಎಫ್‌ಸಿ ಆಗಿದೆ. ಗ್ರಾಹಕರನ್ನು ವಿಶೇಷ ವಾಗಿ ಆಕರ್ಷಣೆ ಮಾಡುತ್ತ ಹೆಚ್ಚು ಸೌಲಭ್ಯ ಗಳನ್ನು ಖಾತೆದಾರರಿಗೆ ನೀಡಿದೆ. ಗೃಹ ಸಾಲ (Home Loan)ದ ಮೇಲೆ ಕನಿಷ್ಠ ಶೇ. 8.50ರಷ್ಟು ಬಡ್ಡಿ ಈ ಬ್ಯಾಂಕ್ ನೀಡಲಿದ್ದು ಸಿಬಿಲ್‌ ಸ್ಕೋರ್ ಮತ್ತು ಸಾಲದ ಅವಧಿಯ ಆಯ್ಕೆಗೆ ಅನುಗುಣವಾಗಿ ನಿಮಗೆ ಸಾಲ ಸಿಗಲಿದೆ.

Image Source: Deccan Herald

advertisement

Leave A Reply

Your email address will not be published.