Karnataka Times
Trending Stories, Viral News, Gossips & Everything in Kannada

Maruti Wagon R: 34Km ಮೈಲೇಜ್ ಕೊಡುವ ಈ ಬಜೆಟ್ ಕಾರು ಈಗ ಭಾರತದ ನಂಬರ್ 1! ಮುಗಿಬಿದ್ದು ಖರೀದಿಸುತ್ತಿರುವ ಜನ

advertisement

ಭಾರತೀಯ ಮಾರುಕಟ್ಟೆಯಲ್ಲಿ ಈಗ ಕಾರುಗಳಿಗೆ ಅಧಿಕ ಬೇಡಿಕೆ ಇದೆ ಎಂದು ಹೇಳಬಹುದು. ಹಾಗಾಗಿ ಕಾರು ತಯಾರಿಕಾ ಕಂಪೆನಿಗಳ ನಡುವೆ ಕಾರು ಉತ್ಪಾದನೆಗೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾರು ಮಾರಾಟ ಮಾಡುವ ಪ್ರತಿಷ್ಠಿತ ಕಂಪೆನಿಗಳ ಸಾಲನ್ನು ನೋಡುವುದಾದರೆ ಮಾರುತಿ ಕಂಪೆನಿ ಮುಂಚುಣಿ ಸ್ಥಾನದಲ್ಲಿ ಇರುವುದು ನಮಗೆ ತಿಳಿಯಲಿದೆ. ಮಾರುತಿ ಸುಜುಕಿ (Maruti Suzuki) ಕಂಪೆನಿಯ ಕಾರು ಟಾಪ್ 10 ರಲ್ಲಿ ಮೊದಲ ಸ್ಥಾನ ಪಡೆದಿದೆ.

ಯಾವುದು ಟಾಪ್ ಒನ್ ಕಾರು?

ಟಾಪ್ ಒನ್ ಕಾರನ್ನು ನೋಡುವುದಾದರೆ ಮಾರುತಿ ಕಂಪೆನಿಯ ವ್ಯಾಗನ್ ಆರ್ ಕಾರ್ (Maruti Wagon R) ಗೆ ಬಲು ಬೇಡಿಕೆ ಬಂದಿರುವುದನ್ನು ಕಾಣಬಹುದು. ಇದುವರೆಗೆ 1,61,378ಯುನಿಟ್ ಗಳು ಮಾರಾಟವಾಗಿದ್ದರೆ ಅದರಲ್ಲಿ ವ್ಯಾಗನ್ ಆರ್ ಕಾರು 19,412ಕಾರನ್ನು ಮಾರಾಟ ಮಾಡಿದೆ. ಈ ಮೂಲಕ ಟಾಪ್ 10 ಸಾಲಿನಲ್ಲಿ ವ್ಯಾಗನ್ ಆರ್ ಕಾರು 12.3% ನಷ್ಟು ಮಾರಾಟಮಾಡಿ ಸಾಧನೆ ಮಾಡಿದೆ.

Image Source: Pune News

Maruti Wagon R ಕಾರಿನ ವಿಶೇಷತೆ ಏನು?

advertisement

  • ಈ ಒಂದು ಕಾರಿನಲ್ಲಿ ಆ್ಯಂಡ್ರಾಯ್ಡ್, ಆ್ಯಪಲ್ ಮತ್ತು ಆಟೋ ಕನೆಕ್ಟಿವಿಟಿ ಇದ್ದು ಸುರಕ್ಷತೆ ದೃಷ್ಟಿಯಿಂದಲು ಅಧಿಕ ಮಾನ್ಯತೆ ಪಡೆದಿದೆ.
  • ಸೆಂಟ್ರಲ್ ಲಾಕಿಂಗ್ , ಮ್ಯಾನುವಲ್ ಎಸಿ, ಟಚ್ ಸ್ಕ್ರೀನ್, ಟ್ಯಾಕೋ ಮೀಟರ್, ವಿಂಗ್ ಮಿರರ್ ಅನ್ನು ಹೊಂದಿದ್ದು ಪ್ರಯಾಣ ಮಾಡಲು ಹಿತಕರ ಅನುಭವ ನೀಡಲಿದೆ.
  • ಟರ್ನ್ ಇಂಡಿಕೇಟರ್ , ಫ್ರಂಟ್ ಫಾಗ್ ಲ್ಯಾಂಪ್ ಹಾಗೂ ನಾಲ್ಕು ಸ್ಪೀಕರ್ ಇದರಲ್ಲಿ ಇರಲಿದೆ.
  • ಡ್ಯುಯೆಲ್ ಏರ್ ಬ್ಯಾಗ್, ರಿಯರ್ ಪಾರ್ಕಿಂಗ್ ಸೆನ್ಸರ್ ಇದೆ.
  • ಸ್ಪೀಡ್ ಅಲರ್ಟರ್ ಹಾಗೂ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ.
  • ಎಲೆಕ್ಟ್ರಾನಿಕ್ ಫೋಲ್ಡಿಂಗ್ ವಿಂಗ್ ಮಿರರ್, ರಿಯರ್ ವೈಪರ್ ವಾಶರ್ ಹಾಗೂ ಡಿಫೋಗರ್ ಹೊಂದಿದೆ.
  • ನೋಡಲು ಕೂಡ ಈ ಕಾರು ಬಹಳ ಆಕರ್ಷಿತವಾಗಿದ್ದು ಸ್ಟಾಂಡರ್ಡ್ ನೋಟವನ್ನು ಹೊಂದಿದೆ

ಇಂಜಿನ್ ಕಾರ್ಯದಕ್ಷತೆ

  • 1.0 ಮತ್ತು 1.2ಲೀ. ಕೇ ಸೀರಿಸ್ ಪೆಟ್ರೋಲ್ ಇಂಜಿನ್ ನ ಆಯ್ಕೆ ಇಲ್ಲಿ ಇರಲಿದೆ.
  • 1ಲೀಟರ್ ಇಂಜಿನ್ ನಲ್ಲಿ 66BHP ಹಾಗೂ 89NM ಟಾರ್ಕ್ ಅನ್ನು ಉತ್ಪಾದನೆ ಮಾಡಲಿದ್ದು ಹೆಚ್ಚಿನ ದೂರದ ವರೆಗೆ ಪ್ರಯಾಣ ಮಾಡಬಹುದು.
  • CNG ಆಯ್ಕೆ ಕೂಡ ಇರಲಿದ್ದು 34km ಮೈಲೇಜ್ ನೀಡಲಿದೆ.
  • 1.2ಲೀಟರ್ ಇಂಜಿನ್ ನಲ್ಲಿ 88BHP ಹಾಗೂ 113NM ಪೀಕ್ ಟಾರ್ಕ್ ಅನ್ನು ಉತ್ಪಾದನೆ ಮಾಡಲಿದೆ. ಇದರಲ್ಲಿ ಆಧುನಿಕ ವೈಶಿಷ್ಟ್ಯ ಇರಲಿದ್ದು ಉತ್ತಮ ಮೈಲೇಜ್ ನೀಡುವ ಜೊತೆಗೆ ಇಂಗಾಲದ ಹೊರ ಸೂಸುವಿಕೆ ಪ್ರಮಾಣ ಕೂಡ ಕಡಿಮೆ ಮಾಡಲಿದೆ.
Image Source: Autovista

Maruti Wagon R ಬೆಲೆ ಎಷ್ಟು?

ಈ ಒಂದು ಮಾರುತಿ ವ್ಯಾಗನ್ ಆರ್ ಕಾರಿನಲ್ಲಿ ಸುಧಾರಿತ ವೈಶಿಷ್ಟ್ಯ ಹೊಂದಿರುವ ಕಾರಣ ಇದರ ಬೆಲೆಯು 5,54, 500 ರೂಪಾಯಿ ಆಗಿದೆ. ಮಾರುತಿ ಸುಜುಕಿ ವ್ಯಾಗನಾರ್ (Maruti Wagon R) ಕಾರು ಈಗಾಗಲೇ ಎರಡು ಆವೃತ್ತಿಯನ್ನು ಬಿಡುಗಡೆ ಮಾಡಿದ್ದು ಈ ಹೊಚ್ಚ ಹೊಸ ಕಾರು ಮೂರನೇ ಆವೃತ್ತಿಯಾಗಿದೆ. ವ್ಯಾಗನಾರ್ ಹ್ಯಾಚ್ ಬ್ಯಾಕ್ ನಲ್ಲಿ LXI, VXI, ZXI ಎಂಬ ಪ್ರಕಾರಗಳು ಇರುವುದನ್ನು ಕೂಡ ಕಾಣಬಹುದು.

advertisement

Leave A Reply

Your email address will not be published.