Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ದಂಡದ ಬಗ್ಗೆ ಹೊಸ ನಿರ್ಧಾರ ! ಸರ್ಕಾರದ ನಿಲುವು ಪ್ರಕಟ

advertisement

ಭಾರತ ಸರ್ಕಾರವು ಕಳೆದ ವರ್ಷದಿಂದ ಪ್ರತಿ ವಾಹನಗಳಿಗೂ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (High Security Registration Plate) ಹಾಕಿಸುವುದನ್ನು ಕಡ್ಡಾಯಗೊಳಿಸಿದೆ. ಹಲವು ಬಾರಿ ಅದರ ಗಡುವಿನ ದಿನಾಂಕವನ್ನು ಮುಂದುವರಿದರು ವಾಹನ ಮಾಲೀಕರು ತಮ್ಮ ನಿರ್ಲಕ್ಷತನದಿಂದಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸದೆ ಇರುವುದು ಸರ್ವೆಯ ಪ್ರಕಾರ ತಿಳಿದು ಬಂದಿದೆ. ಹೀಗಾಗಿ ಗಡುವಿನ ದಿನಾಂಕ ಹತ್ತಿರ ಬಂದಿರು ಕೂಡ HSRP ನಂಬರ್ ಪ್ಲೇಟ್ ಹಾಕಿಸದೆ ಇರುವ ವಾಹನ ಸವಾರರಿಗೆ ಶಿಸ್ತಿನ ನೋಟಿಸ್ (Strict Notice) ಒಂದನ್ನು ಜಾರಿಗೊಳಿಸಿದ್ದಾರೆ. ಇದರ ಅನ್ವಯ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number Plate) ಹಾಕದೆ ವಾಹನ ಚಲಾವಣೆ ಮಾಡಿದರೆ 5 ರಿಂದ 10 ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ.

ಮನೆಯಲ್ಲೇ ಕೂತು HSRP ನಂಬರ್ ಪ್ಲೇಟ್ ಪಡೆದುಕೊಳ್ಳಿ:

 

Image Source: Zee Business

 

HSRP ನಂಬರ್ ಪ್ಲೇಟ್ (HSRP Number Plate) ನಿಮ್ಮ ವಾಹನಗಳಿಗೆ ಅಳವಡಿಸಲು ಹೆಚ್ಚು ಅಲೆದಾಡುವ ಅವಶ್ಯಕತೆ ಇಲ್ಲ ಮನೆಯಲ್ಲಿ ಕುಳಿತು ನಿಮ್ಮ ಬಳಿ ಇರುವಂತ ಮೊಬೈಲ್ ಫೋನ್ ಮೂಲಕವೇ ಆರ್ಡರ್ ಮಾಡಿ ಹತ್ತಿರದ ಶೋರೂಮ್ಗಳಿಗೆ ತರಿಸಿಕೊಳ್ಳಬಹುದು ಅಥವಾ ಹೋಮ್ ಡೆಲಿವರಿಯೂ ಲಭ್ಯವಿದೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ (SIAM) ಎಂಬ ಅಧಿಕೃತ ವೆಬ್ಸೈಟ್ಗೆ (Official Website) ಭೇಟಿ ನೀಡಿ ನಿಮ್ಮ ಹಾಗೂ ವಾಹನದ ಮಾಹಿತಿಯನ್ನು ಸರಿಯಾಗಿ ನಮೂದಿಸಿ ಬಿಲ್ಲನ್ನು ಪಾವತಿ ಮಾಡಿದರೆ ಅವರು ತಿಳಿಸುವಂತಹ ದಿನಾಂಕದಲ್ಲೇ HSRP ನಂಬರ್ ಪ್ಲೇಟ್ ನಿಮ್ಮ ಮನೆಗೆ ಅಥವಾ ಹತ್ತಿರದ ಎಕ್ಸ್ ಶೋರೂಮ್ಗೆ ಬರಲಿದೆ ಅಲ್ಲಿ ಹೋಗಿ ಸುಲಭವಾಗಿ ವಾಹನಕ್ಕೆ ನಂಬರ್ ಪ್ಲೇಟನ್ನು ಅಳವಡಿಸಬಹುದು.

advertisement

42,000 ವಾಹನಕ್ಕೆ HSRP ಅಳವಡಿಕೆ:

ಡಿಸ್ಟ್ರಿಕ್ಟ್ ಟ್ರಾನ್ಸ್ಪೋರ್ಟ್ ಆಫೀಸರ್ (District Transport Officer) ಆವದೇಶ್ ಚೌದರಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಕಳೆದ ಮೂರು ತಿಂಗಳಿನಲ್ಲಿ ಈವರೆಗೂ 42,000ಕ್ಕೂ ಹೆಚ್ಚಿನ ವಾಹನಗಳಿಗೆ HSRP ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಲಾಗಿದ್ದು, 80,000 ಜನರು ಈಗಾಗಲೇ ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಿ HSRP ನಂಬರ್ ಪ್ಲೇಟಿನ ನಿರೀಕ್ಷೆಯಲ್ಲಿದ್ದಾರೆ.

HSRP ಹಾಕಿಸದೆ ಹೋದರೆ 10,000 ದಂಡ:

 

Image Source: The Hindu

 

HSRP ನಂಬರ್ ಪ್ಲೇಟ್ (HSRP Number Plate) ಕುರಿತು ಅಧಿಕೃತ ನೋಟಿಸ್ ನೀಡಿರುವಂತ ಡಿಸ್ಟ್ರಿಕ್ಟ್ ಟ್ರಾನ್ಸ್ಪೋರ್ಟ್ ಆಫಿಸರ್ ಆವದೇಶ್ ಚೌದರಿಯವರು “ಎಲ್ಲ ರೀತಿಯ ವಾಹನಗಳಿಗೂ ಜೂನ್ 30, 2024ರ ಒಳಗೆ HSRP ನಂಬರ್ ಪ್ಲೇಟ್ ಅನ್ನು ಹಾಕಿಸದೆ ಹೋದರೆ, ಕಟ್ಟುನಿಟ್ಟಾದ ಕ್ರಮ ಕೈ ತೆಗೆದುಕೊಳ್ಳಲಾಗುತ್ತದೆ.

ಜೂನ್ 30ರ ಬಳಿಕ HSRP ನಂಬರ್ ಪ್ಲೇಟ್ (HSRP Number Plate) ಇಲ್ಲದ ವಾಹನಗಳು ಕಂಡುಬಂದಲ್ಲಿ ಮೊದಲ ಬಾರಿಗೆ 5000 ದಂಡ ಹಾಕಲಾಗುತ್ತದೆ. ಇದಾದ ಬಳಿಕವೂ ವಾಹನ ಮಾಲೀಕ ತನ್ನ ಗಾಡಿಗೆ HSRP ಅಳವಡಿಸದೆ ಹೋದಲ್ಲಿ ಬರೋಬ್ಬರಿ 10,000 ದಂಡವನ್ನು ಹಾಕಲಾಗುತ್ತದೆ” ಎಂಬ ಅಧಿಸೂಚನೆಯನ್ನು ತಿಳಿಸಿದ್ದಾರೆ.

advertisement

Leave A Reply

Your email address will not be published.