Karnataka Times
Trending Stories, Viral News, Gossips & Everything in Kannada

Prashanth Neel: ಪ್ರಶಾಂತ್ ನೀಲ್ ಸಂಭಾವನೆ ರಾಜಮೌಳಿ ಗಿಂತ ಹೆಚ್ಚಿಗಿದೆಯಾ? ನಂಬರ್ ಒನ್ ಡೈರೆಕ್ಟರ್ ಇವರೇ!

advertisement

ಯಶ್ ನಟನೆಯ, ಹೊಂಬಾಳೆ ಫಿಲಂಸ್ ನಿರ್ಮಾಣದ ಕೆ.ಜಿ.ಎಫ್. ಸಿನಿಮಾ ದಾಖಲೆ ನಿರ್ಮಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಕೆಜಿಎಫ್‌ ಸಿನಿಮಾ ನಂತರ ನಿರ್ದೇಶಕ ಪ್ರಶಾಂತ್ ನೀಲ್‌ಗೆ ಈಗ ದೇಶಾದ್ಯಂತ ಬೇಡಿಕೆ ಹೆಚ್ಚಾಗಿದೆ. ಅದೇ ರೀತಿ ಇಂದು ಸೌತ್ ಇಂಡಿಯನ್ ಸಿನಿಮಾದ ಫೇಮಸ್ ನಿರ್ದೇಶಕರು ಯಾರು ಎಂದು ಕೇಳಿದಾಗ ತಟ್ಟನೆ ಇವರುಗಳ ಹೆಸರು ಬರುತ್ತದೆ. ಹೌದು ಮೊದಲ ಸಾಲಿನಲ್ಲಿ ಬರುವ ಹೆಸರು ರಾಜಮೌಳಿ, ಕನ್ನಡದ ಪ್ರಶಾಂತ್ ನೀಲ್, ಶಂಕರ್ ಇತ್ಯಾದಿ. ಅದರೆ ಇಂದು ಪ್ರಶಾಂತ್ ನೀಲ್ (Prashanth Neel) ಅವರ ಸಂಭಾವನೆ ಇತರ ನಿರ್ದೇಶಕರಿಗಿಂತ ಹೆಚ್ಚಾಗಿದೆ ಎನ್ನಲಾಗಿದೆ. ಹಾಗಿದ್ರೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ.

ರಾಜಮೌಳಿ ಸಂಭಾವನೆ ಎಷ್ಟು?

ನಟರಂತೆ ಇಂದು ನಿರ್ದೇಶಕರು ಕೂಡ ಹೆಚ್ಚಿನ ಜನಪ್ರಿಯತೆ ಹೊಂದಿದ್ದಾರೆ. ಈಗಾಗಲೇ ಸ್ಟಾರ್ ಡೈರೆಕ್ಟರ್ ರಾಜಮೌಳಿ (Rajamouli) ಪ್ಯಾನ್ ಇಂಡಿಯಾ ಸಿನಿಮಾ ಸಕ್ಸಸ್ ಆಗಿತ್ತು. ಹೌದು ಆರ್‌ಆರ್‌ಆರ್ ಸಿನಿಮಾ ಬಹಳಷ್ಟು ‌ಕ್ರೇಜ್ ಹುಟ್ಟಿಸಿತ್ತು. ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮೂಲಕ ಮೆಚ್ಚುಗೆ ಪಡೆದಿದೆ. ಈ ಚಿತ್ರಕ್ಕೆ ರಾಜಮೌಳಿ ಸಂಭಾವನೆ ಗಿಂತಲೂ ಹೆಚ್ಚಿನ ಲಾಭ ಪಡೆದಿದ್ದಾರೆ ಎನ್ನಲಾಗಿದೆ. ಹೌದು ವಿವಿಧ ಮೂಲದ ಪ್ರಕಾರ ರಾಜಮೌಳಿ ಅವರ ಸಂಭಾವನೆ 80 ರಿಂದ 100 ಕೋಟಿ ವರೆಗೆ ಇರಲಿದೆ ಎನ್ನಲಾಗಿದೆ.

advertisement

ಪ್ರಶಾಂತ್ ನೀಲ್ ಸಂಭಾವನೆ

ಅದೇ ರೀತಿ ಕೆಜಿಐಎಫ್ ಮೂಲಕ ಪ್ರಸಿದ್ದಿ ಪಡೆದವರು ನಿರ್ದೇಶಕ ಪ್ರಶಾಂತ್ ನೀಲ್, KGF 1 KGF2 ಹೆಚ್ಚು ಪ್ರಸಿದ್ಧಿ ಯನ್ನು ಪಡೆದು ಕೊಳ್ಳುವ ಮೂಲಕ ಈ ಚಿತ್ರದ ಪಾತ್ರಧಾರಿ ಗಳಿಗೂ ಬೇಡಿಕೆ ಹೆಚ್ಚಾಗಿದೆ. ಪ್ರಶಾಂತ್ ನೀಲ್ ಕೂಡ ಇಂದು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು ಪ್ರತಿ ಚಿತ್ರಕ್ಕೆ 40 ರಿಂದ 50 ಕೋಟಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅದೇ ರೀತಿ ಚಿತ್ರರಂಗದ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಪ್ರಶಾಂತ್ ನೀಲ್​ ಅವರು ಸಲಾರ್​ ಚಿತ್ರಕ್ಕೆ ಸುಮಾರು 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಇತರ ನಿರ್ದೇಶಕ ರಿಗಿಂತ ಬೇಡಿಕೆಯೊಂದಿಗೆ ಸಂಭಾವನೆ ಕೂಡ ಹೆಚ್ಚಾಗಿದೆ.

advertisement

Leave A Reply

Your email address will not be published.