Karnataka Times
Trending Stories, Viral News, Gossips & Everything in Kannada

Ration Card: ಪಡಿತರದಾರರು ಈ ಕೆಲಸ ಮಾಡದಿದ್ದರೆ ನಿಮ್ಮ BPL ಕಾರ್ಡು ರದ್ದಾಗುವುದು ಪಕ್ಕಾ!

advertisement

ಇಂದು ಪ್ರತಿಯೊಬ್ಬರಿಗೂ ರೇಷನ್ ಕಾರ್ಡ್ (Ration Card) ಮುಖ್ಯ ದಾಖಲೆ ಹೊಂದಿರುವ ಕಾರ್ಡ್ ಆಗಿದೆ.ಈಗಾಗಲೇ ಈ ಕಾರ್ಡ್ ಅನ್ನು ವಿಂಗಡಣೆ ಮಾಡಿ ಮೂರು ವಿಧಗಳಾಗಿ ಮಾಡಲಾಗಿದೆ. ಬಡತನ ರೇಖೆಗಿಂತ ಕೇಳಗೆ ಇರುವವರಿಗೆ ಅಂತ್ಯೊದಯ, ಬಿಪಿಎಲ್ ಕಾರ್ಡ್ (BPL Card) ಜಾರಿಗೆ ತಂದಿದ್ದು ಬಡತನ ರೇಖೆಗಿಂತ ಮೇಲೆ ಇದ್ದವರಿಗೆ ಎಪಿಎಲ್ ಕಾರ್ಡ್ (APL Card) ಜಾರಿಗೆ ತಂದಿದೆ. ಈಗಾಗಲೇ ಈ ಕಾರ್ಡ್ ಗೃಹಲಕ್ಷ್ಮಿ (Gruha Laksmi), ಅನ್ನಭಾಗ್ಯ (Anna Bhagya) ಇತ್ಯಾದಿ ಯೋಜನೆಗೆ ಬಹಳ ಮುಖ್ಯವಾಗಿದ್ದು ಈ ಕಾರ್ಡ್ ಸರಿಯಾದ ದಾಖಲೆ ಹೊಂದಿದ್ದರೆ ಮಾತ್ರ ನೀವು ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆಯಲು ಅರ್ಹ ರಾಗುತ್ತೀರಿ‌.ಇದೀಗ ಈ ಬಗ್ಗೆ ಆಹಾರ ಇಲಾಖೆಯು ಮುಖ್ಯ ಮಾಹಿತಿಯೊಂದನ್ನು ನೀಡಿದೆ.

Ration Card ರದ್ದು:

 

 

ಈಗಾಗಲೇ ಕೆಲವು ಜನರು ಬಿಪಿಎಲ್ (BPL), ಅಂತ್ಯೊದಯ ಕಾರ್ಡ್ (Antyodaya Card) ಹೊಂದಿದ್ದರೂ ಸಹ ಆಹಾರ ಧಾನ್ಯಗಳನ್ನು ಪಡೆಯದೇ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಕೇವಲ ಸರಕಾರದ ಸೌಲಭ್ಯ ಪಡೆಯುದಕ್ಕಾಗಿ ಈ ಕಾರ್ಡ್ ಬಳಕೆ ಮಾಡಿದ್ರೆ ಪಡಿತರ ಕಾರ್ಡ್ (Ration Card) ಅನ್ನು ನಿಷ್ಕ್ರಿಯ ಮಾಡಲಾಗುತ್ತದೆ. ಇದೀಗ ಪಡಿತರದಾರರಿಗೆ ಆಹಾರ ಇಲಾಖೆಯು ಬಿಗ್‌ ಶಾಕ್‌ ನೀಡಿದ್ದು ಈಗಾಗಲೇ ಒಟ್ಟು 3.26 ಲಕ್ಷ ಕಾರ್ಡ್ ಗಳನ್ನು ರದ್ದು ಮಾಡುವ ಬಗ್ಗೆ ಮಾಹಿತಿ ನೀಡಿದೆ.

advertisement

ಇಂತವರ ಕಾರ್ಡ್ ರದ್ದು:

ಆರು ತಿಂಗಳಿನಿಂದ ರೇಷನ್‌ ಪಡೆಯದ ಬಿಪಿಎಲ್‌ ಕಾರ್ಡ್‌ (BPL Card) ಗಳನ್ನು ರದ್ದು ಮಾಡಲು‌ ಚಿಂತನೆ ನಡೆಸಿದ್ದು ಈ ಬಗ್ಗೆ ಪರಿಶೀಲನೆ ಯನ್ನು‌ಕೂಡ ಆಹಾರ ಇಲಾಖೆ ನಡೆಸಿದೆ. ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಪಿಂಚಣಿ ಹಣ ಪಡೆಯಲು, ಸರಕಾರದ ಹಲವು ಸೌಕರ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಡ್ ಅನ್ನು ಬಳಕೆ ಮಾಡಿಕೊಂಡಿದ್ದಾರೆ.ಹೀಗಾಗಿ ರದ್ದು ಮಾಡುವ ಬಗ್ಗೆ ಕ್ರಮ‌ಕೈಗೊಳ್ಳಲಾಗಿದೆ.

Fake Ration Card ಪತ್ತೆ:

ಪಡಿತರ ಪಡೆಯದ ಕಾರ್ಡ್ ದಾರರಿಗೆ ಯಾವುದೇ ನೋಟಿಸ್ ನೀಡದೆ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ. ಇದರಿಂದ ಪಡಿತರ ಚೀಟಿ ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯ ಗಳನ್ನು ಪಡೆಯಲು ಕೂಡ ನೀವು ಅನರ್ಹರಾಗುತ್ತೀರಿ.ಅಷ್ಟೆ ಅಲ್ಲದೆ ಇಂದು ನಕಲಿ‌ರೇಷನ್ ಕಾರ್ಡ್ ಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದ್ದು ಯಾವುದು ನಕಲಿ ರೇಷನ್ ಕಾರ್ಡ್ ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ರೇಷನ್ ಕಾರ್ಡ್ ಮಾಹಿತಿಯನ್ನು‌ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವುದು ಸಹ ಕಡ್ಡಾಯ ವಾಗಿದೆ.

advertisement

Leave A Reply

Your email address will not be published.