Karnataka Times
Trending Stories, Viral News, Gossips & Everything in Kannada

UPI ID: ಗೂಗಲ್ ಪೇ, ಫೋನ್ ಪೇ ಬಳಕೆದಾರರಿಗೆ ಬರಲಿದೆ ಇನ್ಮುಂದೆ ಈ ರೂಲ್ಸ್, ಇಂತವರ UPI ಐಡಿ ರದ್ದು!

advertisement

ಈ ವರ್ಷದ ಅಂತ್ಯದಲ್ಲಿ ನಾವಿದ್ದೇವೆ‌‌‌. ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಪಥದತ್ತ ಸಾಗುತ್ತಿರುವ ಭಾರತ ಇನ್ನು ಮುಂದಿನ ವರ್ಷ ಮತ್ತಷ್ಟು ಹೊಸತನದೊಂದಿಗೆ ಪ್ರಗತಿ ಕಾಣಲಿದೆ. ಸಾಮಾಜಿಕ (Social), ಶೈಕ್ಷಣಿಕ (Educational), ಸಾಂಸ್ಕೃತಿಕ (Cultural), ಕ್ರೀಡೆ (Sports), ವಿಜ್ಞಾನ (Science) ಇನ್ನೂ ಅನೇಕ ರಂಗದಲ್ಲಿ ಪ್ರಗತಿ ಹೊಂದುವ ಕಾರಣಕ್ಕಾಗಿ ಈಗಾಗಲೇ ಅನೇಕ ಸಿದ್ಧತೆ ಸಹ ಆಗುತ್ತಿದೆ. ಅದೇ ರೀತಿ ಈ ಬಾರಿ ಡಿಜಿಟಲ್ ಇಂಡಿಯಾ ಭಾಗವಾಗಿ ಕ್ಯಾಶ್ ಲೆಸ್ ಸಿಸ್ಟಂ ಅಳವಡಿಕೆಯ ಯುಪಿಐ ಮಾನ್ಯತೆ ಮತ್ತ ಷ್ಟು ಹೆಚ್ಚಾಗಲಿದೆ.

ಇಂದು ಗೂಗಲ್ ಪೇ (Google Pay), ಫೋನ್ ಪೇ (Phone Pe), ಪೇಟಿಎಂ (Paytm) ಸೇರಿದಂತೆ ಅನೇಕ ಆ್ಯಪ್ ಮೂಲಕ ಹಣ ವರ್ಗಾಯಿಸುವ ಪ್ರಮಾಣ ಈ ಹಿಂದಿಗಿಂತಲೂ ಅಧಿಕವಾಗುತ್ತಿದೆ. ಹಾಗಾಗಿ ಜನವರಿಯಿಂದ UPI Payment ನಲ್ಲಿ ಕೆಲ ಅಗತ್ಯ ಅಂಶಗಳು ಬದಲಾವಣೆ ಆಗಲಿದ್ದು ಈ ಬಗ್ಗೆ ಗಮನಿಸುವುದು ಅತ್ಯವಶ್ಯಕವಾಗಿದೆ. ಒಂದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಉಪಯೋಗ ಮಾಡದ ID ಗಳನ್ನು ರದ್ದುಗೊಳಿಸುವತ್ತ ಚಿಂತಿಸಲಾಗುತ್ತಿದೆ.

ಈ ಕೆಲಸ ಮಾಡದಿದ್ದರೆ ಸಂಕಷ್ಟ:

ನೀವು UPI ID ಮಾಡಿದ್ದರೂ ಅದರಲ್ಲಿ ಯಾವುದೇ ವಿಧವಾಗಿ ಹಣ ವರ್ಗಾಯಿಸದಿದ್ದರೆ ಆಗ ಅದು ಬಳಕೆ ಆಗಿಲ್ಲ ಎಂಬ ಅರ್ಥ ನೀಡಲಿದೆ ಹಾಗಾಗಿ ಒಂದು ವರ್ಷದ ಬಳಿಕ ಅಂತಹ ID ಗಳನ್ನು ರದ್ದು ಪಡಿಸುವ ಕಾರಣ ಜನವರಿ ಬಳಿಕ ನಿಮಗೆ ಬೇಕೆಂದರೂ ಆ ಐಡಿ ನಲ್ಲಿ ನೀವು ಹಣಕಾಸಿನ ವಹಿವಾಟು ಮಾಡಲು ಸಾಧ್ಯವಿಲ್ಲ. ಡಿಸೆಂಬರ್ 31 ರೊಳಗೆ ಹಣಕಾಸಿನ ಯಾವುದೇ ವಹಿವಾಟು ನಾಡೆಯದಿದ್ದ ಪಕ್ಷದಲ್ಲಿ ಜನವರಿ 1ರಿಂದ ಈ UPI ID ಯನ್ನು ನಿಮಗೆ ಬಳಸಲು ಸಾಧ್ಯವಾಗಲಾರದು.

 

advertisement

 

ಇತ್ತೀಚಿನ ದಿನದಲ್ಲಿ ಆನ್ಲೈನ್ ಪೇಮೆಂಟ್ (Onliine Payment) ನಲ್ಲಿ ವಂಚನೆ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಸರಕಾರ ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನವನ್ನು ಸಹ ನೀಡುತ್ತಿದೆ. ನೀವು ನಗರ ಪ್ರದೇಶ ವಾಸಿಗಳಾದರೆ ಬಹುತೇಕ ಕ್ಯಾಶ್ ಲೆಸ್ ಆಗಿಯೇ ಜೀವನ ತಳ್ಳುವವರಾಗಿರುತ್ತೀರಿ. ನಿಮ್ಮ ಮೊಬೈಲ್ ನಲ್ಲಿ ಅನೇಕ ಯುಪಿಐ ಐಡಿ ರಚನೆ ಮಾಡಿ ಬಳಸದೆ ಹಾಗೇ ಇಟ್ಟರೆ ಆಗ ಕೂಡ ನಿಮಗೆ ಸಮಸ್ಯೆ ಉದ್ಭವಿಸುವ ಸಾಧ್ಯತೆ ‌ಇದೆ. UPI ಐಡಿ ಅಳಿಸಿ ಹೋಗುವ ಸಾಧ್ಯತೆ ಇದ್ದು ಈಗಲೇ ಈ ಬಗ್ಗೆ ಗಮನಿಸುವುದು ಅತ್ಯವಶ್ಯಕವಾಗಿದೆ.

ಯಾಕಾಗಿ ಈ ವ್ಯವಸ್ಥೆ:

ಹಣ ವಂಚನೆ ಪ್ರಕರಣ ಕಡಿಮೆ ಮಾಡುವ ಮುಖ್ಯ ಉದ್ದೇಶ ಇದರಲ್ಲಿ ಇರುವುದನ್ನು ನಾವು ಕಾಣಬಹುದು. ಈ ಮೂಲಕ ಏಕೀಕೃತ ಇಂಟರ್ ಫೇಸ್ ಪಾವತಿ ವಿಧಾನಕ್ಕೆ ಚಿಂತನೆ ಮಾಡಿದ್ದು ಈ ಬಗ್ಗೆ NPCI ಕೂಡ ಕೆಲ ಅಗತ್ಯ ಮಾರ್ಗ ಸೂಚಿಯನ್ನು ನೀಡಿದೆ. ಅದರ ಪ್ರಕಾರ ಎಲ್ಲ UPI Payment ಒಂದೇ ಸೂರಿನಡಿಯಲ್ಲಿ ಬರಲಿದೆ. ಅದೇ ಮಾರ್ಗಸೂಚಿಯನ್ನು UPI ಸೇವಾ ಪೂರೈಕೆದಾರರಿಗೆ ಮತ್ತು ಬ್ಯಾಂಕಿಗೆ ಈ ಬಗ್ಗೆ ಆದೇಶ ನೀಡಲಾಗಿದೆ. ಹಾಗಾಗಿ ನೀವು UPI ID ಉಳಿಸುವ ಸಲುವಾಗಿ ಡಿಸೆಂಬರ್ 31ರ ಒಳಗೆ ನಿಮ್ಮ ಪೇಮೆಂಟ್ ಆ್ಯಪ್ ಅನ್ನು ಸಕ್ರಿಯ ಗೊಳಿಸಿ.

advertisement

Leave A Reply

Your email address will not be published.