Karnataka Times
Trending Stories, Viral News, Gossips & Everything in Kannada

Kisan Vikas Patra: ಪೋಸ್ಟ್ ಆಫೀಸಿನ ಈ ಯೋಜನೆಯಲ್ಲಿ 115 ತಿಂಗಳಲ್ಲಿ ನಿಮ್ಮ ಹಣ ದುಪ್ಪಟ್ಟಾಗುತ್ತೆ, ಈ ರೀತಿಯಾಗಿ ಖಾತೆ ತೆಗೆಯಿರಿ.

advertisement

ಪ್ರತಿಯೊಬ್ಬರು ಹಣವನ್ನು ಗಳಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಉಳಿತಾಯ ಮಾಡುವುದು ಕೂಡ. ಉಳಿತಾಯ ಮಾಡುವವರಿಗಾಗಿಯೇ ಅನೇಕ ಯೋಜನೆಗಳಿವೆ. ಅಂತಹ ಯೋಜನೆಗಳ ನಂಬಲು ಅರ್ಹವಾದ ಹಾಗೂ ಯಾವುದೇ ಅಪಾಯವಿಲ್ಲದೇ ಇರುವ ಯೋಜನೆಗಳ ಪೈಕಿ ಕಿಸಾನ್ ವಿಕಾಸ್ ಪತ್ರ (Kisan Vikas Patra) ಯೋಜನೆಯಾಗಿದೆ. ಹಾಗಾದ್ರೆ ಈ ಯೋಜನೆಯಲ್ಲಿ ಉಳಿತಾಯ ಮಾಡಿದರೆ ಎಷ್ಟು ಲಾಭದಾಯಕ ಎನ್ನುವ ಪ್ರಶ್ನೆಯೂ ಸಹಜವಾಗಿ ಮೂಡುತ್ತದೆ. ಆ ಎಲ್ಲದಕ್ಕೂ ಈ ಲೇಖನದಲ್ಲಿ ಉತ್ತರವನ್ನು ಪಡೆಯಬಹುದು.

Kisan Vikas Patra Yojana:

 

 

ಕಿಸಾನ್ ವಿಕಾಸ್ ಪತ್ರ ಯೋಜನೆಯೂ ಸರ್ಕಾರಿ ಯೋಜನೆಯಾಗಿದೆ. ಕೇಂದ್ರ ಸರ್ಕಾರವು ಕಿಸಾನ್ ವಿಕಾಸ್ ಪತ್ರ (Kisan Vikas Patra) ದ ಮೇಲಿನ ಬಡ್ಡಿದರವನ್ನು ಕಳೆದ ಏಪ್ರಿಲ್ ತಿಂಗಳಿನಿಂದ 7.2 ರಿಂದ ಶೇಕಡಾ 7.5 ಕ್ಕೆ ಹೆಚ್ಚಳ ಮಾಡಿದೆ. ಈ ಯೋಜನೆಯಡಿಯಲ್ಲಿ ಹಣ ಕನಿಷ್ಠ ಹೂಡಿಕೆಯ ಮೊತ್ತ 1000 ರೂಪಾಯಿಯಾಗಿದೆ. ಈ ಯೋಜನೆಯಡಿಯಲ್ಲಿ ಜಂಟಿ ಖಾತೆ (Joint Account) ಯನ್ನು ತೆರೆಯಬಹುದು. 10 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಲಾಭವನ್ನು ಪಡೆಯಬಹುದು. ಅದಲ್ಲದೆ ಈ ಉಳಿತಾಯ ಯೋಜನೆಯಲ್ಲಿನ ಬಡ್ಡಿದರ (Interest Rate)ವನ್ನು ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸುತ್ತದೆ.

advertisement

Kisan Vikas Patra ಖಾತೆ ತೆರೆಯಲು ಹೀಗೆ ಮಾಡಿ?

  • ಮೊದಲಿಗೆ ನಿಮ್ಮ ಸಮೀಪದ ಅಂಚೆ ಕಚೇರಿ (Post Office) ಗೆ ಹೋಗಿ ಫಾರ್ಮ್ ಭರ್ತಿ ಮಾಡುವ ಮೂಲಕ ನೀವು ಖಾತೆಯನ್ನು ತೆರೆಯಬಹುದು. ಇದಲ್ಲದೆ, ಫಾರ್ಮ್ ನ್ನು ಆನ್ಲೈನ್ ನಲ್ಲಿ ಸಹ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
  • ಅರ್ಜಿ ನಮೂನೆಯಲ್ಲಿ ನಾಮಿನಿಯ ಪೂರ್ಣ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸವನ್ನು ನಮೂದಿಸಬೇಕು.
  • ಖರೀದಿಯ ಮೊತ್ತವನ್ನು ನಮೂನೆಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.
  • ಕೆವಿಪಿ ಫಾರ್ಮ್ ನ ಮೊತ್ತವನ್ನು ಚೆಕ್ ಅಥವಾ ನಗದು ಮೂಲಕ ಪಾವತಿ ಮಾಡಬೇಕು.
  • ನೀವು ಚೆಕ್ ಮೂಲಕ ಪಾವತಿಸುತ್ತಿದ್ದರೆ, ಫಾರ್ಮ್ ನಲ್ಲಿ ಚೆಕ್ ಸಂಖ್ಯೆಯ ಮಾಹಿತಿಯನ್ನು ಬರೆಯುವುದು ಕಡ್ಡಾಯವಾಗಿದೆ.
  • ಕೆವಿಪಿ ಸಿಂಗಲ್ ಅಥವಾ ಜಾಯಿಂಟ್ ‘ಎ’ ಅಥವಾ ಜಂಟಿ ‘ಬಿ’ ಸದಸ್ಯತ್ವದ ರೂಪದಲ್ಲಿ, ಯಾವ ಆಧಾರದ ಮೇಲೆ ಖರೀದಿಸಲಾಗುತ್ತಿದೆ ಎನ್ನುವುದನ್ನು ಉಲ್ಲೇಖಿಸಬೇಕು.
  • ಅದಲ್ಲದೇ, ಫಲಾನುಭವಿ ಅಪ್ರಾಪ್ತ ವಯಸ್ಕನಾಗಿದ್ದರೆ, ಅವನ ಜನ್ಮ ದಿನಾಂಕ (DOB), ಪೋಷಕರ ಹೆಸರು, ಪೋಷಕರ ಹೆಸರನ್ನು ಬರೆಯುವುದು ಮುಖ್ಯವಾಗಿದೆ.
  • ಫಾರ್ಮ್ ಸಲ್ಲಿಸಿದ ನಂತರ, ಫಲಾನುಭವಿಯ ಹೆಸರು, ಮುಕ್ತಾಯ ದಿನಾಂಕ ಮತ್ತು ಮುಕ್ತಾಯದ ಮೊತ್ತದೊಂದಿಗೆ ಕಿಸಾನ್ ವಿಕಾಸ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಆದಾಯ?

ಕಿಸಾನ್ ವಿಕಾಸ್ ಪತ್ರ (Kisan Vikas Patra) ಐದು ತಿಂಗಳು ಕಡಿಮೆ ಮಾಡಿದ್ದು, 115 ತಿಂಗಳಲ್ಲಿ ನಿಮ್ಮ ಹಣವು ದ್ವಿಗುಣಗೊಳ್ಳುತ್ತದೆ. ಇಲ್ಲಿ ಹಣ ಹೂಡಿಕೆಯು 115 ತಿಂಗಳುಗಳು ಅಥವಾ 9 ವರ್ಷಗಳು ಮತ್ತು 7 ತಿಂಗಳುಗಳಾಗಿರುವ ಕಾರಣ ಯಾರಾದರೂ 4 ಲಕ್ಷ ಹೂಡಿಕೆ ಮಾಡಿದರೆ, ಅವರಿಗೆ 115 ತಿಂಗಳಲ್ಲಿ 8 ಲಕ್ಷ ಹಣವನ್ನುವನ್ನು ಪಡೆಯಬಹುದಾಗಿದೆ. ಅದಲ್ಲದೇ ಈ ಯೋಜನೆಯಲ್ಲಿ 5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ಅವಧಿಯ ವೇಳೆಯಲ್ಲಿ 10 ಲಕ್ಷ ಪಡೆಯಬಹುದಾಗಿದೆ.

advertisement

Leave A Reply

Your email address will not be published.