Karnataka Times
Trending Stories, Viral News, Gossips & Everything in Kannada

WhatsApp: ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ನೋಡಬೇಕೆ? ಈ ಟ್ರಿಕ್ಸ್ ಫಾಲೋ ಮಾಡಿ

advertisement

  1. ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಇಂದು ವಾಟ್ಸ್ ಆ್ಯಪ್ ದಿನೇ ದಿನೇ ಹೆಚ್ಚು ಫೀಚರ್ಸ್ ಗಳನ್ನು ನೀಡುತ್ತಲೆ ಬಂದಿದ್ದು ಗ್ರಾಹಕರನ್ನು ಕೂಡ ಸೆಳೆಯುತ್ತಿದೆ, ಅದೇ ರೀತಿ ಬಳಕೆದಾರರ ಸಂಖ್ಯೆಯು ಹೆಚ್ಚಾಗಿದೆ.

ಡಿಲೀಟ್ ಆದ ಸಂದೇಶ ಓದಿ:

 

 

ಇಂದು ನಾವು ಹೆಚ್ಚಾಗಿ ಮೇಸೆಜ್ ಕಳುಹಿಸ ಬೇಕಿದ್ರೆ ವಾಟ್ಸ್ ಆ್ಯಪ್ (WhatsApp) ಬಳಕೆ ಮಾಡುತ್ತೇವೆ. ಆದರೆ ಕೆಲವೊಮ್ಮೆ ಯಾವುದೇ ಗ್ರೂಪಿಗೆ (Group) ಮಿಸ್ ಆಗಿ ಸಂದೇಶ ಹೊದ್ರೆ, ಅಥವಾ ತಪ್ಪಾಗಿ ಮೆಸೇಜ್ ಫಾರ್ವರ್ಡ್ ಆಗಿದ್ದರೆ ಆ ಮೆಸೇಜನ್ನು ಯಾರು ನೋಡದ ರೀತಿಯಲ್ಲಿ ಡಿಲೀಟ್ ಮಾಡಲು ಸಹ ಅವಕಾಶ ಇದೆ. ಅದೇ ಡಿಲೀಟ್ ಫಾರ್ ಎವರಿ ಒನ್ (Delete for Everyone) ಫೀಚರ್. ಆದರೆ ಈ ಡಿಲೀಟ್ ಆದ ಮೆಸೇಜನ್ನು ಓದುವ ಕುತೂಹಲವಿದ್ದರೆ ಅದನ್ನು ಓದುವ ಟ್ರಿಕ್ಸ್ ಕೂಡ ಇದೆ.

advertisement

ಹೀಗೆ ಮಾಡಿ:

ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಿಂದ WhatsApp Removed ಅಪ್ಲಿಕೇಶನ್‌ ಅನ್ನು ಡೌನ್ ಲೋಡ್ ಮಾಡಿ, ಇನ್ನು ವಾಟ್ಸಾಪ್ ಡಿಲೀಟ್ ಮೆಸೇಜ್ (WhatsApp Delete Message) ಎಂದು ಟೈಪ್ ಮಾಡಿದಾಗ
ಈ ಆ್ಯಪ್ ಓಪನ್ ಆಗುತ್ತದೆ.ಇದನ್ನು ಡೌನ್ ಲೋಡ್ ಮಾಡಿ, ತದನಂತರ, ಅಲ್ಲಿ ಬೇಕಿರುವ ಅನುಮತಿಗಳನ್ನು ನೀಡಿ ಈ ಅಪ್ಲಿಕೇಶನ್ ಸಹಾಯದಿಂದ, ಡಿಲೀಟ್ ಆದ ಸಂದೇಶಗಳನ್ನು ಹಿಂಪಡೆಯಬಹುದು.

ಇದಲ್ಲದೆ ವಾಟ್ಸ್ಆ್ಯಪ್ನಲ್ಲಿ ಡಿಲೀಟ್ ಆದ ಸಂದೇಶ (Message) ನೋಡಲು ನೋಟಿಫಿಕೇಶನ್ ಹಿಸ್ಟರಿ ಎಂಬ ಆ್ಯಪ್ ಕೂಡ ಬಳಸಬಹುದಾಗಿದ್ದು . ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಈ ಆ್ಯಪ್ ಮೂಲಕ ನೀವು ಅಪ್ಲಿಕೇಶನ್ ತೆರೆದರೆ, ನಿಮ್ಮ ಸ್ಮಾರ್ಟ್‌ಫೋನಿಗೆ ಬಂದತಹ ಎಲ್ಲಾ ನೋಟಿಫಿಕೇಶನ್‌ಗಳು,ಸಂದೇಶಗಳು ಇಲ್ಲಿ‌ ಇರುತ್ತವೆ.

ಹೊಸ ಫೀಚರ್ಸ್:

ಇಂದು ವಾಟ್ಸ್ ಆ್ಯಪ್ ಹೊಸದಾದ ಪೀಚರ್ಸ್ (WhatsApp New Feature) ಅನ್ನು ನೀಡುತ್ತಲೆ ಬಂದಿದ್ದು ಇಂದು ನೀವು ಸ್ಟಿಕ್ಕರ್‌ (Sticker) ಗಳ ಮೂಲಕ ತೋರಿಸಲು ಅವತಾರ್ ಫೀಚರ್ (Avatar Feature) ಲಭ್ಯವಿದೆ ಅದೇ ರೀತಿ ವಾಟ್ಸ್ ಆ್ಯಪ್ ಛಾನೆಲ್ ಗಳು (WhatsApp Channels) ಲಭ್ಯವಿದ್ದು ಪ್ರಸಿಧ್ಧ ವ್ಯಕ್ತಿಗಳೊಂದಿಗೆ ನೀವು ಸಂಪರ್ಕ ಮಾಡಬಹುದು.

advertisement

Leave A Reply

Your email address will not be published.