Karnataka Times
Trending Stories, Viral News, Gossips & Everything in Kannada

TMT Steel Bar: ಹೊಸ ಮನೆ ಕಟ್ಟುವವರಿಗೆ ಕಹಿಸುದ್ದಿ, ಟಿಎಂಟಿ ಸ್ಟೀಲ್ ಬಾರ್ ಬೆಲೆ ಹೆಚ್ಚಳ!

advertisement

ಇತ್ತೀಚಿನ ದಿನದಲ್ಲಿ ಮನೆ ಕಟ್ಟುವವರು ಕಟ್ಟಡಮಾಡುವವರ ಪ್ರಮಾಣ ಅಧಿಕವಾಗುತ್ತಿದೆ. ಹಾಗಾಗಿ ಕಟ್ಟಡ ಸಾಮಾಗ್ರಿಗಳ ಬೇಡಿಕೆ ಕೂಡ ಅಧಿಕವಾಗುತ್ತಿದೆ. ಈ ಬಾರಿ ಸರಕಾರಿ ಯೋಜನೆಗಳ ಪ್ರಯೋಜನ ಸಿಗುವ ಕಾರಣ ಹಿಂದಿಗಿಂತಲೂ ಮನೆ , ಸ್ವ ಉದ್ಯಮ ಮಾಡಲು ಕಟ್ಟಡ ಕಟ್ಟುವವರ ಪ್ರಮಾಣ ಗಣನೀಯವಾಗಿ ಏರುತ್ತಲೇ ಇದೆ. ಹಾಗಾಗಿ ದೇಶಿಯ ಮಟ್ಟದಲ್ಲಿ ಕಟ್ಟಡ ಇತರ ನಿರ್ಮಾಣ ಕಾರ್ಯಗಳು ಅಬ್ಬರದಿಂದ ಸಾಗುತ್ತಿದೆ ಎಂದು ಹೇಳಬಹುದು.

ಅದೇ ರೀತಿ ಒಂದೆಡೆ ಅಗತ್ಯಕ್ಕೆ ತಕ್ಕಂತೆ ಮರಳು ಲಭ್ಯವಿಲ್ಲದೆ ಸಮಸ್ಯೆ ಆಗುತ್ತಿದ್ದರೆ ಇನ್ನೊಂದೆಡೆ M Sand ಬೇಡಿಕೆ ಪ್ರಮಾಣ ಕೂಡ ಅಧಿಕವಾಗುತ್ತಿದೆ. ಅದೇ ರೀತಿ ಕಟ್ಟಡ ಎಲ್ಲ ಸಾಮಾಗ್ರಿಗಳು ಕ್ಲಪ್ತಕಾಲಕ್ಕೆ ಲಭ್ಯವಿದ್ದರೂ ಕೂಡ ಕಾರ್ಮಿಕರು ಹಬ್ಬ ಹರಿದಿನ ಎಂದು ರಜೆಯಲ್ಲಿ ಹೋಗುವುದು ಸಹ ಸಮಸ್ಯೆ ಆಗುತ್ತಿತ್ತು ಆದರೆ ಈಗ ಬಹುತೇಕ ಹಬ್ಬಗಳು ಮುಗಿದ ಹಿನ್ನೆಲೆಯಲ್ಲಿ ಕಾರ್ಮಿಕರೆಲ್ಲರೂ ವಾಪಾಸ್ಸಾಗುತ್ತಿದ್ದಾರೆ.

ಹೆಚ್ಚಿದ ಬೇಡಿಕೆ: 

 

 

advertisement

ಈ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯದ ಚಟುವಟಿಕೆಗಳೆಲ್ಲ ಮತ್ತೆ ಪುನರಾರಂಭವಾಗಿದೆ. ಹಾಗಾಗಿ ಮುಂದಿನ ಮೂರು ನಾಲ್ಕು ತಿಂಗಳಲ್ಲಿ TMT Steel Bar ಗಳ ಬೇಡಿಕೆ ಕೂಡ ಹೆಚ್ಚಾಗಲಿದೆ. ಸ್ಟೀಲ್ ಬೇಡಿಕೆ ಗಣನೀಯವಾಗಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಅಷ್ಟೇ ಮಟ್ಟದಲ್ಲಿ ಪೂರೈಕೆ ಮಟ್ಟ ಹೆಚ್ಚಿಸುವತ್ತ ಚಿಂತನೆ ನಡೆಸಿರುವುದಾಗಿ Tata Steel Limited ನ ಉತ್ಪಾದನಾ ವಿಭಾಗದ ಉಪಾಧ್ಯಕ್ಷರಾದ ಆಶಿಶ್ ಅನುಪಮ್ ಅವರು ಹೇಳಿದ್ದಾರೆ.

ಈಗಿನ ಬೆಲೆ ಹೇಗಿದೆ?

TMT ಬಾರ್ ನ ಬೆಲೆಯು ಸೆಪ್ಟೆಂಬರ್ ನಲ್ಲಿ ಒಂದು ಟನ್ ಗೆ ಬೆಲೆಯು 56,700, ಇದೇ ಪ್ರಮಾಣವು ನವೆಂಬರ್ ನಲ್ಲಿ ಒಂದು ಟನ್ ಗೆ 55, 900 ಆಗಿದೆ ಹಾಗಾಗಿ ಬೆಲೆ ನವೆಂಬರ್ ತಿಂಗಳಿನಲ್ಲಿ ಕಡಿಮೆ ಆಗಿದ್ದನ್ನು ಕಾಣಬಹುದು. ಇಂಡಕ್ಷನ್ ಫೆರ್ನೇಸಸ್ ಮೂಲಕ ಉತ್ಪಾದಿಸುವ TMT Bar ಬೆಲೆಯೂ ಒಂದು ಟನ್ ಗೆ 52 ಸಾವಿರ ಇದ್ದದ್ದು 49 ಸಾವಿರಕ್ಕೆ ನವೆಂಬರ್ ನಲ್ಲಿ ಇಳಿದಿರುವುದನ್ನು ಕಾಣಬಹುದು.

ಕಡಿಮೆ ಬಿಸಿಲಿನಿಂದ ಅನುಕೂಲ:

ಹೆಚ್ಚು ಬಿಸಿಲ ಇಲ್ಲದೇ ಇರುವುದರಿಂದ ಹಾಗೂ ಮಳೆ ಅತೀ ಕಡಿಮೆ ಇರುವ ಕಾರಣ ಕಟ್ಟಡ ನಿರ್ಮಾಣ ಮಾಡಲು ಬಹಳ ಅನುಕೂಲ ಆಗಲಿದೆ‌. ಈಗ ಸ್ಟೀಲ್ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಟಿಎಂಟಿ ಸ್ಟೀಲ್ ಬಾರ್ ಬೆಲೆ ಹೆಚ್ಚಾಗಲಿದೆಯೇ ಎಂಬ ಗೊಂದಲ ನಿರ್ಮಾಣ ಆಗುತ್ತಿದೆ. ಕಚ್ಚಾವಸ್ತುಗಳ ಪೂರೈಕೆ ಮತ್ತು ಬೆಲೆ ಮೇಲೆ ಬೆಲೆ ಏರಿಳಿತ ಆಗಲಿದೆ. ಈ ಬಗ್ಗೆ ಈಗಲೇ ಅಧಿಕೃತ ಮಾಹಿತಿ ನೀಡಲಾರೆವು ಎಂದು ಹೇಳಿದ್ದಾರೆ.

advertisement

Leave A Reply

Your email address will not be published.