Karnataka Times
Trending Stories, Viral News, Gossips & Everything in Kannada

Airtel Broadband: ಕೇವಲ 399 ರೂಪಾಯಿಗಳಲ್ಲಿ ಪಡೆಯಿರಿ 3300GB ಡೇಟಾ, ಇಂದೇ ಏರ್ ಟೆಲ್ ನ ಈ ಬ್ರಾಡ್ ಬಾಂಡ್ ಪ್ಲಾನ್ ಅನ್ನು ಪಡೆದುಕೊಳ್ಳಿ!

advertisement

ಹಲವಾರು ಜನರ ಟೆಲಿಕಾಂ ಸೆಗ್ಮೆಂಟ್ ನ ನೆಚ್ಚಿನ ಆಯ್ಕೆ ಏರ್‌ಟೆಲ್ ಆಗಿದೆ. ಈಗ ಏರ್ ಟೆಲ್ (Airtel) ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ. ಹಲವಾರು ಕಾಂಪಿಟೇಷನ್ ಗಳು ಏರ್ ಟೆಲ್ ಗೆ ಇದ್ದರೂ ತನ್ನ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಇದು ಪ್ರಸ್ತುತ ಸುಮಾರು 38 ಕೋಟಿ ಬಳಕೆದಾರರನ್ನು ಹೊಂದಿದೆ. ಕಂಪನಿಯು ತನ್ನ ಬಳಕೆದಾರರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದೆ ಮತ್ತು ಕಾಲಕಾಲಕ್ಕೆ ಪೋಸ್ಟ್‌ಪೇಯ್ಡ್, ಪ್ರಿಪೇಯ್ಡ್ ಮತ್ತು ಬ್ರಾಡ್‌ಬ್ಯಾಂಡ್ ಪ್ಲಾನ್ ಗಳಲ್ಲಿ ಹೊಸ ಪ್ಲಾನ್ ಗಳನ್ನು ನೀಡುತ್ತಿದೆ.

ಈಗ ಏರ್ ಟೆಲ್ ಕಂಪನಿಯು ತನ್ನ ಬಳಕೆದಾರರಿಗೆ ಕೇವಲ 400 ರೂಪಾಯಿಗಳ ಬೆಲೆಯೊಂದಿಗೆ ಬ್ರಾಡ್‌ಬ್ಯಾಂಡ್ (Airtel Broadband) ಯೋಜನೆಯನ್ನು ನೀಡುತ್ತಿದೆ. ಇದರಲ್ಲಿ ಇದು ಡಿ ಟಿ ಎಚ್, ಕರೆ ಮತ್ತು ಇಂಟರ್ನೆಟ್‌ಗಾಗಿ ಬಳಕೆದಾರರಿಗೆ ಬಹಳಷ್ಟು ಜಿ.ಬಿ ಡೇಟಾವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ. ಈ ಯೋಜನೆಯ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ಇಲ್ಲಿದೆ.

ತನ್ನ ಬಳಕೆದಾರರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಕಂಪನಿಯು ಈಗ 400 ರೂಪಾಯಿಗಳ ಬ್ರಾಡ್‌ಬ್ಯಾಂಡ್ ಸ್ಟ್ಯಾಂಡ್‌ಬೈ ಯೋಜನೆಯನ್ನು ಪರಿಚಯಿಸಿದೆ. ಈ ಹಿಂದೆ ಕಂಪನಿಯು ತನ್ನ ಪ್ಲಾನ್ ಗಳಲ್ಲಿ 199 ರೂಗಳ ಯೋಜನೆಯನ್ನು ಹೊಂದಿತ್ತು. ಆದರೆ ಈಗ ಇರುವ ಈ 399 ರೂಪಾಯಿಗಳ ಪ್ಲಾನ್ ಬಹಳ ಉತ್ತಮವಾಗಿದೆ ಹಾಗೂ ಎಲ್ಲಾ ತರಹದ ಜನರನ್ನು ಆಕರ್ಷಿಸಲಿದೆ. ಪ್ಲಾನ್ ಬಗೆಗಿನ ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ.

advertisement

Airtel Broadband 399 ಪ್ಲಾನ್ ವಿವರಗಳು:

ನಿಮ್ಮ ಬಜೆಟ್ ಹೆಚ್ಚಿಲ್ಲದಿದ್ದರೆ ಕೇವಲ 399 ರೂಪಾಯಿಗಳ ಮಾಸಿಕ ಶುಲ್ಕದೊಂದಿಗೆ ನೀವು ಈ ಯೋಜನೆಯನ್ನು ಪಡೆಯಬಹುದು. ಇಲ್ಲಿ ತಿಂಗಳಿಗೆ 3300 ಜಿ.ಬಿ ಡೇಟಾ ಸಿಗಲಿದೆ ಇದರ ಜೊತೆಗೆ ಕರೆಗಳನ್ನು ಉಚಿತವಾಗಿ ಪಡೆಯಲಿದ್ದೀರಿ. ಮಾಸಿಕ ರಿಚಾರ್ಜ್ ಮಾಡಲು ಮರೆಯುತ್ತೀರಿ ಅಥವಾ ಅದೊಂದು ತಲೆನೋವು ಎಂದೆನಿಸಿದರೆ ಆಗ ನಿಮಗೆ ಆರು ತಿಂಗಳುಗಳ ಅಥವಾ ಒಂದು ವರ್ಷದ ರಿಚಾರ್ಜ್ ಅನ್ನು ಒಂದೇ ಬಾರಿ ಮಾಡುವ ಆಯ್ಕೆ ಇದೆ. 3000 ರೂಪಾಯಿಗಳ ರಿಚಾರ್ಜ್ ಮಾಡಿದಾಗ ಈ ಸಮಸ್ಯೆಯಿಂದ ಮುಕ್ತರಾಗಬಹುದು. ಜಿಎಸ್‌ಟಿ ಶುಲ್ಕವನ್ನು ಇದರಲ್ಲಿ ಸೇರಿಸಲಾಗಿಲ್ಲ. ನೀವು 18% ಜಿ ಎಸ್ ಟಿ ಮತ್ತು ಇನ್ಟಾಲೇಷನ್ ಚಾರ್ಜ್ 500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

Airtel Broadband ಇಂಟರ್ ನೆಟ್ ಸ್ಪೀಡ್:

ಈಗ ಜನರಿಗೆ ಮುಖ್ಯವಾಗಿ ಬೇಕಾಗಿರುವುದು ಇಂಟರ್ ನೆಟ್ ನ ಸ್ಪೀಡ್. ಈ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಬಳಕೆದಾರರು 10 Mbps ವೇಗದೊಂದಿಗೆ ರೂಟರ್ ಅನ್ನು ಪಡೆಯುತ್ತಾರೆ. ತಿಂಗಳ ಡೇಟಾ ಮುಗಿದ ಮೇಲೆ ಕಡಿಮೆ ಸ್ಪೀಡ್ ನಲ್ಲಿ ಳಕೆದಾರರು ಅನಿಯಮಿತ ಡೇಟಾದ ಪ್ರಯೋಜನವನ್ನು ಪಡೆಯಬಹುದು.

advertisement

Leave A Reply

Your email address will not be published.